ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

"ಹೊಂಬಾಳೆ ಫಿಲ್ಮ್ಸ್"​​ ಸಿನಿಮಾ ಪ್ರಪಂಚ ಸೇರಿಕೊಳ್ಳಲು ನಿಮಗೊಂದು ಅವಕಾಶ

ಬೆಂಗಳೂರು: ‘ಕೆಜಿಎಫ್’, ‘ಕಾಂತಾರ’ ಸೇರಿದಂತೆ ಹಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ, ‘ಸಲಾರ್’ ಸೇರಿದಂತೆ ಹಲವು ಭಾರಿ ಬಜೆಟ್​ ಸಿನಿಮಾಗಳ ಮೇಲೆ ಬಂಡವಾಳ ಹೂಡಿರುವ ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಸಂಸ್ಥೆ ಕಡಿಮೆ ಅವಧಿಯಲ್ಲಿ ಜನಪ್ರಿಯ, ಭರವಸೆಯ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇದೇ ಸಂಸ್ಥೆಈಗ ಹೊಸ ನಿರ್ದೇಶಕರಿಗೆ ಅಥವಾ ಭವಿಷ್ಯದ ನಿರ್ದೇಶಕರಿಗೆ ಅವಕಾಶವೊಂದನ್ನು ನೀಡಿದೆ. ನಿರ್ಮಾಣ ಸಂಸ್ಥೆಗಾಗಿ ಕೆಲಸ ಮಾಡಲು ಸಹಾಯಕ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳುತ್ತಿದೆ.
07:05 AM Nov 09, 2023 IST | Ashitha S
hombale films recruiting new assistant directors for their movies

ಬೆಂಗಳೂರು: ‘ಕೆಜಿಎಫ್’, ‘ಕಾಂತಾರ’ ಸೇರಿದಂತೆ ಹಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ, ‘ಸಲಾರ್’ ಸೇರಿದಂತೆ ಹಲವು ಭಾರಿ ಬಜೆಟ್​ ಸಿನಿಮಾಗಳ ಮೇಲೆ ಬಂಡವಾಳ ಹೂಡಿರುವ ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಸಂಸ್ಥೆ ಕಡಿಮೆ ಅವಧಿಯಲ್ಲಿ ಜನಪ್ರಿಯ, ಭರವಸೆಯ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇದೇ ಸಂಸ್ಥೆಈಗ ಹೊಸ ನಿರ್ದೇಶಕರಿಗೆ ಅಥವಾ ಭವಿಷ್ಯದ ನಿರ್ದೇಶಕರಿಗೆ ಅವಕಾಶವೊಂದನ್ನು ನೀಡಿದೆ. ನಿರ್ಮಾಣ ಸಂಸ್ಥೆಗಾಗಿ ಕೆಲಸ ಮಾಡಲು ಸಹಾಯಕ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳುತ್ತಿದೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್​ ‘ಸಹಾಯಕ ನಿರ್ದೇಶಕರಾಗಿ ನಮ್ಮ ಸಿನಿಮಾ ಲೋಕಕ್ಕೆ ಬನ್ನಿ, ನಿಮ್ಮ ಸೃಜನಶೀಲ ಕಿಡಿ ಮತ್ತು ಕಥೆ ಹೇಳುವ ಉತ್ಸಾಹವನ್ನು ನಮ್ಮ ಸಿನಿಮಾ ಪ್ರಯಾಣದ ಜೊತೆಗೆ ತನ್ನಿ. ನಮ್ಮ ರೋಚಕವಾದ ಯೋಜನೆಗಳ ಭಾಗವಾಗಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ಅಲ್ಲಿ ನೀವು ಕಲಿಯಬಹುದು, ಬೆಳೆಯಬಹುದು ಮತ್ತು ಬೆಳ್ಳಿ ಪರದೆಯ ಮ್ಯಾಜಿಕ್‌ಗೆ ಕೊಡುಗೆ ನೀಡಬಹುದು. ನೀವು ಹೊಳೆಯುವ ಅವಕಾಶ ಇಲ್ಲಿಂದ ಪ್ರಾರಂಭವಾಗುತ್ತದೆ’ ಎಂದಿದೆ.

ಆದರೆ ಕೆಲವು ಷರತ್ತುಗಳನ್ನು ಸಹ ವಿಧಿಸಿದ್ದು, ಈಗಾಗಲೇ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಉಳ್ಳವರು, ಶಾರ್ಟ್​ ಸಿನಿಮಾಗಳನ್ನು ಮಾಡಿದವರು, ಸಿನಿಮಾದ ಪ್ರೀ ಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್, ಪ್ರೊಡಕ್ಷನ್​ ಬಗ್ಗೆ ಮಾಹಿತಿ ಇರುವವರು ಮಾತ್ರವೇ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

Advertisement

ಹೊಂಬಾಳೆ ಫಿಲ್ಮ್ಸ್​​ ನ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಆಸಕ್ತಿ ಇರುವವರು ನಿರ್ಮಾಣ ಸಂಸ್ಥೆಯವರು ಆಯೋಜಿಸಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಸಂದರ್ಶನವು ನವೆಂಬರ್ 11 ರಂದು ಬೆಳಿಗ್ಗೆ 8 ರಿಂದ ಆರಂಭವಾಗುತ್ತದೆ. ಸಂಜೆ ನಾಲ್ಕರ ವರೆಗೆ ನಡೆಯುತ್ತದೆ. ಆಸಕ್ತಿ ಇರುವವರು ಬೆಂಗಳೂರಿನ ಮಲ್ಲೇಶ್ವರದ 8ನೇ ಕ್ರಾಸ್ ರಸ್ತೆ, 8ನೇ ಮುಖ್ಯ ರಸ್ತೆ, #158/1, ಜಿಎಂ ರಿಜಾಯ್ಸ್​​ ಡಿಜಿಟಲ್ ಆಡಿಟೋರಿಯಂ ಬ್ಯಾಂಕ್ವೆಟ್ ಗೆ ಭೇಟಿ ನೀಡಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

Advertisement
Tags :
indiaKARNATAKALatestNewsNewsKannadaSANDALWOODಸಿನಿಮಾ ಪ್ರಪಂಚಹೊಂಬಾಳೆ ಫಿಲ್ಮ್ಸ್
Advertisement
Next Article