ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಗಡುವು ವಿಸ್ತರಣೆ: ಸಾರಿಗೆ ಇಲಾಖೆಯ ಅಧಿಕೃತ ಆದೇಶ

ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ (HSRP) ನಂಬರ್​ ಪ್ಲೇಟ್ ಅಳವಡಿಸುವ ಅವಧಿಯನ್ನು ನಾಳೆಯಿಂದ ಮೇ 31ರ ವರೆಗೆ ಅಂದರೆ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಕುರಿತಾಗಿ ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್​ ಅವರು ಅಧಿಕೃತ ಆದೇಶವನ್ನು ಇಂದು ಹೊರಡಿಸಿದ್ದಾರೆ.
03:59 PM Feb 16, 2024 IST | Ashitha S

ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ (HSRP) ನಂಬರ್​ ಪ್ಲೇಟ್ ಅಳವಡಿಸುವ ಅವಧಿಯನ್ನು ನಾಳೆಯಿಂದ ಮೇ 31ರ ವರೆಗೆ ಅಂದರೆ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಕುರಿತಾಗಿ ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್​ ಅವರು ಅಧಿಕೃತ ಆದೇಶವನ್ನು ಇಂದು ಹೊರಡಿಸಿದ್ದಾರೆ.

Advertisement

ಇತ್ತೀಚೆಗೆ ಸದನದಲ್ಲಿ ಗಡುವು ವಿಸ್ತರಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದ್ದರು. ಇಂದು ಗಡುವು ವಿಸ್ತರಣೆ ಮಾಡಿ ರಾಜ್ಯ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ನೀಡಿದ್ದು, ಆ ಮೂಲಕ ನಾಲ್ಕನೇ ಬಾರಿಗೆ ಗಡುವು ವಿಸ್ತರಣೆ ಮಾಡಲಾಗಿದೆ. ಗಡುವು ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ವಾಹನ ಸವಾರರು ಮನವಿ‌ ಮಾಡಿದ್ದರು.

ರಾಜ್ಯದಲ್ಲಿ ಎಚ್​ಎಸ್​​ಆರ್​ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಾದ ಸುಮಾರು 2 ಕೋಟಿ ವಾಹನಗಳು ಇದೆ ಎಂದು ಅಂದಾಜು ಮಾಡಲಾಗಿದೆ. ಇದುವರೆಗೂ ಕೇವಲ 18 ಲಕ್ಷ ವಾಹನಗಳಿಗೆ ಮಾತ್ರ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಈ ಮೊದಲು ಪ್ಲೇಟ್ ಅಳವಡಿಕೆ ಮಾಡಿಕೊಳ್ಳುವ ಬಗ್ಗೆ ಜನರಿಂದ ಸ್ಪಂಧನೆ ವ್ಯಕ್ತವಾಗಿರಲಿಲ್ಲ. ಆದರೆ ಸರ್ಕಾರ ಅಂತಿಮ ದಿನಾಂಕ ಅಂತ ಆದೇಶ ಹೊರಡಿಸಿದ ಬಳಿಕ ವಾಹನ ಸವಾರರು ಹೊಸ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಗಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಹಲವು ತಾಂತ್ರೀಕ ಸಮಸ್ಯೆಗಳು ಎದುರಾಗಿದ್ದವು, ಈ ಹಿನ್ನೆಯಲ್ಲಿ ಸರ್ಕಾರ ಅಂತಿಮ ದಿನಾಂಕವನ್ನು ಮುಂದೂಡುವ ನಿರ್ಧಾರವನ್ನು ಕೈಗೊಂಡಿದೆ.

Advertisement

 

Advertisement
Tags :
GOVERNMENTindiaLatestNewsNewsKannadaಸಾರಿಗೆ ಇಲಾಖೆಹೆಚ್ಎಸ್ಆರ್​ಪಿ
Advertisement
Next Article