For the best experience, open
https://m.newskannada.com
on your mobile browser.
Advertisement

ಬೀಟ್ರೂಟ್‌ ಜ್ಯೂಸ್ ಬಗ್ಗೆ ‌ನಿಮಗೇಷ್ಟು ಗೊತ್ತು ?

ಹಣ್ಣು ಹಾಗೂ ತಕಾರಿಗಳು ನಮ್ಮ ಆರೋಗ್ಯಕ್ಕೆ ಲಾಭಕಾರಿ ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದಿದೆ.
10:16 AM Jan 26, 2024 IST | Ashitha S
ಬೀಟ್ರೂಟ್‌ ಜ್ಯೂಸ್ ಬಗ್ಗೆ ‌ನಿಮಗೇಷ್ಟು ಗೊತ್ತು

ಹಣ್ಣು ಹಾಗೂ ತಕಾರಿಗಳು ನಮ್ಮ ಆರೋಗ್ಯಕ್ಕೆ ಲಾಭಕಾರಿ ಎನ್ನುವ ವಿಚಾರ ತಿಳಿದಿದೆ. ಹೀಗಾಗಿ ನಾವು ತರಕಾರಿಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಹೋಗುತ್ತೇವೆ. ಬೇರೆ ಬೇರೆ ರೀತಿಯ ತರಕಾರಿಗಳಲ್ಲಿ ಪೋಷಕಾಂಶಗಳು ವಿಭಿನ್ನ ರೂಪದಲ್ಲಿ ಸಿಗುವುದು. ಹೀಗಾಗಿ ಬೀಟ್ರೂಟ್‌ ನಲ್ಲಿ ಪೋಷಕಾಂಶಗಳು ಹೇರಳವಾಗಿದೆ.

Advertisement

ಬೀಟ್‌ರೂಟ್‌ ಜ್ಯೂಸ್‌ ಕುಡಿದು ನಂತರ ವ್ಯಾಯಾಮ ಮಾಡಿದರೆ ಶೇ. 15 ರಷ್ಟು ಹೆಚ್ಚು ಅವಧಿಯ ಕಾಲ ವ್ಯಾಯಾಮ ಮಾಡಬಹುದು. ಬೀಟ್‌ರೂಟ್‌ನಲ್ಲಿ ಬೀಟೈನ್‌ ಎಂಬ ಪೌಷ್ಟಿಕಾಂಶ ಪರಿಸರದ ಒತ್ತಡದಿಂದ ಜೀವಕೋಶಗಳು, ಪ್ರೋಟೀನ್‌ಗಳು ಮತ್ತು ಕಿಣ್ವಗಳನ್ನು ರಕ್ಷಿಸುತ್ತದೆ. ಅಲ್ಲದೆ, ಉರಿಯೂತ ಸಮಸ್ಯೆ ವಿರುದ್ಧ ಹೋರಾಡಲು ರಕ್ಷಿಸುತ್ತದೆ ಹಾಗೂ ಆಂತರಿಕ ಅಂಗಗಳನ್ನು ರಕ್ಷಿಸುತ್ತದೆ.
ಬೀಟ್‌ರೂಟ್‌ಗಳಲ್ಲಿ ಪ್ರತಿರೋಧಕ ಉತ್ತೇಜನ ವಿಟಮಿನ್ ಸಿ ಅಂಶ, ನಾರಿನಂಶ ಹೆಚ್ಚಿದೆ. ಜತೆಗೆ, ಮ್ಯಾಂಗನೀಸ್‌ ಇದ್ದು, ಇದರಿಂದ ನಿಮ್ಮ ಮೂಳೆಗಳು, ಯಕೃತ್ತು, ಕಿಡ್ನಿಗಳು ಹಾಗೂ ಪ್ಯಾಂಕ್ರಿಯಾಗೆ ಒಳ್ಳೆಯದು. ಅಲ್ಲದೆ, ವಿಟಮಿನ್ ಬಿ, ಫೋಲೇಟ್ ಅಂಶದಿಂದ ಜನ್ಮ ದೋಷಗಳ ಅಪಾಯ ಕಡಿಮೆ ಮಾಡುತ್ತೆ.

ಬೀಚ್‌ರೂಟ್‌ನಲ್ಲಿ ಪೊಟಾಷಿಯಂ ಮತ್ತು ವಿಟಮಿನ್‌ ಸಿ ಅಧಿಕ ಪ್ರಮಾಣದಲ್ಲಿ ಇವೆ. ಇದರ ಸೇವನೆ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದು ಮಧುಮೇಹಿಗಳಿಗೆ ಉಂಟಾಗುವ ನಿಶ್ಯಕ್ತಿಯನ್ನು ನಿವಾರಿಸುತ್ತದೆ. ರಕ್ತಹೀನತೆಯಿಂದ ನರಳುವವರು ಕಡ್ಡಾಯವಾಗಿ ಬೀಟ್‌ರೂಟ್ ತಿನ್ನಬೇಕು. ಇದು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

Advertisement

ಬೀಟ್‌ರೂಟ್ ಜ್ಯೂಸ್ ಅನ್ನು ಸೇವಿಸುವುದು ರಕ್ತದ ಕಣಗಳ ವೃದ್ಧಿಗೆ ಸಹಕಾರಿಯಾಗಿದೆ ಹಾಗೂ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಹೃದಯಕ್ಕೆ ಬೀಟ್‌ರೂಟ್ ತುಂಬಾ ಉತ್ತಮ ಎಂದೆನಿಸಿದೆ. ಅಧಿಕ ರಕ್ತದೊತ್ತಡದಿಂದ ಹೃಯದಕ್ಕೆ ಉಂಟಾಗುವ ಅಪಾಯಗಳನ್ನು ತಗ್ಗಿಸಲು ಬೀಟ್‌ರೂಟ್ ಜ್ಯೂಸ್ ಸಹಕಾರಿಯಾಗಿದೆ. ನಿತ್ಯವೂ ಜ್ಯೂಸ್ ಅನ್ನು ಸೇವಿಸುವುದು ಹೃದಯದ ಸಂರಕ್ಷಣೆಯನ್ನು ಮಾಡುತ್ತದೆ.

Advertisement
Tags :
Advertisement