ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಅಂತ್ಯ : ಕ್ಷೇತ್ರಗಳಲ್ಲಿ ಎಷ್ಟು ಮತದಾನ

ಕರ್ನಾಟಕದಲ್ಲಿಂದು (ಮೇ 07) ಲೋಕಸಭೆಗೆ 2ನೇ ಹಂತದಲ್ಲಿ ಮತದಾನ ನಡೆದಿದ್ದು, ಬಾಕಿ ಉಳಿದಿದ್ದ14 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 227 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ
06:55 AM May 08, 2024 IST | Nisarga K
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಅಂತ್ಯ : ಕ್ಷೇತ್ರಗಳಲ್ಲಿ ಎಷ್ಟು ಮತದಾನ

ಬೆಂಗಳೂರು: ಕರ್ನಾಟಕದಲ್ಲಿಂದು (ಮೇ 07) ಲೋಕಸಭೆಗೆ 2ನೇ ಹಂತದಲ್ಲಿ ಮತದಾನ ನಡೆದಿದ್ದು, ಬಾಕಿ ಉಳಿದಿದ್ದ14 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 227 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಇನ್ನು ಮೊದಲನೇ ಹಂತಕ್ಕೆ ಎರಡನೇ ಹಂತದಲ್ಲಿ ಭರ್ಜರಿ ಮತದಾನ ಆಗಿದೆ. ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡಾ 69.37ರಷ್ಟು ಮತದಾನವಾಗಿದೆ. ಸಿಟಿ ಮಂದಿಗೆ ಹೋಲಿಸಿದ್ರೆ ಹಳ್ಳಿ ಮಂದಿ ಭರ್ಜರಿ ವೋಟಿಂಗ್ ಮಾಡಿದ್ದಾರೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದ 14 ಕ್ಷೇತ್ರದಲ್ಲಿ ಬಿರುಸಿನ ಮತದಾನವಾಗಿದೆ. ಬಿರು ಬಿಸಿಲನ್ನೂ ಲೆಕ್ಕಿಸದೇ ಮತದಾರರು ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ.

Advertisement

ಎಲ್ಲೆಲ್ಲಿ ಎಷ್ಟು ಮತದಾನವಾಗಿದೆ?
ರಾಯಚೂರು 60.72%, ಬೀದರ್ 63.65%, ಕಲಬುರಗಿ 61.73%, ಚಿಕ್ಕೋಡಿ 74.39%, ಕೊಪ್ಪಳ 69.50%, ವಿಜಯಪುರ 64.71%, ಬಾಗಲಕೋಟೆ 70.47%, ಬೆಳಗಾವಿ 70.84%, ಬಳ್ಳಾರಿ 69.74%, ಹಾವೇರಿ 72.59%, ಶಿವಮೊಗ್ಗ 76.05%, ಉತ್ತರ ಕನ್ನಡ 73.52%, ದಾವಣಗೆರೆ 75.48%, ಧಾರವಾಡ ಕ್ಷೇತ್ರದಲ್ಲಿ ಶೇ. 70.54ರಷ್ಟು ಮತದಾನವಾಗಿದೆ.

ಒಟ್ಟು 474 ಅಭ್ಯರ್ಥಿಗಳ ಭವಿಷ್ಯ ಎವಿಎಂನಲ್ಲಿ
ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ 247 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಇದೀಗ ಎರಡನೇ ಹಂತದಲ್ಲಿ ಒಟ್ಟು 227 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಇದರೊಂದಿಗೆ ರಾಜ್ಯದ 28 ಕ್ಷೇತ್ರಗಳ ಒಟ್ಟಾರೆ 474 ಅಭ್ಯರ್ಥಿಗಳ ಭವಿಷ್ಯ ಎವಿಎಂನಲ್ಲಿ ಭದ್ರವಾಗಿದ್ದು, ಯಾರು ಗೆಲ್ಲಲಿದ್ದಾರೆ? ಯಾರು ಸೋಲುತ್ತಾರೆ ಎನ್ನುವುದನ್ನು ಜೂನ್ 4 ರವರೆಗೆ ಕಾಯಬೇಕಿದೆ.

Advertisement

Advertisement
Tags :
constituenciesELECTIONLatestNewslokasabha electionNewsKarnatakavotes
Advertisement
Next Article