ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಬುದಾಬಿಯಲ್ಲಿ ಹಿಂದೂ ದೇವಾಲಯ ಉದ್ಘಾಟನೆ: ಪರ್ಯಾಯ ಪುತ್ತಿಗೆ ಶ್ರೀಗಳ ಸಂದೇಶ

ಇಂದು ಅಬುದಾಬಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಸ್ವಾಮಿನಾರಾಯಣ ಮಂದಿರದ ಗೋಪುರಕ್ಕೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಭೂಮಿ ಪೂಜೆ ನಡೆಸಿದ್ದರು. ಇಂದು ನಡೆಯುವ ಕಾರ್ಯಕ್ರಮಕ್ಕೆ ಶ್ರೀಗಳಿಗೆ ವಿಶೇಷ ಆಹ್ವಾನ ಬಂದಿದ್ದು ಸದ್ಯ ಪರ್ಯಾಯ ಪೂಜಾವಿಧಿ ನಡೆಯುತ್ತಿರುವುದರಿಂದ ಶ್ರೀಗಳು ಭಾಗಿಯಾಗಿಲ್ಲ. ಯುಎಇಯಲ್ಲಿ ಮೊದಲ ಹಿಂದೂ ಮಂದಿರ ಉದ್ಘಾಟನೆಗೊಂಡಿರುವುದಕ್ಕೆ ಪರ್ಯಾಯ ಶ್ರೀ ಸುಗುಣೇಂದ್ರತೀರ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
04:36 PM Feb 14, 2024 IST | Gayathri SG

ಉಡುಪಿ: ಇಂದು ಅಬುದಾಬಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಸ್ವಾಮಿನಾರಾಯಣ ಮಂದಿರದ ಗೋಪುರಕ್ಕೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಭೂಮಿ ಪೂಜೆ ನಡೆಸಿದ್ದರು. ಇಂದು ನಡೆಯುವ ಕಾರ್ಯಕ್ರಮಕ್ಕೆ ಶ್ರೀಗಳಿಗೆ ವಿಶೇಷ ಆಹ್ವಾನ ಬಂದಿದ್ದು ಸದ್ಯ ಪರ್ಯಾಯ ಪೂಜಾವಿಧಿ ನಡೆಯುತ್ತಿರುವುದರಿಂದ ಶ್ರೀಗಳು ಭಾಗಿಯಾಗಿಲ್ಲ. ಯುಎಇಯಲ್ಲಿ ಮೊದಲ ಹಿಂದೂ ಮಂದಿರ ಉದ್ಘಾಟನೆಗೊಂಡಿರುವುದಕ್ಕೆ ಪರ್ಯಾಯ ಶ್ರೀ ಸುಗುಣೇಂದ್ರತೀರ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಗಲ್ಫ್ ನಲ್ಲಿ ಹಿಂದೂ ದೇವಾಲಯ ನಿರ್ಮಾಣ ಆಗಬೇಕೆಂಬ ಸಂಕಲ್ಪ ಇತ್ತು. ಈಗ ಸ್ವಾಮಿ ನಾರಾಯಣ ದೇವಸ್ಥಾನದ ಉದ್ಘಾಟನೆಯೊಂದಿಗೆ ಸಂಕಲ್ಪ ಸಹಕಾರವಾಗುತ್ತಿದೆ. ದೇವಾಲಯ ಉದ್ಘಾಟನೆಗೆ ಆಹ್ವಾನ ಬಂದಿತ್ತು. ಪರ್ಯಾಯ ದೀಕ್ಷೆಯಲ್ಲಿರುವುದರಿಂದ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ನಾನೇ ಶಂಕುಸ್ಥಾಪನೆ ಮಾಡಿದ್ದೆ. ಭಾರತೀಯರ ಪ್ರತಿಷ್ಠೆಯ ದೇಗುಲ ಇದಾಗಿದೆ. ಹಿಂದೂ ದೇವಾಲಯ ನಿರ್ಮಾಣಕ್ಕೆ ಜಾಗ ನೀಡಿ, ಎಲ್ಲ ರೀತಿಯಲ್ಲೂ ಸಹಕರಿಸಿದ ದುಬೈ ಹಾಗು ಅಬುದಾಬಿ ದೊರೆಗೆ ಗೌರವ ವಂದನೆಗಳು ಎಂದರು.

Advertisement

Advertisement
Tags :
LatestNewsNewsKannadaಅಬುದಾಬಿಉಡುಪಿ
Advertisement
Next Article