For the best experience, open
https://m.newskannada.com
on your mobile browser.
Advertisement

ಬೋರ್ಡ್ ಪರೀಕ್ಷೆಯಲ್ಲಿ ಭರ್ಜರಿ ಕಾಪಿ ಹೊಡೆದ ವಿದ್ಯಾರ್ಥಿಗಳು : ವಿಡಿಯೋ ವೈರಲ್

ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮಾಸ್ ಕಾಪಿ ಹೊಡೆದ ವಿಡಿಯೋ ಭಾರಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
09:16 AM Mar 07, 2024 IST | Ashitha S
ಬೋರ್ಡ್ ಪರೀಕ್ಷೆಯಲ್ಲಿ ಭರ್ಜರಿ ಕಾಪಿ ಹೊಡೆದ ವಿದ್ಯಾರ್ಥಿಗಳು   ವಿಡಿಯೋ ವೈರಲ್

ವದೆಹಲಿ: ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮಾಸ್ ಕಾಪಿ ಹೊಡೆದ ವಿಡಿಯೋ ಭಾರಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.

Advertisement

ಹರಿಯಾಣದ ನುಹ್ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ಭಾರಿ ದೊಡ್ಡದಾದ ವಂಚನೆ ಬೆಳಕಿಗೆ ಬಂದಿದೆ. ಶಾಲಾ ಕಟ್ಟಡ ಹತ್ತಿ ಹೊರಗಿನವರು ಕಾಪಿ ಚೀಟಿ ನೀಡಿದ್ದು, ವೀಡಿಯೊ ವೈರಲ್ ಆಗಿದೆ. ಈ ಘಟನೆಯ ವಿಡಿಯೋವನ್ನು ಪತ್ರಕರ್ತ ಪಿಯೂಷ್ ರಾಯ್ ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿರುವ ದೃಶ್ಯಗಳ ಪ್ರಕಾರ, ಪರೀಕ್ಷೆ ಪ್ರಾರಂಭವಾದ ಸ್ವಲ್ಪ ಸಮಯದ ನಂತರ, ಹಲವಾರು ಜನರು ಕಟ್ಟಡದ ಗೋಡೆಗಳ ಮೇಲೆ ಹತ್ತಲು ಪ್ರಾರಂಭಿಸಿದರು ಮತ್ತು ಪರೀಕ್ಷಾರ್ಥಿಗಳಿಗೆ ಸಹಾಯ ಮಾಡಲು ತರಗತಿಯೊಳಗೆ ಚೀಟಿಗಳನ್ನು ಎಸೆದರು.

Advertisement

ಆರ್‌ಐಎ ಬೋರ್ಡ್ 10 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 27 ರಿಂದ ಪ್ರಾರಂಭವಾಗಿದ್ದು, ಇದು ಮಾರ್ಚ್ 26, 2024 ರಂದು ಕೊನೆಗೊಳ್ಳುತ್ತದೆ. ಅದೇ ಸಮಯದಲ್ಲಿ, 12 ನೇ ಬೋರ್ಡ್ ಪರೀಕ್ಷೆ ಫೆಬ್ರವರಿ 27 ರಿಂದ ಏಪ್ರಿಲ್ 2 ರವರೆಗೆ ನಡೆಯಲಿದೆ. ನಕಲು ಮಾಡುವ ವಿಚಾರ ತಿಳಿದ ನಂತರವೂ ಹತ್ತಿರದಲ್ಲಿ ಬೀಡುಬಿಟ್ಟಿರುವ ಪೊಲೀಸ್ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

Advertisement
Tags :
Advertisement