ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೆಚ್ಚಿದ ಬಿಸಿಲಿನ ಧಗೆ: ಹೈರಾಣಾದ ಜನ, ಇನ್ನು ಹೆಚ್ಚಾಗುವ ಸಾಧ್ಯತೆ !

ಈಗಂತು ಬಿಸಿಲು ಬೆಂಕಿ ರೂಪ ತಾಳಿದೆ. ಚತ್ರಿ ಇಲ್ಲದೆ ಹೊರ ಹೊಗದಂತಾಗಿದೆ. ಹವಮಾನ ವೈಪರಿತ್ಯದಿಂದ ವಾಡಿಕೆಗಿಂತ ಮೊದಲೆ ಸುಡುತ್ತಿರುವ ಬಿಸಿಲು ಮಾರ್ಚ್‌ ನಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
03:26 PM Feb 21, 2024 IST | Ashitha S

ಬೆಂಗಳೂರು: ಈಗಂತು ಬಿಸಿಲು ಬೆಂಕಿ ರೂಪ ತಾಳಿದೆ. ಚತ್ರಿ ಇಲ್ಲದೆ ಹೊರ ಹೊಗದಂತಾಗಿದೆ. ಹವಮಾನ ವೈಪರಿತ್ಯದಿಂದ ವಾಡಿಕೆಗಿಂತ ಮೊದಲೆ ಸುಡುತ್ತಿರುವ ಬಿಸಿಲು ಮಾರ್ಚ್‌ ನಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

Advertisement

ಬಿಸಿಲಿನ ಝಳ ತಡೆಯದ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಮೊಡಗಳಿಲ್ಲ, ತಂಗಾಳಿಯ ಸುದ್ದಿಯೆ ಇಲ್ಲ ಇದರಿಂದಾಗಿ ಬಿಸಿಲಿನ ಝಳ ಹೆಚ್ಚುತ್ತಲೆ ಇದೆ. ನಿಮಗೆಲ್ಲಾ ತಿಳಿದಿರುವ ಹಾಗೆ ಮಾರ್ಚ್‌, ಎಪ್ರಿಲ್‌ ನಲ್ಲಿ ಆರಂಭವಾಗ ಬೇಕಿದ್ದ ಬೇಸಿಗೆ ವಾಡಿಕೆ ಗಿಂತ ಮುನ್ನವೆ ತನ್ನ ರೌದ್ರತೆಯನ್ನು ತೋರಿದೆ ಆದ್ದರಿಂದ ಈ ಬಾರಿ 4 ತಿಂಗಳ ಬೇಸಿಗೆ ಇರಲಿದೆ ಹಾಗೂ ಮಾರ್ಚ್ನಲ್ಲಿ ಇನ್ನಷ್ಟು ಬೇಗೆ ಹೆಚ್ಚುವ ಸಂಭವವಿದೆ ಎಂದು ಹೇಳಲಾಗಿದೆ.

ಕಳೆದ ವರ್ಷದಿಂದ ಹವಮಾನದಲ್ಲಿ ಅಸಮತೋಲನ ಉಂಟಾಗಿದ್ದು ಬಹಳಷ್ಟು ಬದಲಾವಣೆಗೂ ಕಾರಣವಾಗಿದೆ.ದಕ್ಷಿಣ ಕರ್ನಾಟಕಕ್ಕಿಂತ ಹೆಚ್ಚು ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಬೇಗೆ ತಾಳಲಾರದಂತಾಗಿದೆ.ಬಿಸಿಲು ನಾಡು ಎಂದೆ ಕರೆಯಲ್ಪಡುವ ರಾಯಚೂರು, ಅಲ್ಲದೆ ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಕೊಪ್ಪಳ, ಹಾವೇರಿ, ದಾವಣಗೆರೆ,ಚಿತ್ರದುರ್ಗದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ.

Advertisement

ಪ್ರತಿ ವರ್ಷವೂ ಉತ್ತರ ಕರ್ನಾಟಕ,ಆಂಧ್ರ ಮತ್ತು ತೆಲಂಗಾಣದಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿದದ್ದು ಶಾಖ ತರಂಗ(ಹೀಟ್‌ ವೇವ್) ಉಂಟಾಗಿತ್ತು. ಈ ಬಾರಿ ಕೂಡ ಅದೇ ಪರಿಸ್ಥಿತಿ ಬಂದಿದ್ದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಮಂಗಳವಾರ ಕಲುಬರುಗಿಯಲ್ಲಿ 36.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಶಿವಮೊಗ್ಗ,ಮಂಡ್ಯ,ಬೀದರ್‌,ಕೊಪ್ಪಳ,ವಿಜಯನಗರ,ಗದಗ,ರಾಯಚೂರು ಹಾಗೂ ದಾವಣಗೆರೆಯಲ್ಲಿ ಸರಾಸರಿ 34-35ಡಿಗ್ರಿ, ಬೆಂಗಳೂರು, ಚಿತ್ರದುರ್ಗ, ಹಾಸನ,ಬೆಳಗಾವಿ,ಹಾವೇರಿ,ಧಾರವಾಡ ಮತ್ತು ಮೈಸೂರು ಸೇರಿ ಇತರ ಜಿಲ್ಲೆಗಳಲ್ಲಿ ಸರಾಸರಿ 33-34 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

Advertisement
Tags :
GOVERNMENTindiaKARNATAKALatestNewsLatetsNewsನವದೆಹಲಿಬೆಂಗಳೂರು
Advertisement
Next Article