ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಲ್ಪೆಯಲ್ಲಿ ಬಲೆಗೆ ಬಿತ್ತು ಬೃಹತ್‌ ಮೀನು

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬಲರಾಂ ಪರ್ಸೀನ್ ಬೋಟಿನವರಿಗೆ 400 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ದೊರೆತಿದೆ. ಈ ಮೀನಿನ ಸಾಮಾನ್ಯ ಹೆಸರು ಬಿಲ್‌ಫಿಶ್. 
10:08 AM Dec 24, 2023 IST | Ashika S

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬಲರಾಂ ಪರ್ಸೀನ್ ಬೋಟಿನವರಿಗೆ 400 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ದೊರೆತಿದೆ. ಈ ಮೀನಿನ ಸಾಮಾನ್ಯ ಹೆಸರು ಬಿಲ್‌ಫಿಶ್.

Advertisement

ಇದನ್ನು ಸ್ಥಳೀಯವಾಗಿ ಮಡಲು ಮೀನು ಅಥವಾ ಕಟ್ಟೆಕೊಂಬು ಮೀನು ಎಂಬುದಾಗಿ ಕರೆಯಲಾಗುತ್ತದೆ. ಇದು ಗಿಲ್‌ನೆಟ್‌ನಲ್ಲಿ ಸಣ್ಣ ಗಾತ್ರದಲ್ಲಿ ಸಾಮಾನ್ಯವಾಗಿ ಸಿಗುತ್ತಿರುತ್ತದೆ. ಈ ರೀತಿ ದೊಡ್ಡ ಗಾತ್ರದಲ್ಲಿ ಈ ಮೀನು ದೊರೆಯುವುದು ಅಪರೂಪ ಎನ್ನುತ್ತಾರೆ ಮೀನುಗಾರರು.

ಸಣ್ಣ ಮಡಲು ಮೀನಿಗೆ ಇರುವಷ್ಟು ಬೆಲೆ ದೊಡ್ಡ ಮೀನಿಗೆ ಇರುವುದಿಲ್ಲ ಎಂದು ಮಲ್ಪೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಕರ ವಿ.ಸುವರ್ಣ ತಿಳಿಸಿದ್ದಾರೆ.

Advertisement

Advertisement
Tags :
400 ಕೆ.ಜಿLatetsNewsNewsKannadaಬಲರಾಂ ಪರ್ಸೀನ್ಮಲ್ಪೆಮೀನುಮೀನುಗಾರಿಕೆ
Advertisement
Next Article