For the best experience, open
https://m.newskannada.com
on your mobile browser.
Advertisement

'ಕಾಂತಾರ-1' ಚಿತ್ರದಲ್ಲಿ ಅಭಿನಯಿಸಲು ಇಲ್ಲಿದೆ ನಿಮಗೊಂದು ಅವಕಾಶ

ಕಳೆದ ವರ್ಷ ತೆರೆಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ʼಕಾಂತಾರʼ ಚಿತ್ರದ ಮೊದಲ ಭಾಗದ ಮುಹೂರ್ತ ನೆರವೇರಿದೆ. ರಿಷಬ್‌ ಶೆಟ್ಟಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಫಸ್ಟ್‌ ಲುಕ್‌ ಪೋಸ್ಟರ್‌ ಈಗಾಗಲೇ ದಾಖಲೆಯ ವೀಕ್ಷಣೆ ಕಂಡಿದೆ.
01:14 PM Dec 12, 2023 IST | Ashitha S
 ಕಾಂತಾರ 1  ಚಿತ್ರದಲ್ಲಿ ಅಭಿನಯಿಸಲು ಇಲ್ಲಿದೆ ನಿಮಗೊಂದು ಅವಕಾಶ

ಬೆಂಗಳೂರು: ಕಳೆದ ವರ್ಷ ತೆರೆಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ʼಕಾಂತಾರʼ ಚಿತ್ರದ ಮೊದಲ ಭಾಗದ ಮುಹೂರ್ತ ನೆರವೇರಿದೆ. ರಿಷಬ್‌ ಶೆಟ್ಟಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಫಸ್ಟ್‌ ಲುಕ್‌ ಪೋಸ್ಟರ್‌ ಈಗಾಗಲೇ ದಾಖಲೆಯ ವೀಕ್ಷಣೆ ಕಂಡಿದೆ.

Advertisement

ಇದೀಗ ಚಿತ್ರತಂಡ ಕಲಾವಿದರ ಹುಡುಕಾಟದಲ್ಲಿ ತೊಡಗಿಕೊಂಡಿದೆ. ʼಕಾಂತಾರ ಅಧ್ಯಾಯ 1ʼ ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್‌ ತನ್ನ ಸಾಮಾಜಿಕ ಜಾಲತಾಣ ಪೇಜ್‌ನಲ್ಲಿ ಕಲಾವಿದರು ಬೇಕಾಗಿದ್ದಾರೆ ಎಂದು ಪೋಸ್ಟ್‌ ಹಂಚಿಕೊಂಡಿದೆ.

ʼಕಾಂತಾರʼ ಚಿತ್ರದಲ್ಲಿ ನಟಿಸಲು ಕಲಾವಿದರು ಬೇಕಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಸಿನಿಮಾದಲ್ಲಿ ನಟಿಸಲು 30ರಿಂದ 60ರ ವಯಸ್ಸಿನ ಪುರುಷರು ಬೇಕಾಗಿದ್ದಾರೆ. 18ರಿಂದ 60 ವಯಸ್ಸಿನ ಮಹಿಳೆಯರೂ ಬೇಕಾಗಿದ್ದಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಆಸಕ್ತರು https://www.kantara.film/ಈ ಲಿಂಕ್‌ ಒತ್ತಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು.

Advertisement

ರೀಲ್ಸ್‌ ಮತ್ತು ಅವುಗಳನ್ನು ಹೋಲುವ ಇತರ ವಿಷಯಗಳನ್ನು ಸ್ವೀಕರಿಸುವುದಿಲ್ಲ ಎಂದು ಚಿತ್ರತಂಡ ಸ್ಪಷ್ಟವಾಗಿ ಹೇಳಿದೆ. ಡಿ. 14ರ ವರೆಗೆ ಅವಕಾಶ ಇದೆ. ಫೆಬ್ರವರಿಯಿಂದ ʼಕಾಂತಾರ-1ʼ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ.

Advertisement
Tags :
Advertisement