For the best experience, open
https://m.newskannada.com
on your mobile browser.
Advertisement

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ.  ಗುಟ್ಕಾ, ಎಲೆಅಡಿಕೆ, ತಂಬಾಕು ಅಗೆಯುವುದರಿಂದ, ಬೀಡಿ, ಸಿಗರೇಟ್ ಸೇದುವುದರಿಂದ ಹಲ್ಲುಗಳು ನೈಜ ಹೊಳಪು ಕಳೆದುಕೊಂಡು ಕಳಾಹೀನವಾಗುತ್ತಿವೆ.  ಹಲ್ಲುಗಳು ಮುಖದ ಅಂದ ಕಾಪಾಡುವುದಲ್ಲದೆ, ಆಹಾರವನ್ನು ಅಗೆದು ತಿನ್ನಲು ಸಹಕಾರಿಯಾಗಿದೆ. ಹೀಗಾಗಿ ಹಲ್ಲುಗಳ ಆರೋಗ್ಯದ ಕಡೆಗೆ ಗಮನಹರಿಸಬೇಕಾಗುತ್ತದೆ.
05:24 PM May 12, 2024 IST | Ashika S
ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ

ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ. ಗುಟ್ಕಾ, ಎಲೆಅಡಿಕೆ, ತಂಬಾಕು ಅಗೆಯುವುದರಿಂದ, ಬೀಡಿ, ಸಿಗರೇಟ್ ಸೇದುವುದರಿಂದ ಹಲ್ಲುಗಳು ನೈಜ ಹೊಳಪು ಕಳೆದುಕೊಂಡು ಕಳಾಹೀನವಾಗುತ್ತಿವೆ.  ಹಲ್ಲುಗಳು ಮುಖದ ಅಂದ ಕಾಪಾಡುವುದಲ್ಲದೆ, ಆಹಾರವನ್ನು ಅಗೆದು ತಿನ್ನಲು ಸಹಕಾರಿಯಾಗಿದೆ. ಹೀಗಾಗಿ ಹಲ್ಲುಗಳ ಆರೋಗ್ಯದ ಕಡೆಗೆ ಗಮನಹರಿಸಬೇಕಾಗುತ್ತದೆ.

Advertisement

ಸಾಮಾನ್ಯವಾಗಿ ಹಲ್ಲುಗಳು ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಲ್ಲಿ ಕಂಡು ಬರುತ್ತವೆ. ಕೆಲವರಿಗೆ ಚಿಕ್ಕದಾಗಿ ದಾಳಿಂಬೆ  ಹರಳು ಜೋಡಿಸಿಟ್ಟಂತೆ ಕಂಡು ಬಂದರೆ ಮತ್ತೆ ಕೆಲವರಿಗೆ ಅಗಲವಾಗಿ, ಇನ್ನು ಕೆಲವರಿಗೆ ಉಬ್ಬು,  ಮುದ್ದೆ ಮುದ್ದೆಯಾಗಿರುತ್ತದೆ. ಈ ಎಲ್ಲ ಹಲ್ಲುಗಳು ಹೇಗಿವೆ ಎನ್ನುದಕ್ಕಿಂತ ನಾವು ಹೇಗೆ ಇಟ್ಟುಕೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಮುಖದಲ್ಲಿ ಎದ್ದು ಕಾಣುವ ಅಂಗಾಂಗಗಳಲ್ಲಿ ಹಲ್ಲು ಕೂಡ ಒಂದಾಗಿರುವ ಕಾರಣ  ಅದನ್ನು ಗಟ್ಟಿಯಾಗಿ, ಸುಂದರವಾಗಿ, ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವೂ ಹೌದು.

ಕೆಲವೊಮ್ಮೆ ನಾವು ಎಷ್ಟೇ ಕಾಳಜಿ ವಹಿಸಿದರೂ ಹುಳುಗಳು ಹಲ್ಲುಗಳ ಮೇಲೆ ದಾಳಿ ಗಟ್ಟಿಯಾಗಿದ್ದರೂ ಹಲ್ಲನ್ನು ಹುಳುಕುರೋಗಕ್ಕೊಳಪಡಿಸಿ ಬಿಡುತ್ತದೆ. ಜತೆಗೆ ಕರಗಿಸಿ ಬಿಡುತ್ತದೆ.  ಹಲ್ಲಿನ ಹುಳುಕುರೋಗ ಮನುಷ್ಯರನ್ನು ಕಾಡಿ ಬಿಡುತ್ತದೆ. ಕೆಲವೊಮ್ಮೆ ಇದು ಸಮಸ್ಯೆಯಾಗಿ ಪರಿಣಮಿಸಿ ಹಲ್ಲನ್ನು ಕೀಳುವ ತನಕ ಬಿಡಲಾರದೆ ಕಾಡಿಬಿಡುತ್ತದೆ. ಹೀಗಾಗಿ ಹುಳುಕನ್ನು  ಹೋಗಲಾಡಿಸಿ ಹಲ್ಲನ್ನು ಕಾಪಾಡುವುದು ಕೆಲವೊಮ್ಮೆ ಸವಾಲಿನ ಕೆಲಸವಾಗಿಬಿಡುತ್ತದೆ. ಇಷ್ಟಕ್ಕೂ ಹಲ್ಲನ್ನು ಕಾಡುವ ಸೂಕ್ಷ್ಮ ಜೀವಿ ಸ್ಟ್ರೆಪ್ಟೊಕಾಕಸ್ ಮ್ಯೂಟ್ಯನ್ಸ್ ಸ್ವಲ್ಪ ಎಡವಿದರೂ ಹಲ್ಲನ್ನೇ ಇನ್ನಿಲ್ಲದಂತೆ ಕರಗಿಸಿಬಿಡುತ್ತದೆ.

Advertisement

ಇಷ್ಟಕ್ಕೂ ಈ ಸ್ಟ್ರೆಪ್ಟೊಕಾಕಸ್ ಮ್ಯೂಟ್ಯನ್ಸ್ ಎಂಬ ಸೂಕ್ಷ್ಮಾಣು ಜೀವಿ  ಮನುಷ್ಯನ ಬಾಯಿ  ಮತ್ತು ಜೊಲ್ಲಿನಲ್ಲಿ   ಒಂದನೇ ವಯಸ್ಸಿನಿಂದಲೇ  ಗೋಚರಿಸಲಾರಂಭಿಸುತ್ತದೆ. ಬಾಯೊಳಗೆ ಹಲ್ಲು ಮೂಡುವ ಸಮಯಕ್ಕೆ ಸರಿಯಾಗಿ  ಬಾಯೊಳಗೆ ಪ್ರವೇಶ ಪಡೆಯುತ್ತದೆ. ಬಾಯಿಯ ಸ್ವಚ್ಛತೆ ಕಡಿಮೆಯಾದರೆ ಈ ಸೂಕ್ಷ್ಮಜೀವಿ ತನ್ನ ಚಟುವಟಿಕೆ ಶುರು ಮಾಡಿಕೊಳ್ಳುತ್ತದೆ.

ಒಂದು ವೇಳೆ ಬಾಯಲ್ಲಿ ಸಿಹಿ, ಸಕ್ಕರೆ,  ಆಮ್ಲ ಪದಾರ್ಥಗಳ ಅಂಶ ಹೆಚ್ಚಾಯಿತು ಎಂದಿಟ್ಟುಕೊಳ್ಳಿ ಆಗ ಈ ರೋಗಾಣು  ತನ್ನ ಚಟುವಟಿಕೆಯನ್ನು ತೀವ್ರಗತಿಯಲ್ಲಿ ಆರಂಭಿಸುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ನಾವು ಹಲ್ಲಿನ ಬಗ್ಗೆ ನಿರ್ಲಕ್ಷ್ಯ ತೋರದೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಏಕೆಂದರೆ ಹಲ್ಲಿನ ಬಗ್ಗೆ ನಿರ್ಲಕ್ಷ್ಯ ವಹಿಸಿದಷ್ಟೂ ಸೂಕ್ಷ್ಮಾಣು ಹಲ್ಲಿನ ಮೇಲೆ ದಾಳಿ ಮಾಡುವುದು ಹೆಚ್ಚುತ್ತಾ ಹೋಗುತ್ತದೆ.

ಹಲ್ಲಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅತಿಯಾದ ಸಕ್ಕರೆ ಅಂಶದ ಕಾಫಿ, ಟೀ ಸೇವನೆ ಒಳ್ಳೆಯದಲ್ಲ. ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ  ಪ್ಲೋರೈಡ್ ಅಂಶ ಕಡಿಮೆ ಇರುವುದು, ಸವೆದ ಮುರಿದ ಹಲ್ಲು  ವಕ್ರಹಲ್ಲು ಸಿಕ್ಕಿ ಬೀಳುವ ಜಾಗಗಳಾಗಿದ್ದು, ಅವುಗಳಿಗೆ ಚಿಕಿತ್ಸೆ ಪಡೆದುಕೊಳ್ಳಬೇಕು. ಅತಿಯಾದ  ಅಂಟು ಪದಾರ್ಥ ಸೇವನೆ, ಚಾಕಲೇಟ್, ಐಸ್‌ಕ್ರೀಂನಿಂದ ದೂರವಿದ್ದಷ್ಟು ಅನುಕೂಲ.

ಸಿಹಿ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿ ಹಲ್ಲುಗಳಲ್ಲಿ ಆಹಾರ ಪದಾರ್ಥಗಳು ಸಿಕ್ಕಿ ಹಾಕಿಕೊಂಡರೆ ಬಾಯಿಯನ್ನುಸ್ವಚ್ಛ ಮಾಡಿ ಆಹಾರದ ಕಣಗಳು ಅಲ್ಲಿ ಉಳಿಯದಂತೆ ನೋಡಿಕೊಳ್ಳಬೇಕು. ದಿನಕ್ಕೆರಳು ಅದರಲ್ಲೂ ಮುಕ್ಕಳಿಸಿ, ಬಾಯಿ ಸ್ವಚ್ಛಗೊಳಿಸಿ ಮಲಗುವ ಅಭ್ಯಾಸ ಮಾಡಿಕೊಂಡರೆ ಇನ್ನೂ ಒಳ್ಳೆಯದು.

Advertisement
Tags :
Advertisement