For the best experience, open
https://m.newskannada.com
on your mobile browser.
Advertisement

ಹೆಸರುಕಾಳು ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಗ್ರೀನ್ ಗ್ರಾಂ ಅಥವಾ ಮೂಂಗ್ ದಲ್ ಎಂದು ಕರೆಯಲ್ಪಡುವ ಹೆಸರುಕಾಳು ಭಾರತದ ಪ್ರಮುಖ ಬೆಳೆ ಕಾಳು ಬೆಳೆಯಲ್ಲಿ ಒಂದಾಗಿದೆ. ಭಾರತ ಸೇರಿದಂತೆ ಏಶಿದಾದ್ಯಂತ ಇದನ್ನ ವ್ಯಾಪಕವಾಗಿ ಬಳಸಲಾಗುತ್ತದೆ.
11:00 AM Nov 30, 2023 IST | Ashika S
ಹೆಸರುಕಾಳು ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಗ್ರೀನ್ ಗ್ರಾಂ ಅಥವಾ ಮೂಂಗ್ ದಾಲ್ ಎಂದು ಕರೆಯಲ್ಪಡುವ ಹೆಸರುಕಾಳು ಭಾರತದ ಪ್ರಮುಖ ಬೆಳೆ ಕಾಳು ಬೆಳೆಯಲ್ಲಿ ಒಂದಾಗಿದೆ. ಭಾರತ ಸೇರಿದಂತೆ ಏಶಿದಾದ್ಯಂತ ಇದನ್ನ ವ್ಯಾಪಕವಾಗಿ ಬಳಸಲಾಗುತ್ತದೆ.

Advertisement

ಈ ಹೆಸರು ಕಾಳು ಸಸ್ಯಹಾರಿ ಜನರಿಗೆ ಉತ್ತಮವಾದ ಪ್ರೋಟೀನ್ ಅನ್ನು ಒದಗಿಸುತ್ತದೆ. ಉತ್ತಮ ಪ್ರೊಟೀನ್ ಭರಿತ ಆಹಾರವಾಗಿರುವ ಹೆಸರುಕಾಳನ್ನು ಕಿಚಿಡಿ ರೂಪದಲ್ಲಿ ಉತ್ತರ ಭಾರತದಲ್ಲಿ ಸೇವಿಸುತ್ತಾರೆ. ಹೆಚ್ಚಾಗಿ ಈ ಕಿಚಿಡಿಯನ್ನು ಅನಾರೋಗ್ಯವಾದಾಗ ಅಥವಾ ವಯಸ್ಸಾದ ಜನರಿಗೆ ಶಿಫಾರಸು ಮಾಡಲಾಗುತ್ತದೆ ಏಕೆಂದರೆ ಇದು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ.

ಹೆಸರುಕಾಳು ಬೇಸಾಯಕ್ಕೆ ಹವಾಮಾನ ಪರಿಸ್ಥಿತಿ: ಹೆಸರುಕಾಳು ಬೇಸಾಯಕ್ಕೆ ಉತ್ತಮ ಹವಾಮಾನ ಪರಿಸ್ಥಿತಿಯು ಬೆಚ್ಚಗಿನ ಆರ್ದ್ರತೆ ಬೇಕಾಗುತ್ತದೆ. ಸಾಮಾನ್ಯವಾಗಿ ಮಾರ್ಚ್ ನಿಂದ ಜೂನ್ ಅವಧಿಯು ಹೆಚ್ಚಿನ ತಾಪಮಾನ ಮತ್ತು ಕಡಿಮೆ ಆದ್ರತೆಯನ್ನು ಹೊಂದಿರುತ್ತದೆ. ಉತ್ತರ ಭಾರತದಲ್ಲಿ ಹೆಸರುಕಾಳನ್ನು ಬೆಚ್ಚಗಿನ ಕಾಲ ಅಥವಾ ಖಾರಿಫ್ ಋತುವಿನಲ್ಲಿ ಬೆಳೆಸಲಾದರೆ ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲಿ ಬೆಳೆಸಲಾಗುತ್ತದೆ.

Advertisement

ಹೆಸರುಕಾಳು ಬೆಳೆಗೆ ಮಣ್ಣಿನ ಅವಶ್ಯಕತೆ : ಹೆಸರುಕಾಳನ್ನು ಅಪಕರ್ಷಣೆಯಲ್ಲಿ ಮಣ್ಣಿನಲ್ಲಿ ಬೆಳೆಸಬಹುದು. ಉತ್ತರ ಭಾರತದ ಕೆಂಪು ಮಣ್ಣಿನಲ್ಲಿ ಹಾಗೂ ಕಪ್ಪು ಹತ್ತಿ ಮಣ್ಣಿನಲ್ಲಿ ಹೆಸರುಕಾಳನ್ನು ಉತ್ತಮವಾಗಿ ಬೆಳೆಸಬಹುದು. ಚೆನ್ನಾಗಿ ಬರೆದು ಹೋದ ಲೋಮ್ ಮಣ್ಣು ಹಾಗೂ ಮರಳು ಮಿಶ್ರಿತ ಮಣ್ಣು ಹೆಸರುಬೇಳೆ ಬೇಸಾಯಕ್ಕೆ ಉತ್ತಮ.

ಹೆಸರುಬೇಳೆ ಬೇಸಾಯಕ್ಕೆ ನೀರಾವರಿ: ಬಿತ್ತನೆ ಮಾಡಿದ ಮೂರನೇ ದಿನಕ್ಕೆ ನೀರಾವರಿಯನ್ನು ಪ್ರಾರಂಭಿಸಬೇಕು. ಹವಾಮಾನ ಪರಿಸ್ಥಿತಿ ಮತ್ತು ಮಣ್ಣಿನ ಪ್ರಕಾರವನ್ನು ಅವಲಂಬಿಸಿ ಆರರಿಂದ ಒಂಬತ್ತು ದಿನಗಳ ಮಧ್ಯಂತರದಲ್ಲಿ ನೀರಾವರಿ ಮಾಡಬೇಕು. ಸಸ್ಯದ ಬೆಳವಣಿಗೆ ಎಲ್ಲಾ ಹಂತಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸಬೇಕು.

ಹೆಸರುಕಾಳಿನ ಕೊಯ್ಲು : 85ರಷ್ಟು ಕಾಯಿಗಳು ಸಂಪೂರ್ಣವಾಗಿ ಮಾಗಿದ ಬೆಳೆಯು ಕೊಯ್ಲು ಮಾಡಲು ಉತ್ತಮ ಸಮಯ.

ಹೆಸರುಕಾಳಿನ ಆರೋಗ್ಯ ಪ್ರಯೋಜನಗಳು : ಹೆಸರು ಕಾಳು ಪ್ರೋಟಿನ್ ಉತ್ತಮವಾಗಿದ್ದು ಮನುಷ್ಯನ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಡಲು ಸಹಾಯ ಮಾಡುತ್ತದೆ.

# ಹೆಸರು ಕಾಳು ತೂಕವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ

# ಹೆಸರುಬೇಳೆಯಲ್ಲಿ ಫೈಬರ್ ಮತ್ತು ಕಬ್ಬಿಣ ಅಂಶ ಉತ್ತಮವಾಗಿದೆ

# ಹೆಸರು ಬೇಳೆ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

# ಮಧುಮೇ ದ ಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ

# ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

# ಗರ್ಭಿಣಿ ಮಹಿಳೆಯರಿಗೆ ಉತ್ತಮ

Advertisement
Tags :
Advertisement