For the best experience, open
https://m.newskannada.com
on your mobile browser.
Advertisement

ಬೀದಿಯಲ್ಲೇ ಹೆಂಡತಿಗೆ 19 ಬಾರಿ ಇರಿದ ಗಂಡ: ವಿಡಿಯೋ ವೈರಲ್‌

ಕಿರಾತಕ ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ 19 ಬಾರಿ  ಕತ್ತರಿಯಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಕುತುಬ್‌ಪುರ ಪ್ರದೇಶದ ಲಂಬೇಕೇಶ್ವರ ಪಾರ್ಕ್ ಬಳಿ ನಡೆದಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
11:16 AM Jan 14, 2024 IST | Ashitha S
ಬೀದಿಯಲ್ಲೇ ಹೆಂಡತಿಗೆ 19 ಬಾರಿ ಇರಿದ ಗಂಡ  ವಿಡಿಯೋ ವೈರಲ್‌

ಲಕ್ನೋ: ಕಿರಾತಕ ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ 19 ಬಾರಿ  ಕತ್ತರಿಯಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಕುತುಬ್‌ಪುರ ಪ್ರದೇಶದ ಲಂಬೇಕೇಶ್ವರ ಪಾರ್ಕ್ ಬಳಿ ನಡೆದಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Advertisement

ಆರೋಪಿ ಬ್ರಿಜ್​​ಮೋಹನ್ ನಿಶಾದ್ ತನ್ನ ಹೆಂಡತಿ ಸುಮಾನಾಳ ಮೇಲೆ ಅನುಮಾನ ವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಗಾಯಗೊಂಡ ಪತ್ನಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಲಂಬೇಕೇಶ್ವರ ಪಾರ್ಕ್ ಬಳಿಯ ಬೀದಿ ಬದಿ ತರಕಾರಿ ಖರೀದಿಗೆಂದು ಮಹಿಳೆ ಬಂದಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಆಕೆಯ ಪತಿ ಏಕಾಏಕಿ ಕತ್ತರಿಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಒಟ್ಟು 19 ಬಾರಿ ಕತ್ತರಿಯಿಂದ ಇರಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Advertisement
Tags :
Advertisement