For the best experience, open
https://m.newskannada.com
on your mobile browser.
Advertisement

ಏರ್‌ಪೋರ್ಟ್‌ಗೆ ತಡವಾಗಿ ಬಂದ ಹೆಂಡತಿ: ಬಾಂಬ್ ಬೆದರಿಕೆ ಕರೆ ಮಾಡಿದ ಗಂಡ

ಸರಿಯಾದ ಸಮಯಕ್ಕೆ ಏರ್‌ಪೋರ್ಟ್‌ಗೆ ಬಾರದ ಹೆಂಡತಿಗಾಗಿ ಗಂಡ ಬಾಂಬ್ ಬೆದರಿಕೆ ಕರೆ ಮಾಡಿ ಆತಂಕ ಸೃಷ್ಟಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಬೆಂಗಳೂರು ಮೂಲದ ವ್ಯಕ್ತಿ ಮುಂಬೈನಿಂದ ಬರಲು ಆಕಾಶ್ ಫ್ಲೈಟ್ ಬುಕ್ ಮಾಡಿದ್ದಾನೆ. ಏರ್‌ಪೋರ್ಟ್‌ಗೆ ಹೆಂಡತಿ ಬರೋದು ತಡವಾಗಿದೆ.
10:12 PM Mar 06, 2024 IST | Ashitha S
ಏರ್‌ಪೋರ್ಟ್‌ಗೆ ತಡವಾಗಿ ಬಂದ ಹೆಂಡತಿ  ಬಾಂಬ್ ಬೆದರಿಕೆ ಕರೆ ಮಾಡಿದ ಗಂಡ

ಮುಂಬೈ: ಸರಿಯಾದ ಸಮಯಕ್ಕೆ ಏರ್‌ಪೋರ್ಟ್‌ಗೆ ಬಾರದ ಹೆಂಡತಿಗಾಗಿ ಗಂಡ ಬಾಂಬ್ ಬೆದರಿಕೆ ಕರೆ ಮಾಡಿ ಆತಂಕ ಸೃಷ್ಟಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಬೆಂಗಳೂರು ಮೂಲದ ವ್ಯಕ್ತಿ ಮುಂಬೈನಿಂದ ಬರಲು ಆಕಾಶ್ ಫ್ಲೈಟ್ ಬುಕ್ ಮಾಡಿದ್ದಾನೆ. ಏರ್‌ಪೋರ್ಟ್‌ಗೆ ಹೆಂಡತಿ ಬರೋದು ತಡವಾಗಿದೆ.

Advertisement

ಕಳೆದ ಫೆಬ್ರವರಿ 24ರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ಇಂತಹದೊಂದು ಘಟನೆ ನಡೆದಿದೆ. ಅಂದು ಸಂಜೆ 6.40ಕ್ಕೆ ಆಕಾಶ ವಿಮಾನ ಮುಂಬೈನಿಂದ ಬೆಂಗಳೂರಿಗೆ ಹೊರಡಬೇಕಿತ್ತು. 167 ಪ್ರಯಾಣಿಕರಿದ್ದ ವಿಮಾನ ಟೇಕ್ ಆಫ್ ಆಗಲು ರೆಡಿಯಾಗುತ್ತಾ ಇತ್ತು. ಆದರೆ ವಿಮಾನ ನಿಲ್ದಾಣಕ್ಕೆ ಹೆಂಡತಿ ಬರುವುದು ಲೇಟ್ ಆಗ್ತಿರೋದು ಗೊತ್ತಾದ ಕೂಡಲೇ ಬೆಂಗಳೂರು ಮೂಲದ ವಿಲಾಸ್ ಬಕ್ಡೆ ಎಂಬಾತ ಏರ್‌ಲೈನ್ ಕಚೇರಿಗೆ ಕರೆ ಮಾಡಿದ್ದಾನೆ.

ಬೆಂಗಳೂರಿಗೆ ಹೊರಟಿರುವ ಆಕಾಶ ವಿಮಾನ No QP 1376 ಅಲ್ಲಿ ಬಾಂಬ್ ಇದೆ ಎಂದಿದ್ದಾನೆ. ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಕೂಡಲೇ ಅಲರ್ಟ್ ಆಗಿದ್ದಾರೆ.

Advertisement

ಏರ್‌ಲೈನ್ ಅಧಿಕಾರಿಗಳು ಕೂಡಲೇ ಪೈಲೆಟ್ ಮತ್ತು ಪೊಲೀಸರಿಗೆ ಬಾಂಬ್ ಬೆದರಿಕೆಯ ಬಗ್ಗೆ ತಿಳಿಸಿದ್ದಾರೆ. ಏರ್‌ಪೋರ್ಟ್ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ವಿಮಾನವನ್ನು ಸಂಪೂರ್ಣ ಪರಿಶೀಲನೆ ಮಾಡಿದೆ. ಪ್ರಯಾಣಿಕರ ಬ್ಯಾಗ್‌, ಲಗೇಜ್‌ಗಳನ್ನು ಮತ್ತೊಮ್ಮೆ ಚೆಕ್‌ ಮಾಡಲಾಗಿದೆ. ಆದರೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಕೊನೆಗೆ ಮಧ್ಯರಾತ್ರಿ ಆಕಾಶ ವಿಮಾನ ಮುಂಬೈನಿಂದ ಬೆಂಗಳೂರಿಗೆ ಹೊರಟಿದೆ.

ಇದಾದ ಮೇಲೆ ಫೋನ್ ನಂಬರ್ ಪರಿಶೀಲನೆ ನಡೆಸಿದಾಗ ಅಸಲಿ ವಿಷಯ ಗೊತ್ತಾಗಿದೆ. ಬಾಂಬ್ ಬೆದರಿಕೆ ಕರೆ ಬಂದ ನಂಬರ್ ಬೆಂಗಳೂರು ಮೂಲದ ವ್ಯಕ್ತಿಯದ್ದು ಎಂದು ಪತ್ತೆಯಾಗಿದೆ. ಇದೀಗ ಬಾಂಬ್ ಬೆದರಿಕೆ ಕರೆ ಮಾಡಿದ ಆರೋಪದಲ್ಲಿ ಬೆಂಗಳೂರು ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.

Advertisement
Tags :
Advertisement