For the best experience, open
https://m.newskannada.com
on your mobile browser.
Advertisement

ಭಾರತದ ಮಸಾಲೆ ಪದಾರ್ಥಗಳಿಗೆ ಹಾಂಕಾಂಗ್, ಸಿಂಗಾಪೂರ ನಿಷೇಧ !

ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ನಂತರ ಹಾಂಗ್ ಕಾಂಗ್ ಮತ್ತು ಸಿಂಗಾಪುರ ದೇಶಗಳು ಎರಡು ಜನಪ್ರಿಯ ಭಾರತದ ಮಸಾಲೆ ಬ್ರಾಂಡ್‌ಗಳ ನಾಲ್ಕು ಉತ್ಪನ್ನಗಳನ್ನು ನಿಷೇಧಿಸಿದ ನಂತರ, ಭಾರತೀಯರಲ್ಲಿ ಅವುಗಳ ಸುರಕ್ಷತೆಯ ಬಗ್ಗೆ ಚಿಂತೆಗೀಡುಮಾಡಿದೆ.
03:34 PM Apr 25, 2024 IST | Ashitha S
ಭಾರತದ ಮಸಾಲೆ ಪದಾರ್ಥಗಳಿಗೆ ಹಾಂಕಾಂಗ್  ಸಿಂಗಾಪೂರ ನಿಷೇಧ

ವದೆಹಲಿ: ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ನಂತರ ಹಾಂಗ್ ಕಾಂಗ್ ಮತ್ತು ಸಿಂಗಾಪುರ ದೇಶಗಳು ಎರಡು ಜನಪ್ರಿಯ ಭಾರತದ ಮಸಾಲೆ ಬ್ರಾಂಡ್‌ಗಳ ನಾಲ್ಕು ಉತ್ಪನ್ನಗಳನ್ನು ನಿಷೇಧಿಸಿದ ನಂತರ, ಭಾರತೀಯರಲ್ಲಿ ಅವುಗಳ ಸುರಕ್ಷತೆಯ ಬಗ್ಗೆ ಚಿಂತೆಗೀಡುಮಾಡಿದೆ.

Advertisement

ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಭಾರತೀಯ ಆಹಾರ ನಿಯಂತ್ರಕಗಳ ಬಗ್ಗೆ ಜನರಿಗೆ ವಿಶ್ವಾಸ ಕಡಿಮೆಯಾಗಿದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳುತ್ತದೆ.

ಸ್ತನ ಕ್ಯಾನ್ಸರ್ ಮತ್ತು ಲಿಂಫೋಮಾದ ಅಪಾಯವನ್ನು ಹೆಚ್ಚಿಸುವ ಕ್ಯಾನ್ಸರ್-ಉಂಟುಮಾಡುವ ಏಜೆಂಟ್ ಎಥಿಲೀನ್ ಆಕ್ಸೈಡ್ ಇರುವಿಕೆಯನ್ನು ಉಲ್ಲೇಖಿಸಿ ಹಾಂಗ್ ಕಾಂಗ್ ಮತ್ತು ಸಿಂಗಾಪುರ ದೇಶಗಳು MDH ಮತ್ತು ಎವರೆಸ್ಟ್ ಜಾತಿಯ ನಾಲ್ಕು ಮಸಾಲೆ ಉತ್ಪನ್ನಗಳನ್ನು ನಿಷೇಧಿಸಿವೆ.

Advertisement

ಈ ಎರಡು ದೇಶಗಳು ಉತ್ಪನ್ನಗಳನ್ನು ನಿಷೇಧಿಸಿದ ನಂತರ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಈ ಬಗ್ಗೆ ತನಿಖೆ ನಡೆಸುತ್ತಿದೆ.

ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಈ ಎರಡು ಬ್ರಾಂಡ್‌ಗಳ ಪ್ಯಾಕೇಜ್ಡ್ ಮಸಾಲೆಗಳನ್ನು ದೀರ್ಘಕಾಲದವರೆಗೆ ಸೇವಿಸುತ್ತಿದ್ದ ಶೇಕಡಾ 72ರಷ್ಟು ಗ್ರಾಹಕರು ಅವುಗಳಲ್ಲಿ ಕಾರ್ಸಿನೋಜೆನಿಕ್ ಅಂಶಗಳು ಕಂಡುಬಂದ ನಂತರ ಕಳವಳ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಗೆ ಒಳಪಟ್ಟ 293 ಜಿಲ್ಲೆಗಳಲ್ಲಿ ನೆಲೆಸಿರುವ 12,361 ಜನರಲ್ಲಿ ಶೇಕಡಾ 62 ಜನರು ಈ ಬ್ರಾಂಡ್‌ಗಳ ಮಸಾಲೆಗಳನ್ನು ಸೇವಿಸುತ್ತಿದ್ದಾರೆ. ಕೇವಲ ಶೇಕಡಾ 10ರಷ್ಟು ಜನರು ಈ ಬ್ರಾಂಡ್‌ಗಳನ್ನು ಸೇವಿಸುತ್ತಿಲ್ಲ ಎಂದು ತಿಳಿದುಬಂದಿದೆ.

Advertisement
Tags :
Advertisement