For the best experience, open
https://m.newskannada.com
on your mobile browser.
Advertisement

ಮಂಗಳೂರು: ಕೆಎಂಸಿ ಆಸ್ಪತ್ರೆಯಲ್ಲಿ ಆದ್ಯಪ್ರವರ್ತಕ ರೀತಿಯ ಅಪಾಯದ ಗರ್ಭಾವಸ್ಥೆಯ ಆರೈಕೆ

ಆರ್‌ಎಚ್ ಫ್ಯಾಕ್ಟರ್ ಅಲ್ಲೊಇಮ್ಯುನೈಸೇಷನ್‌ನಿಂದ ಉಂಟಾಗುವ ಉನ್ನತ ಅಪಾಯದ ಗರ್ಭಾವಸ್ಥೆಯ ಸ್ಥಿತಿಗಳು ತಾಯಂದಿರಾಗುವುದನ್ನು ನಿರೀಕ್ಷಿಸುತ್ತಿರುವ ಮಹಿಳೆಯರು ಮತ್ತು ಅವರ ಶಿಶುಗಳಿಗೆ ಗಮನಾರ್ಹ ಸವಾಲುಗಳನ್ನು ಉಂಟು ಮಾಡುತ್ತವೆ. ಕೆಎಂಸಿ ಆಸ್ಪತ್ರೆಯಲ್ಲಿನ ಇತ್ತೀಚಿನ ಪ್ರಕರಣವೊಂದರಲ್ಲಿ ಇದೇ ರೀತಿಯ ಸಂಕೀರ್ಣ ತೊಂದರೆಯನ್ನು ತನ್ನ ಮೂರನೇ ಗರ್ಭಾವಸ್ಥೆಯಲ್ಲಿ ಎದುರಿಸುತ್ತಿದ್ದ ಮಹಿಳೆ ಯಶಸ್ವಿಯಾಗಿ ತಾಯಿಯಾಗಲು ವಿಶೇಷ ತಜ್ಞರ ನಡುವಿನ ಸಹಭಾಗಿತ್ವ ದಾರಿ ಮಾಡಿಕೊಟ್ಟಿದೆ.
05:11 PM Apr 03, 2024 IST | Ashitha S
ಮಂಗಳೂರು  ಕೆಎಂಸಿ ಆಸ್ಪತ್ರೆಯಲ್ಲಿ ಆದ್ಯಪ್ರವರ್ತಕ ರೀತಿಯ ಅಪಾಯದ ಗರ್ಭಾವಸ್ಥೆಯ ಆರೈಕೆ

ಮಂಗಳೂರು: ಆರ್‌ಎಚ್ ಫ್ಯಾಕ್ಟರ್ ಅಲ್ಲೊಇಮ್ಯುನೈಸೇಷನ್‌ನಿಂದ ಉಂಟಾಗುವ ಉನ್ನತ ಅಪಾಯದ ಗರ್ಭಾವಸ್ಥೆಯ ಸ್ಥಿತಿಗಳು ತಾಯಂದಿರಾಗುವುದನ್ನು ನಿರೀಕ್ಷಿಸುತ್ತಿರುವ ಮಹಿಳೆಯರು ಮತ್ತು ಅವರ ಶಿಶುಗಳಿಗೆ ಗಮನಾರ್ಹ ಸವಾಲುಗಳನ್ನು ಉಂಟು ಮಾಡುತ್ತವೆ. ಕೆಎಂಸಿ ಆಸ್ಪತ್ರೆಯಲ್ಲಿನ ಇತ್ತೀಚಿನ ಪ್ರಕರಣವೊಂದರಲ್ಲಿ ಇದೇ ರೀತಿಯ ಸಂಕೀರ್ಣ ತೊಂದರೆಯನ್ನು ತನ್ನ ಮೂರನೇ ಗರ್ಭಾವಸ್ಥೆಯಲ್ಲಿ ಎದುರಿಸುತ್ತಿದ್ದ ಮಹಿಳೆ ಯಶಸ್ವಿಯಾಗಿ ತಾಯಿಯಾಗಲು ವಿಶೇಷ ತಜ್ಞರ ನಡುವಿನ ಸಹಭಾಗಿತ್ವ ದಾರಿ ಮಾಡಿಕೊಟ್ಟಿದೆ.

Advertisement

ತಾಯಿಯಾಗಲಿರುವ ಮಹಿಳೆ ಆರ್‌ಎಚ್ ನೆಗೆಟಿವ್ ರಕ್ತದ ಗುಂಪು ಮತ್ತು ತಂದೆಯಾದವರು ಆರ್‌ಎಚ್ ಪಾಸಿಟಿವ್ ರಕ್ತದ ಗುಂಪು ಹೊಂದಿದ್ದಲ್ಲಿ ಆರ್‌ಎಚ್ ಇನ್‌ಕಂಪ್ಯಾಟಿಬಿಲಿಟಿ ತೊಂದರೆ ಕಾಣಿಸಿಕೊಳ್ಳುತ್ತದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರಿ ರೊಗ ಸಲಹಾತಜ್ಞರಾದ ಡಾ. ಸಮೀನ ಎಚ್. ಅವರು ಈ ಕುರಿತು ವಿವರಿಸಿ, ʼʼಆರ್‌ಎಚ್ ಫ್ಯಾಕ್ಟರ್ ಅಲ್ಲೊಇಮ್ಯುನೈಸೇಷನ್‌ನಿಂದ ಮುಂದಿನ ಗರ್ಭಾವಸ್ಥೆಗಳು ಸಂಕೀರ್ಣ ತೊಂದರೆಗಳಿಗೆ ಒಳಗಾಗಬಹುದು. ಇದರಲ್ಲಿ ತಾಯಿಯ ರೋಗನಿರೋಧಕ ವ್ಯವಸ್ಥೆ ಭ್ರೂಣದ ಆರ್‌ಎಚ್ ಪಾಸಿಟಿವ್ ರಕ್ತಕ್ಕೆ ವಿರುದ್ಧವಾದ ಪ್ರತಿಕಾಯಗಳನ್ನು (ಆ್ಯಂಟಿಬಾಡೀಸ್)ಉತ್ಪಾದಿಸುತ್ತದೆ’’ ಎಂದರು.

ರಮ್ಯ (ಹೆಸರು ಬದಲಾಯಿಸಲಾಗಿದೆ) ತಾಯಿಯಾಗುವ ಹಾದಿಯಲ್ಲಿದ್ದು, ತಮ್ಮ ಮೂರನೇ ಗರ್ಭಾವಸ್ಥೆಯಲ್ಲಿ ತೀವ್ರ ರೀತಿಯ ತೊಂದರೆಗಳನ್ನು ಎದುರಿಸಿದ್ದರು. ಆಕೆಯ ಹಿಂದಿನ ಗರ್ಭಾವಸ್ಥೆಯಲ್ಲಿ ಶಿಶುವಿಗೆ ತಲೆಯೊಳಗೆ ರಕ್ತಸ್ರಾವವಾಗಿದ್ದು, ಇದರಿಂದ ಸಂಕೀರ್ಣತೆಗಳಿಗೆ ದಾರಿಯಾಗಿ ಇದರಿಂದ ಮಗುವನ್ನು ಕಳೆದುಕೊಳ್ಳಬೇಕಾಯಿತು. ಮುಂದೆ ಮತ್ತಷ್ಟು ಸವಾಲುಗಳ ನಿರೀಕ್ಷೆಯಲ್ಲಿ ರಮ್ಯ ಅವರು ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ಮೇಲ್ವಿಚಾರಣೆಗಾಗಿ ಸೇರ್ಪಡೆಯಾಗಿದ್ದರು.

Advertisement

ಡಾ. ಸಮೀನ ಮತ್ತು ಅವರ ತಂಡ ರಮ್ಯ ಅವರ ಗರ್ಭಾವಸ್ಥೆಯನ್ನು ಸೂಕ್ಷö್ಮ ರೀತಿಯಲ್ಲಿ ಗಮನಿಸುತ್ತಿದ್ದರು. ಇದಕ್ಕಾಗಿ ಪದೇ ಪದೇ ರಕ್ತ ಪರೀಕ್ಷೆಗಳನ್ನು ನಡೆಸುತ್ತಿದ್ದರು. 30ನೇ ವಾರದವರೆಗೆ ಫಲಿತಾಂಶಗಳು ನಕಾರಾತ್ಮಕವಾಗಿದ್ದವು. ಆದರೆ, 32ನೇ ವಾರದಲ್ಲಿ ಆಕೆಯ ಐಸಿಟಿ(ಇಂಡೈರೆಕ್ಟ್ ಕೂಂಬ್ಸ್ ಟೆಸ್ಟ್)ನಲ್ಲಿ ಉನ್ನತ ಸಾಂದ್ರತೆಯ ಜೊತೆಗೆ ಸಕಾರಾತ್ಮಕ ಫಲಿತಾಂಶ ಕಂಡುಬAದಿದ್ದು, ಇದರಿಂದ ಭ್ರೂಣಕ್ಕೆ ರಕ್ತದ ಕೊರತೆ(ಫೀಟಲ್‌ಅನಿಮಿಯಾ) ತೊಂದರೆ ಉಂಟಾಗಿತ್ತು. ``ಫೀಟಲ್‌ಅನಿಮಿಯಾ ಗಮನಾರ್ಹ ಅಪಾಯ ಉಂಟುಮಾಡಬಹುದಾಗಿದ್ದು, ಎಚ್ಚರಿಕೆಯ ಯೋಜನೆ ಅವಶ್ಯಕವಾಗಿತ್ತು’’ ಎಂದು ಡಾ. ಸಮೀನ ಹೇಳಿದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಭ್ರೂಣ ವೈದ್ಯಕೀಯ ಸಲಹಾ ತಜ್ಞರಾದ ಡಾ. ಪುಂಡಲೀಕ ಬಾಳಿಗ ಅವರು ಇಂಟ್ರಾಯೂಟರೀನ್ ಟ್ರಾನ್ಸ್ಫ್ಯುಷನ್(ಗರ್ಭಾಶಯದ ಒಳಗಿನ ವರ್ಗಾವಣೆ –ಐಯುಟಿ) ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ, ``ತೀವ್ರ ರೀತಿಯ ಫೀಟಲ್‌ಅನಿಮಿಯಾವನ್ನು ನಿರ್ವಹಿಸುವುದಕ್ಕಾಗಿ ನಡೆಸುವ ವಿಶೇಷ ಕಾರ್ಯವಿಧಾನ ಐಯುಟಿ ಆಗಿರುತ್ತದೆ. ರಮ್ಯ ಅವರ ಪ್ರಕರಣದಲ್ಲಿ ಭ್ರೂಣದಲ್ಲಿನ ಹಿಮೋಗ್ಲೊಬಿನ್ ಮಟ್ಟ ತೀವ್ರ ರೀತಿಯಲ್ಲಿ ಕಡಿಮೆಯಾಗುತ್ತಾ ಸಾಗಿದ್ದು, ಶಿಶುವಿನ ಯೋಗಕ್ಷೇಮವನ್ನು ಸುರಕ್ಷಿತವಾಗಿರಿಸಲು ಸಮಯಕ್ಕೆ ಸರಿಯಾದ ವೈದ್ಯಕೀಯ ಮಧ್ಯಪ್ರವೇಶ ಅಗತ್ಯವಾಗಿತ್ತು’’ ಎಂದರು.

ಕೆಎAಸಿ ಆಸ್ಪತ್ರೆಯ ರಕ್ತ ವರ್ಗಾವಣೆ ವಿಭಾಗ ಮತ್ತು ಇಮ್ಯುನೊಹಿಮಟಾಲಜಿ ವಿಭಾಗ ಕ್ಷಿಪ್ರಗತಿಯಲ್ಲಿ ಒ ನೆಗೆಟಿವ್ ರ‍್ರೇಡಿಯೇಟೆಡ್ ಮತ್ತು ಲ್ಯೂಕೊಸೈಟ್ ಡಿಪ್ಲೀಟೆಡ್ ಪ್ಯಾಕ್ಡ್ ಕೆಂಪು ರಕ್ತ ಕಣಗಳನ್ನು ಈ ಕಾರ್ಯವಿಧಾನಕ್ಕಾಗಿ ಸಂಗ್ರಹಿಸಿತ್ತು. ಡಾ. ಬಾಳಿಗ ಮತ್ತು ಅವರ ತಂಡ ಸೂಕ್ಷö್ಮ ರೀತಿಯಲ್ಲಿ ಗರ್ಭಾಶಯದ ಒಳಗಿನ ರಕ್ತ ವರ್ಗಾವಣೆಯನ್ನು ನಡೆಸಿತ್ತಲ್ಲದೆ, ನಿಖರತೆ ಮತ್ತು ರೋಗಿಯ ಸುರಕ್ಷತೆಯ ಖಾತ್ರಿ ಮಾಡಿಕೊಂಡಿತ್ತು.

ಸಾಮಾನ್ಯ ಅವಧಿಗೂ ಮುನ್ನ ನಡೆಯುವ ಹೆರಿಗೆಯಲ್ಲಿ ಕಂಡುಬರುವ ಅಪಾಯಗಳನ್ನು ದಾಟುವುದು ಮತ್ತು 35ನೇ ವಾರದವರೆಗೆ ಗರ್ಭಾವಸ್ಥೆಯನ್ನು ಮುಂದೂಡುವುದು ಶಿಶುವಿನ ಯೋಗಕ್ಷೇಮಕ್ಕಾಗಿ ಬಹಳ ಮುಖ್ಯವಾಗಿತ್ತು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನವಜಾತ ಶಿಶು ಸಲಹಾತಜ್ಞರು ಮತ್ತು ಮಕ್ಕಳ ತಜ್ಞರಾದ ಡಾ. ಮರಿಯೊ ಜೆ. ಬುಕೆಲೊ ಅವರು ಈ ಕುರಿತು ಮಾತನಾಡಿ, ``ಜನ್ಮದ ನಂತರ ಶಿಶು ಬಹಳ ಅನಿಮಿಕ್ ಅಂದರೆ ರಕ್ತದ ಕೊರತೆಯಿಂದ ಬಳಲಿತ್ತು. ಸಾಮಾನ್ಯ ನವಜಾತ ಶಿಶುಗಳಿಗಿಂತಲೂ ಅದರ ಹಿಮೋಗ್ಲೊಬಿನ್ ಮಟ್ಟ ಬಹಳ ಕಡಿಮೆ ಇತ್ತು. ಶಿಶುವಿನ ಹಿಮೊಗ್ಲೊಬಿನ್ ಮತ್ತು ಬಿಲಿರೂಬಿನ್ ಮಟ್ಟಗಳನ್ನು ಸುಧಾರಿಸಲು ಮತ್ತು ಆರೋಗ್ಯಕರ ಚೇತರಿಕೆಗೆ ಅವಕಾಶ ಮಾಡಿಕೊಡಲು ಎರಡು ಬಾರಿ ರಕ್ತ ಕಣಗಳ ವರ್ಗಾವಣೆಯನ್ನು ನಡೆಸಲಾಗಿತ್ತು’’ ಎಂದರು.

ರಮ್ಯ ಅವರ ಗರ್ಭಾವಸ್ಥೆಯಲ್ಲಿನ ಯಶಸ್ವಿ ಫಲಿತಾಂಶವು ಆರ್‌ಎಚ್ ಫ್ಯಾಕ್ಟರ್ ಅಲ್ಲೊಇಮ್ಯುನೈಸೇಷನ್‌ನ ಸವಾಲುಗಳನ್ನು ದಾಟುವಲ್ಲಿ ಉನ್ನತ ವೈದ್ಯಕೀಯ ಮಧ್ಯ ಪ್ರವೇಶಗಳು ಮತ್ತು ಬಹುವಿಶೇಷತೆಯ ವೈದ್ಯಕೀಯ ವಿಭಾಗಗಳ ನಡುವಿನ ಸಹಭಾಗಿತ್ವದ ಶಕ್ತಿಯನ್ನು ಪ್ರದರ್ಶಿಸಿದೆ. ಸಮರ್ಪಿತ ಆರೈಕೆ ಮತ್ತು ಪರಿಣತಿಯ ಮೂಲಕ ರಮ್ಯ ಮತ್ತು ಆಕೆಯ ಶಿಶು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಜಯ ಸಾಧಿಸಿದ್ದಲ್ಲದೆ, ಇದೇ ರೀತಿಯ ಪರಿಸ್ಥಿತಿಗಳನ್ನು ಎದುರಿಸುವ ಮತ್ತು ತಾಯಂದಿರಾಗುವ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಭರವಸೆಯನ್ನು ತುಂಬಿರುತ್ತಾರೆ.

New Project

ಮAಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ಧಿಕಿ ಅವರು ಉನ್ನತ ಅಪಾಯದ ಗರ್ಭಾವಸ್ಥೆಗಳನ್ನು ನಿಭಾಯಿಸುವಲ್ಲಿ ಬಹುವಿಶೇಷತೆಯ ವೈದ್ಯಕೀಯ ಸೇವೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ, ``ಸುರಕ್ಷಿತ ಹೆರಿಗೆ ಮತ್ತು ಸಂಕೀರ್ಣ ತೊಂದರೆಗಳನ್ನು ನಿಭಾಯಿಸುವ ಖಾತ್ರಿ ಮಾಡಿಕೊಳ್ಳುವಲ್ಲಿ ಪ್ರತಿ ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ. ವಿಶೇಷ ತಜ್ಞರ ನಡುವೆ ಸಹಭಾಗಿತ್ವವು ಸೂಕ್ತ ಯೋಜನೆ, ಸಮಯಕ್ಕೆ ಸರಿಯಾದ ಮಧ್ಯಪ್ರವೇಶ ಮತ್ತು ಪುನರ್ ಭರವಸೆಗಳ ಖಾತ್ರಿಯನ್ನು ಗರ್ಭಾವಸ್ಥೆಯ ಪ್ರಯಾಣದುದ್ದಕ್ಕೂ ನೀಡುತ್ತದೆ’’ ಎಂದರು.

Advertisement
Tags :
Advertisement