ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಿಹಿಗೆಣಸಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸಿಹಿಗೆಣಸು ಸಾಮಾನ್ಯವಾಗಿ ಎಲ್ಲೆಡೆ ಹಾಗೂ ವರ್ಷದ ಬಹುತೇಕ ದಿನಗಳಲ್ಲಿ ಸಿಗುತ್ತದೆ. ಸಿಹಿಗೆಣಸು ಆರೋಗ್ಯ ಒಳ್ಳೆಯದಾ? ಎಂಬುದು ಕೆಲವರಿಗೆ ಪ್ರಶ್ನೆ ಇದೆ.
07:57 PM Dec 14, 2023 IST | Ramya Bolantoor

ಸಿಹಿಗೆಣಸು ಸಾಮಾನ್ಯವಾಗಿ ಎಲ್ಲೆಡೆ ಹಾಗೂ ವರ್ಷದ ಬಹುತೇಕ ದಿನಗಳಲ್ಲಿ ಸಿಗುತ್ತದೆ. ಸಿಹಿಗೆಣಸು ಆರೋಗ್ಯ ಒಳ್ಳೆಯದಾ? ಎಂಬುದು ಕೆಲವರಿಗೆ ಪ್ರಶ್ನೆ ಇದೆ. ಯಾವ ಆಹಾರಗಳನ್ನು ಸೇವಿಸಿದರೆ ಕೊಬ್ಬು ಹೆಚ್ಚುತ್ತದೆ ಎಂಬ ಅನುಮಾನವಿರುತ್ತದೆಯೋ ಅಲ್ಲೆಲ್ಲಾ ಗೆಣಸನ್ನು ಬದಲಿಯಾಗಿ ಬಳಸಬಹುದು. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇವೆ.
ಸಿಹಿಗೆಣಸಿನಲ್ಲಿ ಪೊಟ್ಯಾಶಿಯಮ್, ನಿಯಾಸಿನ್, ವಿಟಮಿನ್ ಬಿ1,ಬಿ2, ಕರಗುವ ನಾರು ಹಾಗೂ ಗಂಧಕವೂ ಇದೆ. ಇದನ್ನು ಸಿಹಿಪದಾರ್ಥಗಳ ಜೊತೆಗೂ ಸಹಾ ಸೇವಿಸಬಹುದು. ಗೆಣಸಿನಲ್ಲಿ ಯಾವೆಲ್ಲಾ ಆರೋಗ್ಯಕರ ಗುಣಗಳ ಇವೆ ಎಂದು ತಿಳಿಯೋಣ.......

Advertisement

ಸಿಹಿಗೆಣಸಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು ಮೊದಲಾದವುಗಳ ರಕ್ಷಣೆ ಒದಗಿಸುತ್ತದೆ. ನಿಯಮಿತ ಸೇವನೆಯಿಂದ ಕಣ್ಣಿನ ಆರೋಗ್ಯ, ಉಸಿರಾಟದ ವ್ಯವಸ್ಥೆ ಹಾಗೂ ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಸಿಹಿಗೆಣಸಿನ ಸೇವನೆಯಿಂದ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ಸಿಹಿಗೆಣಸಿನ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚಿಸುತ್ತದೆ

Advertisement

ಇದರಲ್ಲಿರುವ ವಿಟಮಿನ್ ಎ ಹೇರಳಪ್ರಮಾಣದಲ್ಲಿದ್ದು ದಿನದ ಅಗತ್ಯದ 438% ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತದೆ. ವಿಟಮಿನ್ ಎ ಆರೋಗ್ಯ ಕಾಪಾಡಿಕೊಳ್ಳಲು ಹಲವು ರೂಪದಲ್ಲಿ ಅಗತ್ಯವಾಗಿರುವ ಪೋಷಕಾಂಶವಾಗಿದೆ. ವಿಶೇಷವಾಗಿ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಿ ಅನಗತ್ಯ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಧಾಳಿಯಿಂದ ರಕ್ಷಿಸುತ್ತದೆ

ಸಿಹಿಗೆಣಸಿನಲ್ಲಿರುವ ವಿಟಮಿನ್ ಕಣ್ಣಿನ ದೃಷ್ಟಿ ಉತ್ತಮಗೊಳಿಸುವ ಅಂಶವಿದೆ. ಈ ವಿಟಮಿನ್ ಕೊರತೆಯಿಂದ ಒಣಗಿದ ಕಣ್ಣುಗಳು, ರಾತ್ರಿಗುರುಡು, ಗಂಭೀರ ಪರಿಸ್ಥಿತಿಗಳಲ್ಲಿ ಒಟ್ಟಾರೆ ದೃಷ್ಟಿ ನಷ್ಟವಾಗುವುದು ಮೊದಲಾದ ತೊಂದರೆಗಳು ಎದುರಾಗಬಹುದು. ಆದ್ದರಿಂದ ಗೆಣಸನ್ನು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಸೇವಿಸಿದರರೆ ಕಣ್ಣುಗಳ ಆರೋಗ್ಯ ಉತ್ತಮವಾಗಿರುತ್ತದೆ.

Advertisement
Tags :
HEALTHLatestNewsNewsKannada
Advertisement
Next Article