ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹರಿಪ್ರಸಾದ್ ಚಡ್ಡಿ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದ ಪ್ರಹ್ಲಾದ್​ ಜೋಶಿ  

ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ​ ನಾಯಕ ಬಿಕೆ ಹರಿಪ್ರಸಾದ್  ಅವರು​ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರ ವಿರುದ್ಧ “ಪಂಚೆ ಹಾಕಿಕೊಂಡು ಹ್ಯುಬ್ಲೋಟ್‌ ವಾಚ್‌ ಕಟ್ಟಿಕೊಂಡು, ಒಳಗೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಎಂದು ಹೇಳಿದರೆ ಆಗೋದಿಲ್ಲ” ಎಂದು ಹೇಳಿದ್ದರು. 
12:15 PM Dec 10, 2023 IST | Ashika S

ಹುಬ್ಬಳ್ಳಿ: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ​ ನಾಯಕ ಬಿಕೆ ಹರಿಪ್ರಸಾದ್  ಅವರು​ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರ ವಿರುದ್ಧ “ಪಂಚೆ ಹಾಕಿಕೊಂಡು ಹ್ಯುಬ್ಲೋಟ್‌ ವಾಚ್‌ ಕಟ್ಟಿಕೊಂಡು, ಒಳಗೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಎಂದು ಹೇಳಿದರೆ ಆಗೋದಿಲ್ಲ” ಎಂದು ಹೇಳಿದ್ದರು.

Advertisement

ಈ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ  ಪ್ರತಿಕ್ರಿಯಿಸಿದ್ದು ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇಲ್ಲ, ಒಳಜಗಳ ಜಾಸ್ತಿಯಾಗಿದೆ. ಸಿದ್ದರಾಮಯ್ಯ ಚಡ್ಡಿ ಹಾಕಿದ್ದಾರೆ ಎಂದು ಹರಿಪ್ರಸಾದ್ ಹೇಳಿದ್ದರು. ಹರಿಪ್ರಸಾದ್ ಚಡ್ಡಿ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೋಶಿ, ಅವರು ಎಂಎಲ್​ಸಿ ಬಿಕೆ ಹರಿಪ್ರಸಾದ್ ಯಾವ ಅರ್ಥದಲ್ಲಿ ಈ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಬಿಕೆ ಹರಿಪ್ರಸಾದ್​ ಅವರು ಬಿಜೆಪಿಗೆ ಬೈದಿದ್ದಾರೆ.  ಬಿಕೆ ಹರಿಪ್ರಸಾದ್ ಅವರ​ ವಿರುದ್ಧ ಕಾಂಗ್ರೆಸ್​ನಲ್ಲಿ ಮಸಲತ್ತು ಮಾಡುತ್ತಿದ್ದಾರೆ. ಮಸಲತ್ತು ಮಾಡುತ್ತಿರುವವರ ವಿರುದ್ಧ ಬಿಕೆ ಹರಿಪ್ರಸಾದ್​​ಗೆ ಮಾತನಾಡುವ ತಾಕತ್​ ಇಲ್ಲ ಎಂದು ವಾಗ್ದಾಳಿ ಮಾಡಿದರು.

Advertisement

ಬಿಕೆ ಹರಿಪ್ರಸಾದ್ ಅವರನ್ನು ಈಡಿಗ ಸಮುದಾಯ ಗುರುತಿಸಿದೆ. ಅದರ ವಿರುದ್ಧ ಸಿದ್ದರಾಮಯ್ಯ ಸಮಾವೇಶ ಮಾಡುತ್ತಿದ್ದಾರೆ. ಅವರು ಎಷ್ಟು ಪುಟೀತಾರೆ ನೋಡಿ‌ ಮುಂದೆ ಮಾತಾಡೋಣ ಎಂದು ಹೇಳಿದರು.

ಸರ್ಕಾರದಲ್ಲಿ ಜಗಳ, ಪರಸ್ಪರ ಕೆಸರೆಚಾಟ ಹೆಚ್ಚಾಗಿದೆ. ಇದರಿಂದ ಆಡಳಿತದ ಮೇಲೆ ಪರಿಣಾಮ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ನೀಡುವ ಅಕ್ಕಿ ಬಿಟ್ಟು ಒಂದು ಕಾಳು ಅಕ್ಕಿ ಕೂಡ ರಾಜ್ಯ ಸರ್ಕಾರ ಕೊಟ್ಟಿಲ್ಲ. ಅದನ್ನೇ ಅನ್ನಭಾಗ್ಯ ಅಂತಿದ್ದಾರೆ. ಇದು ಕಾಂಪಿಟೇಷನ್ ಇನ್ ಕರಪ್ಷನ್ ಸರ್ಕಾರ. ಸರ್ಕಾರ ವಿದ್ಯುತ್​ ಕೊಡುತ್ತಿಲ್ಲ ಎಂದು ರೈತರೇ ಹೇಳುತ್ತಿದ್ದಾರೆ. ಸರ್ಕಾರ ತನ್ನ ಕಂಟ್ರೋಲ್‌ ‌ಕಳೆದುಕೊಂಡಿದೆ ಎಂದರು.

Advertisement
Tags :
LatetsNewsNewsKannadaಕಾಂಗ್ರೆಸ್ಬಿಕೆ ಹರಿಪ್ರಸಾದ್ಮುಖ್ಯಮಂತ್ರಿಸಚಿವ ಸ್ಥಾನಸಿದ್ದರಾಮಯ್ಯಹ್ಯುಬ್ಲೋಟ್‌ ವಾಚ್‌
Advertisement
Next Article