For the best experience, open
https://m.newskannada.com
on your mobile browser.
Advertisement

ಬೆಂಗಳೂರಿನ ಹೊಸಕೋಟೆಯಲ್ಲಿ ಹಿಟ್​ ಆ್ಯಂಡ್​ ರನ್

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ  ನಗರ ಹೊರವಲಯದ ಕೋಲಾರ ರೋಡ್​ನಲ್ಲಿ  ಹೋಗುತ್ತಿದ್ದ ಬೈಕ್​ಗೆ ಗುದ್ದಿ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ.
12:50 PM Feb 11, 2024 IST | Ashika S
ಬೆಂಗಳೂರಿನ ಹೊಸಕೋಟೆಯಲ್ಲಿ ಹಿಟ್​ ಆ್ಯಂಡ್​ ರನ್

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ  ನಗರ ಹೊರವಲಯದ ಕೋಲಾರ ರೋಡ್​ನಲ್ಲಿ  ಹೋಗುತ್ತಿದ್ದ ಬೈಕ್​ಗೆ ಗುದ್ದಿ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ.

Advertisement

ವಾಹನ ಗುದ್ದಿದ ಪರಿಣಾಮ ಬೈಕ್​ ಸವಾರ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿ, ಗಾಯಾಳುವಿನ ಮೆದುಳು ಹೊರಗೆ ಬಂದಿತ್ತು. ಸ್ಥಳಿಯರು ಕೂಡಲೆ ಆ್ಯಂಬುಲೇನ್ಸ್​​ನಲ್ಲಿ ಆಸ್ವತ್ರೆಗೆ ಸಾಗಿಸಿದ್ದಾರೆ.

ಮೊದಲು ಸರ್ಕಾರಿ ಆಸ್ವತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿಯ ಸಿಬ್ಬಂದಿ ಗಾಯಾಳುವಿನ ಕಂಡಿಷನ್ ಕ್ರಿಟಿಕಲ್ ಇದೆ ಚಿಕಿತ್ಸೆ ನೀಡಲು ಆಗಲ್ಲ ಎಂದು ವಾಪಸ್ ಕಳಿಸಿದ್ದರು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು. ಪ್ರಯತ್ನ ಪಡೋಣವೆಂದು ವೈದ್ಯ ಸುಪ್ರಿತ್ ಶಸ್ತ್ರ ಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ.

Advertisement

ವ್ಯಕ್ತಿಯ ಗುರುತು ಪತ್ತೆಯಾಗದಿದ್ದರು ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯ ಸುಪ್ರಿತ್ ಚಿಕಿತ್ಸೆ ನೀಡಿದ್ದಾರೆ.

ವೈದ್ಯನ ಕಾರ್ಯಕ್ಕೆ ಗಾಯಾಳುವಿನ ಕುಟುಂಬಸ್ಥರು ಮತ್ತು ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಗಾಯಾಳು ಚೇತರಿಸಿಕೊಳ್ಳುತ್ತಿದ್ದಾರೆ.

Advertisement
Tags :
Advertisement