ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮರ್ಯಾದಾ ಹತ್ಯೆ: 2 ವರ್ಷದ ಮಗು ಸೇರಿ ಮೂವರ ಕೊಲೆ

ಮರ್ಯಾದಾ ಹತ್ಯೆಯೊಂದಕ್ಕೆ  2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಲಾದ ಘಟನೆ  ನೌಗಾಚಿಯಾ ಜಿಲ್ಲೆಯ ಗೋಪಾಲ್​ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
03:37 PM Jan 10, 2024 IST | Ashika S

ಬಿಹಾರ: ಮರ್ಯಾದಾ ಹತ್ಯೆಯೊಂದಕ್ಕೆ  2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಲಾದ ಘಟನೆ  ನೌಗಾಚಿಯಾ ಜಿಲ್ಲೆಯ ಗೋಪಾಲ್​ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಚಂದನ್ (40), ಚಾಂದಿನಿ (23) ರೋಶ್ನಿ (2) ಕೊಲೆಯಾದ ದುರ್ದೈವಿಗಳು. ಚಾಂದಿನಿ ತಂದೆ ಮತ್ತು ಸಹೋದರನ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.

ಚಂದನ್ ಮತ್ತು ಚಾಂದಿನಿ ಪ್ರೀತಿಸುತ್ತಿದ್ದು, ಕಳೆದ ಮೂರು ವರ್ಷಗಳ ಹಿಂದೆ ಪ್ರೇಮ ವಿವಾಹ ಆಗಿದ್ದರು. ಇದಕ್ಕೆ ಚಾಂದಿನಿ ಮನೆಯವರಿಂದ ತೀವ್ರ ವಿರೋಧ ಇತ್ತು. ಮದುವೆ ಆಗಿದ್ದ ಕಾರಣಕ್ಕೆ ಕೊಲೆ ಮಾಡಿ ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Advertisement

ಚಾಂದಿನಿಯ ತಂದೆ ಪಪ್ಪು ಸಿಂಗ್ ಮೊದಲು ಇಬ್ಬರಿಗೂ ರಾಡ್​ನಿಂದ ಹೊಡೆದಿದ್ದಾನೆ. ಕೊನೆಗೆ ಪಪ್ಪು ಸಿಂಗ್ ಮಗ ಧೀರಜ್ ಬಂದು ಗುಂಡು ಹಾರಿಸಿದ್ದಾನೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೃತ ಚಂದನ್ ಸಹೋದರ ಆರೋಪ ಮಾಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ತಂಡ ರಚಿಸಿದ್ದಾರೆ.

Advertisement
Tags :
LatestNewsNewsKannadaಕುಟುಂಬಕೊಲೆಮಗುಮರ್ಯಾದಾ ಹತ್ಯೆಹತ್ಯೆ
Advertisement
Next Article