For the best experience, open
https://m.newskannada.com
on your mobile browser.
Advertisement

ಹೆಚ್​​​ಎಸ್​ಆರ್​ಪಿ ನಂಬರ್​ ಪ್ಲೇಟ್​​ ಅವಳಡಿಸುವ ಅವಧಿ ವಿಸ್ತರಣೆ

ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್  ನಂಬರ್​ ಪ್ಲೇಟ್ ಅಳವಡಿಸುವ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ  ಹೇಳಿದರು. ವಿಧಾನ್​ ಪರಿಷತ್​​ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಮಾದೇಗೌಡ ಅವರು ಮಾತನಾಡಿ “ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚಿನ ವಾಹನಗಳಿವೆ.
11:59 AM Feb 14, 2024 IST | Ashitha S
ಹೆಚ್​​​ಎಸ್​ಆರ್​ಪಿ ನಂಬರ್​ ಪ್ಲೇಟ್​​ ಅವಳಡಿಸುವ ಅವಧಿ ವಿಸ್ತರಣೆ

ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್  ನಂಬರ್​ ಪ್ಲೇಟ್ ಅಳವಡಿಸುವ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ  ಹೇಳಿದರು. ವಿಧಾನ್​ ಪರಿಷತ್​​ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಮಾದೇಗೌಡ ಅವರು ಮಾತನಾಡಿ “ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚಿನ ವಾಹನಗಳಿವೆ.

Advertisement

ಹಳ್ಳಿ ಜನರು ವಾಹನಗಳಿಗೆ ಇನ್ನೂ ಹೆಚ್​ಎಸ್​ಆರ್​ಪಿ ನೇಮ್ ಪ್ಲೇಟ್ ಅಳವಡಿಸಬೇಕು. ಆನ್​ಲೈನ್​ನಲ್ಲಿ ನೊಂದಣಿ ಮಾಡಬೇಕಿರುವ ಹಿನ್ನೆಲೆಯಲ್ಲಿ ಫೇಕ್​ ವೆಬ್ ಸೈಟ್ ಹಾವಳಿ ಹೆಚ್ಚಾಗಿದೆ ಇದರ ಬಗ್ಗೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಹೆಚ್​ಎಸ್​ಆರ್​ಪಿ ನಂಬರ್​ ಪ್ಲೇಟ್​ ಅಳವಡಿಕೆಗೆ ಅವಧಿಯನ್ನು ಸರ್ಕಾರ ನೀಡಿರುವ ಗಡುವು ವಿಸ್ತರಿಸಬೇಕು” ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ ಹೆಚ್​ಎಸ್​ಆರ್​ಪಿ ನಂಬರ್​ ಪ್ಲೇಟ್​​ ಅಳವಡಿಸುವ ಗಡುವನ್ನು ಮೂರು ತಿಂಗಳು ವಿಸ್ತರಿಸಲಾಗುತ್ತದೆ. ಇನ್ನು ಫೇಕ್​ ವೆಬ್ ಸೈಟ್ ಬಗ್ಗೆ ಎಚ್ಚರ ವಹಿಸಲಾಗುತ್ತದೆ. ಈ ಯೋಜನೆ ಪಾರದರ್ಶಕವಾಗಿದೆ ಎಂದು ಸದನಕ್ಕೆ ತಿಳಿಸಿದರು.

Advertisement

ಸವಾರರು ಹೊಸ ನಂಬರ್ ಪ್ಲೇಟ್‌ಗಾಗಿ www.siam.in ಭೇಟಿ ನೀಡಿ ಮತ್ತು https://bookmyhsrp.com/ ಗೆ ಭೇಟಿ ನೀಡಬೇಕು.

"ಹೆಚ್​​​ಎಸ್​ಆರ್​ಪಿ "  ನಂಬರ್‌ ಪ್ಲೇಟ್‌ ಎಂದರೆ,  ಸಾರ್ವಜನಿಕ ವಾಹನಗಳ ಸುರಕ್ಷತೆ ಕಾರಣದಿಂದ, ಅಪರಾಧ ತಡೆಗೆ ಈ ನಿಯಮ ಜಾರಿಗೆ ತಂದಿದೆ. ಈಗಾಗಲೇ ದಿನಾಂಕ ವಿಸ್ತರಣೆ ಮಾಡಿರುವ ಸರ್ಕಾರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ. ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳದಿದ್ದರೆ ಕನಿಷ್ಠ 500-1000 ರೂ.ದಂಡ ಹಾಕುವ ಸಾಧ್ಯತೆ ಇದೆ. ಹೆಸರೆ ಹೇಳುವಂತೆ ಇದೊಂದು ಸುರಕ್ಷಿತಾ ನೋಂದಣಿ ಪ್ಲೇಟ್ ಆಗಿದೆ. ಅಲ್ಯುಮಿನಿಯಂ ಲೋಹದಿಂದ ತಯಾರಿಸಿದ ಪ್ಲೇಟ್ ನಲ್ಲಿ ಇಂಗ್ಲೀಷ್ ಅಕ್ಷಗಳು ಉಬ್ಬಿರುವ ಅಚ್ಚಾಗಿರುತ್ತವೆ. ಇಂಡಿಯಾ ಸ್ಟಿಕ್ಕರ್ ಸಹ ಇರಲಿದೆ. ಇನ್ನು ನೀವು ಹಾಕುವ HSRP ನಂಬರ್ ಪ್ಲೇಟ್‌ನಲ್ಲಿ ನಿಮ್ಮ ವಾಹನದ (ಕಾರು/ಬೈಕ್ ಸಂಪೂರ್ಣ ಮಾಹಿತಿ) ಎಲ್ಲ ಮಾಹಿತಿ ಅಡಕವಾಗಿರುತ್ತದೆ. ಈ ವಾಹನದ ಮಾಹಿತಿಗಳು ಸರ್ಕಾರದ ಕಚೇರಿಯಲ್ಲಿ (ಡೆಟಾಬೇಸ್) ಸಂಗ್ರಹವಾಗಿರುತ್ತದೆ. ‌  ನಿಮ್ಮ ವಾಹನ ಕಳ್ಳತನವಾದರೆ ಇದರ ಸಹಾಯದಿಂದ ಬೇಗನೇ ಹುಡುಕಲು ಅನುಕೂಲವಾಗುತ್ತದೆ. ಕಳ್ಳತನದ ಬೈಕ್ ಅಪರಾಧ ಕೃತ್ಯಕ್ಕೆ ಬಳಕೆ ಆಗುವುದನ್ನು ತಡೆಯಬಹುದು. ಈ ನಂಬರ್ ಪ್ಲೇಟ್‌ನಲ್ಲಿ ಮಾಹಿತಿ ತಿದ್ದಲು ಆಗುವುದಿಲ್ಲ. ಹಾಗೆಯೇ ಈ ಪ್ಲೇಟ್‌ನ ಮರುಬಳಕೆಯು ಸಾಧ್ಯವಿಲ್ಲ.

Advertisement
Tags :
Advertisement