ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪೊಲೀಸರಿಗೆ ಶುರುವಾಯ್ತು ಸಂಕಷ್ಟ: ನೋಟಿಸ್ ನೀಡಲು ಮುಂದಾದ ಮಾನವ ಹಕ್ಕುಆಯೋಗ

ಅಕ್ರಮ ಬಂಧನ, ಸಾಕ್ಷ್ಯಾಧಾರಗಳ ನಾಶ, ಸುಳ್ಳು ಪ್ರಕರಣ ದಾಖಲು, ಅಕ್ರಮವಾಗಿ ಬಂಧಿಸಿ ಹಲ್ಲೆ ಆರೋಪ, ಅಕ್ರಮವಾಗಿ ಬಂಧಿಸಿ ಹಣ ಪಡೆದು ಬಿಟ್ಟಿರುವ ಆರೋಪ ಸೇರಿ ಬೆಂಗಳೂರಿನ ವಿವಿಧ ಠಾಣೆಗಳ 18 ಪೊಲೀಸ್  ಇನ್ಸ್​ಪೆಕ್ಟರ್​ಗಳಿಗೆ ನೋಟಿಸ್ ನೀಡಲು ರಾಜ್ಯ ಮಾನವ ಹಕ್ಕುಗಳ ಆಯೋಗ ನಿರ್ಧರಿಸಿದೆ.
09:24 AM Dec 10, 2023 IST | Ashika S

ಬೆಂಗಳೂರು: ಅಕ್ರಮ ಬಂಧನ, ಸಾಕ್ಷ್ಯಾಧಾರಗಳ ನಾಶ, ಸುಳ್ಳು ಪ್ರಕರಣ ದಾಖಲು, ಅಕ್ರಮವಾಗಿ ಬಂಧಿಸಿ ಹಲ್ಲೆ ಆರೋಪ, ಅಕ್ರಮವಾಗಿ ಬಂಧಿಸಿ ಹಣ ಪಡೆದು ಬಿಟ್ಟಿರುವ ಆರೋಪ ಸೇರಿ ಬೆಂಗಳೂರಿನ ವಿವಿಧ ಠಾಣೆಗಳ 18 ಪೊಲೀಸ್  ಇನ್ಸ್​ಪೆಕ್ಟರ್​ಗಳಿಗೆ ನೋಟಿಸ್ ನೀಡಲು ರಾಜ್ಯ ಮಾನವ ಹಕ್ಕುಗಳ ಆಯೋಗ ನಿರ್ಧರಿಸಿದೆ.

Advertisement

ಈ ಎಲ್ಲ ಪೊಲೀಸ್ ಇನ್ಸ್​ಪೆಕ್ಟರ್​ಗಳಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸುವಂತೆ ಮೇಲಧಿಕಾರಿಗಳಿಗೆ ಆಯೋಗ ಸೂಚನೆ ನೀಡಿದೆ. ಈ ವರ್ಷ ಮಾನವ ಹಕ್ಕುಗಳ ಆಯೋಗದಲ್ಲಿ 4500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಮಾನವ ಹಕ್ಕುಗಳ ಆಯೋಗದಲ್ಲಿ ಅಧ್ಯಕ್ಷ ಮತ್ತು ಸದಸ್ಯರು ಇಲ್ಲದ ಕಾರಣ ಯಾವ ಪ್ರಕರಣ ಕೂಡ ತನಿಖೆಯಾಗಿರಲಿಲ್ಲ. ಈಗ ಹೊಸದಾಗಿ ಅಧ್ಯಕ್ಷ ಹಾಗೂ ಸದಸ್ಯರು ಆಯ್ಕೆಯಾಗಿದ್ದಾರೆ. ಹೀಗಾಗಿ ಅಲರ್ಟ್ ಆದ ಅಧಿಕಾರಿಗಳು, ಪ್ರಾಥಮಿಕವಾಗಿ 150 ಪ್ರಕರಣಗಳನ್ನು ತಕ್ಷಣವೇ ತನಿಖೆ ನಡೆಸಲು ನಿರ್ಧರಿಸಿದ್ದಾರೆ.

Advertisement

ಪೊಲೀಸರ ಮೇಲೆ ಸುಮಾರು 135 ಪ್ರಕರಣಗಳು ದಾಖಲಾಗಿವೆ.  ಎಲ್ಲ ಪ್ರಕರಣಗಳನ್ನು ಜನವರಿ ಅಂತ್ಯದ ಒಳಗಾಗಿ ತನಿಖೆ ನಡೆಸಿ, ವರದಿ ನೀಡುವಂತೆ ಆಯೋಗ ಅಧಿಕಾರಿಗಳಿಗೆ ಸೂಚಿಸಿದೆ.

Advertisement
Tags :
LatetsNewsNewsKannadaಅಕ್ರಮ ಬಂಧನನೋಟಿಸ್ಪ್ರಕರಣಮಾನವ ಹಕ್ಕುಗಳ ಆಯೋಗಸಾಕ್ಷ್ಯಾಧಾರಗಳ ನಾಶ
Advertisement
Next Article