For the best experience, open
https://m.newskannada.com
on your mobile browser.
Advertisement

ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಲಿರುವ ಪ್ರಧಾನಿ

ಇಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಗುಲಾಬಿ ಮರಳುಗಲ್ಲಿನಿಂದ ನಿರ್ಮಿಸಲಾದ  ಅಬುಧಾಬಿಯ ಮೊದಲ ಹಿಂದೂ ದೇವಾಲಯವನ್ನು ಉದ್ಘಾಟಿಸಲಿದ್ದಾರೆ.
09:23 AM Feb 14, 2024 IST | Ashika S
ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಲಿರುವ ಪ್ರಧಾನಿ

ಅಬುಧಾಬಿ: ಇಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಗುಲಾಬಿ ಮರಳುಗಲ್ಲಿನಿಂದ ನಿರ್ಮಿಸಲಾದ  ಅಬುಧಾಬಿಯ ಮೊದಲ ಹಿಂದೂ ದೇವಾಲಯವನ್ನು ಉದ್ಘಾಟಿಸಲಿದ್ದಾರೆ.

Advertisement

ಬೋಚಸನ್​ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ ಸ್ವಾಮಿನಾರಾಯಣ ದೇವಾಲಯವನ್ನು ನಿರ್ಮಿಸಿದೆ.

27 ಎಕರೆ ಪ್ರದೇಶದಲ್ಲಿ 108 ಅಡಿ ಎತ್ತರದ ಈ ದೇವಾಲಯವನ್ನು ವಾಸ್ತುಶಿಲ್ಪದ ಅದ್ಭುತವೆಂದು ಪರಿಗಣಿಸಲಾಗಿದೆ. ದೇವಾಲಯದ ಆಡಳಿತದ ಪ್ರಕಾರ, ಗಂಗಾ ಮತ್ತು ಯಮುನಾ ನದಿಗಳ ಪವಿತ್ರ ನೀರು ದೇವಾಲಯದ ಎರಡೂ ಬದಿಗಳಲ್ಲಿ ಹರಿಯುತ್ತದೆ, ಇದನ್ನು ಭಾರತದಿಂದ ಬೃಹತ್ ಪಾತ್ರೆಗಳಲ್ಲಿ ತರಲಾಗಿದೆ.

Advertisement

ದೇವಾಲಯದ ಮುಂಭಾಗ ಅಮೃತಶಿಲೆಯ ಕೆತ್ತನೆಯನ್ನು ಹೊಂದಿದ್ದು, ರಾಜಸ್ಥಾನ ಮತ್ತು ಗುಜರಾತ್​ನ ನುರಿತ ಕುಶಲಕರ್ಮಿಗಳಿಂದ ಕೆತ್ತನೆ ಕಾರ್ಯ ನಡೆದಿದ್ದು ಇದಕ್ಕಾಗಿ 25,000 ಕಲ್ಲುಗಳನ್ನು ಬಳಸಲಾಗಿದೆ.

ದೇವಸ್ಥಾನದ ಮುಖ್ಯಸ್ಥ ಸ್ವಾಮಿ ಬ್ರಹ್ಮವಿಹಾರಿದಾಸ್ ಮಾತನಾಡಿ, ಈ ದೇವಾಲಯದ ಮೂಲೆ ಮೂಲೆಯಲ್ಲಿ ಭಾರತದ ವೈಭವವಿದೆ. ಇಲ್ಲಿ ವಾರಾಣಸಿಯನ್ನು ಕೂಡ ನೋಡಬಹುದು. ಅಬುಧಾಬಿಯಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯವು 108 ಅಡಿಗಳು. ಇದರಲ್ಲಿ 40,000 ಘನ ಅಡಿ ಅಮೃತಶಿಲೆ, 1,80,000 ಘನ ಅಡಿ ಮರಳುಗಲ್ಲು, 18,00,000 ಇಟ್ಟಿಗೆಗಳನ್ನು ಬಳಸಲಾಗಿದೆ. ದೇವಸ್ಥಾನದಲ್ಲಿ 300 ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ.

ಅಯೋಧ್ಯೆಯ ರಾಮ ಮಂದಿರ ರೀತಿಯಲ್ಲೇ ಇಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

Advertisement
Tags :
Advertisement