ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಪ್ರಾಪ್ತಗೆ ಅನ್ಯಕೋಮಿನ ಯುವಕನ ಕಿರುಕುಳ: ಠಾಣೆಗೆ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರು

ಅಪ್ರಾಪ್ತ ಬಾಲಕಿಗೆ ಅನ್ಯಕೋಮಿನ ಯುವಕ ಕಿರುಕುಳ ನೀಡಿದ್ದಕ್ಕಾಗಿ, ಯುವಕನ್ನು ತಮಗೆ ಒಪ್ಪಿಸಬೇಕು ಎಂದು ಹಿಂದೂ ಕಾರ್ಯಕರ್ತರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ದ. ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಗರ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪುತ್ತೂರು ಕಂಬಳ ವೀಕ್ಷಿಸಲು ತೆರಳುತ್ತಿದ್ದ ವೇಳೆ ಕಡಬ ಮೂಲದ ಶಾಕೀರ್ ಎಂಬಾತ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಆರೋಪಿ ಶಾಕೀರ್​ನನ್ನ ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
09:55 AM Jan 28, 2024 IST | Gayathri SG

ಮಂಗಳೂರು: ಅಪ್ರಾಪ್ತ ಬಾಲಕಿಗೆ ಅನ್ಯಕೋಮಿನ ಯುವಕ ಕಿರುಕುಳ ನೀಡಿದ್ದಕ್ಕಾಗಿ, ಯುವಕನ್ನು ತಮಗೆ ಒಪ್ಪಿಸಬೇಕು ಎಂದು ಹಿಂದೂ ಕಾರ್ಯಕರ್ತರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ದ. ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಗರ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪುತ್ತೂರು ಕಂಬಳ ವೀಕ್ಷಿಸಲು ತೆರಳುತ್ತಿದ್ದ ವೇಳೆ ಕಡಬ ಮೂಲದ ಶಾಕೀರ್ ಎಂಬಾತ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಆರೋಪಿ ಶಾಕೀರ್​ನನ್ನ ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಮತ್ತೊಂದೆಡೆ ಆಕ್ರೋಶಗೊಂಡಿರುವ ಹಿಂದೂ ಕಾರ್ಯಕರ್ತರು ಪುತ್ತೂರು ನಗರ ಠಾಣೆಗೆ ಮುತ್ತಿಗೆ ಹಾಕಿ ಆರೋಪಿ ಶಾಕೀರ್​ನನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. ಠಾಣೆಯ ಎದುರು ನೂರಾರು ಹಿಂದೂ ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಹಿಂದೂ ಮುಖಂಡ ಅರುಣ್ ಪುತ್ತಿಲ ಸ್ಥಳಕ್ಕಾಗಮಿಸಿ ಯುವಕರ ಸಮಾಧಾನ ಪಡಿಸಿದರು. ಸದ್ಯ ಆರೋಪಿ ಶಾಕೀರ್​ನನ್ನು ಬಂಧಿಸಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

Advertisement
Advertisement
Tags :
LatestNewsNewsKannadaಮಂಗಳೂರುಹಿಂದೂ ಕಾರ್ಯಕರ್ತರು
Advertisement
Next Article