ಮೊಬೈಲ್ ನೋಡುತ್ತಿದ್ದ ಪತ್ನಿ ಮೇಲೆ ಗುಂಡು ಹಾರಿಸಿದ ಪತಿ: ವಿಡಿಯೋ ವೈರಲ್
ರಾಜಸ್ಥಾನ: ಪತಿಯೋರ್ವ ಅಂಗಡಿಯಲ್ಲಿ ಕುಳಿತ್ತಿದ್ದ ಪತ್ನಿಗೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ಫಲೋಡಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪತ್ನಿಯನ್ನು ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪತಿ ಮಹಿರಾಮ್ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿದ ಆರೋಪಿ. ಈತನಿಗೆ ಮತ್ತು ಪತ್ನಿಗೆ ಎರಡು ವರ್ಷಗಳ ಹಿಂದೆ ಜಗಳ ನಡೆದಿತ್ತು. ಹಾಗಾಗಿ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ನಾಗೌರ್ ರಸ್ತೆಯಲ್ಲಿರುವ ಪತ್ನಿಯ ಅಂಗಡಿಗೆ ಬಂದ ಮಹಿರಾಮ್ ಮೊದಲಿಗೆ ಜಗಳ ಮಾಡಿ ತನ್ನ ಕೈಯಲ್ಲಿದ್ದ ಗನ್ನಿಂದ ಆಕೆಗೆ ಶೂಟ್ ಮಾಡಿದ್ದಾನೆ.
ಪತ್ನಿಗೆ ಗುಂಡು ಹಾರಿಸಿದ ಬಳಿಕ ಮಹಿರಾಮ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದನ್ನು ಕಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾಳೆ.
ಇನ್ನು ಪತ್ನಿಯನ್ನು ಕೊಂದ ಪತಿ ಮಹಿರಾಮ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
फलोदी में पति महीराम विश्नोई ने पत्नी अनामिका विश्नोई को मारी गोली,पत्नी के इंस्टाग्राम पर एक लाख फॉलोअर।@Phalodi_Police @8PMnoCM pic.twitter.com/8BhXfgVXtV
— Dr. Ashok Sharma (@ashok_Jodhpurii) February 25, 2024