For the best experience, open
https://m.newskannada.com
on your mobile browser.
Advertisement

ವಿಮಾನ ಪತನ : ಹಾಲಿವುಡ್ ಸ್ಟಾರ್ ನಟ, ಇಬ್ಬರು ಪುತ್ರಿಯರೂ ಮೃತ್ಯು

ಪೂರ್ವ ಕೆರಿಬಿಯನ್ ದ್ವೀಪದ ಬಳಿ ವಿಮಾನ ಪತನಗೊಂಡು ಸ್ಟಾರ್ ನಟ ಕ್ರಿಸ್ಟಿಯನ್ ಆಲಿವರ್ ಮತ್ತು ಅವರ ಇಬ್ಬರು ಪುತ್ರಿಯರು ಮೃತಪಟ್ಟಿದ್ದಾರೆ.
09:14 AM Jan 06, 2024 IST | Ramya Bolantoor
ವಿಮಾನ ಪತನ   ಹಾಲಿವುಡ್ ಸ್ಟಾರ್ ನಟ  ಇಬ್ಬರು ಪುತ್ರಿಯರೂ ಮೃತ್ಯು

 ಐಲ್ಯಾಂಡ್:  ಪೂರ್ವ ಕೆರಿಬಿಯನ್ ದ್ವೀಪದ ಬಳಿ ವಿಮಾನ ಪತನಗೊಂಡು ಸ್ಟಾರ್ ನಟ ಕ್ರಿಸ್ಟಿಯನ್ ಆಲಿವರ್ ಮತ್ತು ಅವರ ಇಬ್ಬರು ಪುತ್ರಿಯರು ಮೃತಪಟ್ಟಿದ್ದಾರೆ.

Advertisement

51 ವರ್ಷದ ನಟ ಸಣ್ಣ ವಿಮಾನದ ಮೂಲಕ ಸೇಂಟ್ ಲೂಸಿಯಾಗೆ ಹೋಗುತ್ತಿದ್ದಾಗ ಬೆಕ್ವಿಯಾ ಬಳಿಯ ಐಲ್ಯಾಂಡ್​​ ಬಳಿ ಪತನವಾಗಿದೆ. 10 ವರ್ಷದ ಮದಿತಾ ಕ್ಲೆಪ್ಸರ್, 12 ವರ್ಷದ ಆನಿಕ್ ಕ್ಲೆಪ್ಸರ್ ಜೊತೆಗೆ ಪೈಲಟ್ ರಾಬರ್ಟ್ ಸ್ಯಾಚ್ಸ್ ಕೂಡ ಸಾವನ್ನಪ್ಪಿದ್ದಾರೆ.

ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅಪಘಾತ ಆಗಿರೋದನ್ನು ಅಲ್ಲಿರುವ ಮೀನುಗಾರರು ನೋಡಿದ್ದಾರೆ. ಕೂಡಲೇ ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಅಮೆರಿಕದ ಈ ನಟ ಮೂಲತಃ ಜರ್ಮನ್. 2008ರಲ್ಲಿ ತೆರೆ ಕಂಡಿದ್ದ ಸ್ಪೀಡ್ ರೇಸರ್ ಚಿತ್ರವು ಸಾಕಷ್ಟು ಮೈಲೇಜ್ ತಂದುಕೊಟ್ಟಿತ್ತು. ದಿ ಗುಡ್ ಜರ್ಮನ್, ಸೇವ್ಡ್ ಬೈ ದಿ ಬೆಲ್: ದಿ ನ್ಯೂ ಕ್ಲಾಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

Advertisement

Advertisement
Tags :
Advertisement