ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವತಿ ಸಾವನ್ನಪ್ಪಿದ ಪ್ರಕರಣ: ಹೋಂ ಸ್ಟೇ ಒಂದಕ್ಕೆ 37.5 ಲಕ್ಷ ರೂ ದಂಡ

ಅಕ್ಟೋಬರ್ 24, 2021 ರಂದು ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಹೋಂ ಸ್ಟೇ ಒಂದಕ್ಕೆ 37.5 ಲಕ್ಷ ರೂ ದಂಡ ವಿಧಿಸಲಾಗಿದ್ದು, ಮೃತರ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡಿದ್ದಕ್ಕಾಗಿ 2 ಲಕ್ಷ ರೂ.ಗಳ ಹೆಚ್ಚುವರಿ ದಂಡ ಕೂಡ ಹೇರಲಾಗಿದೆ.
07:19 PM Feb 05, 2024 IST | Ashika S

ಮಡಿಕೇರಿ: ಅಕ್ಟೋಬರ್ 24, 2021 ರಂದು ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಹೋಂ ಸ್ಟೇ ಒಂದಕ್ಕೆ 37.5 ಲಕ್ಷ ರೂ ದಂಡ ವಿಧಿಸಲಾಗಿದ್ದು, ಮೃತರ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡಿದ್ದಕ್ಕಾಗಿ 2 ಲಕ್ಷ ರೂ.ಗಳ ಹೆಚ್ಚುವರಿ ದಂಡ ಕೂಡ ಹೇರಲಾಗಿದೆ.

Advertisement

ಅ. 2021 ರಲ್ಲಿ, ಮುಂಬೈನಿಂದ ಮೂವರು ಹುಡುಗಿಯರು ದಸರಾ ರಜೆಗಾಗಿ ಕೊಡಗಿಗೆ ಭೇಟಿ ನೀಡಿದ್ದರು. ಎಂಬಿಎ ಪದವೀಧರರಾದ ವಿಘ್ನೇಶ್ವರಿ ಈಶ್ವರನ್ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಡಿಕೇರಿಯಲ್ಲಿ ಕೂರ್ಗ್ ವ್ಯಾಲಿ ಹೋಂಸ್ಟೇ ಬುಕ್ ಮಾಡಿದ್ದಾರೆ.

2021 ರ ಅಕ್ಟೋಬರ್ 23 ರಿಂದ ಮೂರು ದಿನಗಳವರೆಗೆ ರೂಂ ಬುಕ್ ಆಗಿತ್ತು. ಅಕ್ಟೋಬರ್ 24, 2021 ರಂದು, ವಿಘ್ನೇಶ್ವರಿ ಹೋಂಸ್ಟೇನ ಸ್ನಾನಗೃಹದೊಳಗೆ ಕುಸಿದು ಸಾವನ್ನಪ್ಪಿದ್ದರು.

Advertisement

ಈ ವೇಳೆ ಮೃತದೇಹ ಪರೀಕ್ಷೆ ನಡೆಸಿದ್ದ ಮಡಿಕೇರಿಯ ಆಸ್ಪತ್ರೆಯ ವೈಧ್ಯಾಧಿಕಾರಿಗಳು ಆಕೆಯನ್ನು ‘ಸತ್ತಿದ್ದಾಳೆ’ ಎಂದು ಘೋಷಿಸಿದ್ದರು. ಹೋಂಸ್ಟೇ ಬಾತ್ ರೂಂ ಒಳಗೆ ಅಳವಡಿಸಿದ್ದ ಗ್ಯಾಸ್ ಗೀಸರ್ ಸೋರಿಕೆಯಿಂದ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಳು ಎನ್ನಲಾಗಿತ್ತು.

ಈ ಹಿನ್ನೆಲೆಯಲ್ಲಿ ಮೃತ ಬಾಲಕಿಯ ತಂದೆ ಈಶ್ವರನ್ ಎಂಬುವರು ಪ್ರಕರಣ ದಾಖಲಿಸಿದ್ದು, ಹೋಂಸ್ಟೇನಲ್ಲಿ ಸ್ನಾನಗೃಹದೊಳಗೆ ಸುರಕ್ಷತಾ ಕ್ರಮಗಳಿಲ್ಲದ ಕಾರಣ ತನ್ನ ಮಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.

ಗ್ಯಾಸ್ ಗೀಸರ್ ಅಳವಡಿಸಲಾಗಿದ್ದ ಹೋಂಸ್ಟೇ ಬಾತ್ ರೂಂನಲ್ಲಿ ವೆಂಟಿಲೇಷನ್ ಇಲ್ಲದೇ ಇರುವುದು ಘಟನೆಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಇದಲ್ಲದೆ, ವಿಘ್ನೇಶ್ವರಿ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಕಾರ್ಬನ್ ಮಾನಾಕ್ಸೈಡ್ ವಿಷದಿಂದ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ಹೋಂಸ್ಟೇ ಮಾಲೀಕ ಶೇಖ್ ಮೊಹಮ್ಮದ್ ಮತ್ತು ಮ್ಯಾನೇಜರ್ ಮುಕ್ತಾರ್ ಮೊಹಮ್ಮದ್ ಅವರಿಗೆ 37.5 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದು, ಮೃತರ ಕುಟುಂಬಕ್ಕೆ ಪರಿಹಾರವಾಗಿ ಪಾವತಿಸಬೇಕು. ಇಬ್ಬರು ಆರೋಪಿಗಳಿಗೆ ಮಾನಸಿಕ ಹಿಂಸೆ ನೀಡಿದ ಕಾರಣ ಮೇರೆಗೆ ಕುಟುಂಬಕ್ಕೆ ಶೇ.6ರ ಬಡ್ಡಿ ಸಹಿತ 2 ಲಕ್ಷ ರೂ ಹೆಚ್ಚುವರಿ ಪರಿಹಾರ ನೀಡುವಂತೆ ಆಯೋಗ ಆದೇಶಿಸಿದೆ.

 

Advertisement
Tags :
LatestNewsNewsKannadaಗ್ಯಾಸ್ ಗೀಸರ್ಪ್ರಕರಣಮಾನಸಿಕ ಹಿಂಸೆಯುವತಿಸೋರಿಕೆ
Advertisement
Next Article