For the best experience, open
https://m.newskannada.com
on your mobile browser.
Advertisement

ಹೊತ್ತಿ ಹುರಿದ 14 ಅಂತಸ್ತಿನ ಕಟ್ಟಡ: 10 ಜನ ಸಾವು !

ವೆಲೆನ್ಸಿಯಾದಲ್ಲಿ 14 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಮೂಲಗಳ ಪ್ರಕಾರ, ಗುರುವಾರ ಸಂಜೆ 5.30 ಈ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ.
12:09 PM Feb 25, 2024 IST | Ashitha S
ಹೊತ್ತಿ ಹುರಿದ 14 ಅಂತಸ್ತಿನ ಕಟ್ಟಡ  10 ಜನ ಸಾವು

ಸ್ಪೇನ್‌: ವೆಲೆನ್ಸಿಯಾದಲ್ಲಿ 14 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಮೂಲಗಳ ಪ್ರಕಾರ, ಗುರುವಾರ ಸಂಜೆ 5.30 ಈ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ.

Advertisement

ಈ ಘಟನೆಯಲ್ಲಿ 10 ಜನ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದು ವರದಿಯಾಗಿದೆ. ಕಟ್ಟಡದಲ್ಲಿ ಸುಮಾರು 350 ಮಂದಿ ಸಿಲುಕಿಕೊಂಡಿದ್ದರು. ಬೆಂಕಿಯಿಂದ ಪಾರಾಗಲು ಹಲವರು ಹಲವು ಮಹಡಿಗಳಿಂದ ಜಿಗಿದಿದ್ದಾರೆ. ಕಟ್ಟಡದ ಕೆಳಗೆ ಬಲೆಗಳನ್ನು ಜೋಡಿಸಲಾಗಿತ್ತು. ಅಪಘಾತವಾದ ಕೆಲವೇ ಕ್ಷಣಗಳಲ್ಲಿ ಟವರ್‌ಗೆ ಬೆಂಕಿ ಆವರಿಸಿದ್ದು, ಆ ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೂ ಬೆಂಕಿ ವ್ಯಾಪಿಸಿದೆ. ಇನ್ನು ಘಟನಾ ಸ್ಥಳದಲ್ಲಿ ಸ್ಪೇನ್‌ನ ಮಿಲಿಟರಿ ತುರ್ತು ಘಟಕದ ಸುಮಾರು 90 ಸೈನಿಕರು ಮತ್ತು 40 ಅಗ್ನಿಶಾಮಕ ಟ್ರಕ್‌ಗಳನ್ನು ಸಹ ನಿಯೋಜಿಸಲಾಗಿದೆ.

ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Advertisement

Advertisement
Tags :
Advertisement