ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

"ವೋಟರ್ ಐಡಿ"ಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಲೋಕಸಭೆ ಚುನಾವಣೆ ದಿನಾಂಕವನ್ನು ಘೋಷಿಸಲಾಗಿದೆ. ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ರಿಂದ ಮತದಾನ ಆರಂಭವಾಗಲಿದೆ.
02:41 PM Mar 17, 2024 IST | Ashitha S

ಬೆಂಗಳೂರು:  ಲೋಕಸಭೆ ಚುನಾವಣೆ ದಿನಾಂಕವನ್ನು ಘೋಷಿಸಲಾಗಿದೆ. ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ರಿಂದ ಮತದಾನ ಆರಂಭವಾಗಲಿದೆ.

Advertisement

ಮತದಾನಕ್ಕೆ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿ ಬೇಕು. ಇದು ಇಲ್ಲದಿದ್ದರೆ ಚುನಾವಣೆಯಲ್ಲಿ ಮತ ಹಾಕುವಂತಿಲ್ಲ. ಈಗ ನಿಮ್ಮಲ್ಲಿ ಮತದಾರರ ಗುರುತಿನ ಚೀಟಿ ಇಲ್ಲ ಎಂದಾದರೆ ಸರ್ಕಾರಿ ಕಚೇರಿಯ ಹೊಸ್ತಿಲಲ್ಲಿ ಅಲೆಯುವ ಅಗತ್ಯವಿಲ್ಲ. ಮತದಾರರ ಕಾರ್ಡ್ ಬೇಕಾಗಿದ್ದರೆ ಅಥವಾ ತಿದ್ದುಪಡಿ ಮಾಡಬೇಕಿದ್ದರೆ ಆನ್‌ಲೈನ್​ನಲ್ಲೇ ಸುಲಭವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಆನ್‌ಲೈನ್ ಮತದಾರರ ಗುರುತಿನ ಚೀಟಿಯನ್ನು ರಚಿಸಲು ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್​ನಿಂದ ಭಾರತದ ಚುನಾವಣಾ ಆಯೋಗದ Voter Helpline ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ಈ ಅಪ್ಲಿಕೇಶನ್ ಸಹಾಯದಿಂದ, ನೀವು ಆನ್‌ಲೈನ್ ಮತದಾರರ ಗುರುತಿನ ಚೀಟಿ ಮತ್ತು ತಿದ್ದುಪಡಿಯನ್ನು ಮಾಡಬಹುದು.

Advertisement

ಮೊದಲು ಮೊಬೈಲ್‌ನಲ್ಲಿ ಮತದಾರರ ಸಹಾಯವಾಣಿ(Voter Helpline) ಆ್ಯಪ್‌ ಇನ್​ಸ್ಟಾಲ್ ಮಾಡಿ. ನಂತರ ಅಪ್ಲಿಕೇಶನ್ ತೆರೆಯಿರಿ. ಮತದಾರರ ನೋಂದಣಿ ಮೇಲೆ ಕ್ಲಿಕ್ ಮಾಡಿ. ಬಳಿಕ ಮತದಾರರ ನೋಂದಣಿಗೆ ಅಗತ್ಯವಿರುವ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅನ್ನು ಭರ್ತಿ ಮಾಡಿ. ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿದ ನಂತರ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ಉಳಿದ ಪ್ರಕ್ರಿಯೆಯನ್ನು BLO ಪರಿಶೀಲಿಸುತ್ತದೆ. ಬಳಿಕ ನಿಮ್ಮ ಮನೆಗೇ ಹೊಸ ಮತದಾರರ ಗುರುತಿನ ಚೀಟಿ ಬರುತ್ತದೆ.

 

 

Advertisement
Tags :
ElectionsGOVERNMENTindiaKARNATAKALatestNewsNewsKannadaಬೆಂಗಳೂರು
Advertisement
Next Article