For the best experience, open
https://m.newskannada.com
on your mobile browser.
Advertisement

ದೇವರ ಆಶೀರ್ವಾದದಿಂದ ಅದ್ಭುತ ಕ್ಯಾಚ್ ಪಡೆದೆ ; ಸೂರ್ಯಕುಮಾರ್‌ ಯಾದವ್‌

ದೇವರ ಆಶೀರ್ವಾದದಿಂದ ನಾನು ಆ ಸಂದರ್ಭದಲ್ಲಿ ಆ ಜಾಗದಲ್ಲಿ ಇದ್ದುದರಿಂದ ಅಂತಹ ಒಂದು ಅದ್ಭುತ ಕ್ಯಾಚ್ ಪಡೆಯಲು ಅವಕಾಶ ನನಗೆ ಸಿಕ್ಕಿತು ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಸೂರ್ಯ ಕುಮಾರ್ ಯಾದವ್ ತಿಳಿಸಿದ್ದಾರೆ.
03:03 PM Jul 09, 2024 IST | Chaitra Kulal
ದೇವರ ಆಶೀರ್ವಾದದಿಂದ ಅದ್ಭುತ ಕ್ಯಾಚ್ ಪಡೆದೆ   ಸೂರ್ಯಕುಮಾರ್‌ ಯಾದವ್‌

ಉಡುಪಿ: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾನು ಕ್ಯಾಚ್ ಹಿಡಿಯುವ ಸಂದರ್ಭ ಬೌಂಡರಿ ಲೈನ್ ಅನ್ನು ಟಚ್ ಮಾಡಿಲ್ಲ. ಪ್ರಪಂಚದ ಎಲ್ಲಾ ಜನರನ್ನು ಖುಷಿಪಡಿಸಲು ಸಾಧ್ಯವಿಲ್ಲ. ದೇವರ ಆಶೀರ್ವಾದದಿಂದ ನಾನು ಆ ಸಂದರ್ಭದಲ್ಲಿ ಆ ಜಾಗದಲ್ಲಿ ಇದ್ದುದರಿಂದ ಅಂತಹ ಒಂದು ಅದ್ಭುತ ಕ್ಯಾಚ್ ಪಡೆಯಲು ಅವಕಾಶ ನನಗೆ ಸಿಕ್ಕಿತು ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಸೂರ್ಯ ಕುಮಾರ್ ಯಾದವ್ ತಿಳಿಸಿದ್ದಾರೆ.

Advertisement

ಗ (1)

ಕಾಪು ಶ್ರೀ ಹೊಸ ಮಾರಿಗುಡಿ ದೈವಸ್ಥಾನಕ್ಕೆ ಇಂದು ಪತ್ನಿ ದೇವಿಶಾ ಜೊತೆ ಭೇಟಿ ನೀಡಿದ ಬಳಿಕ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ಯಾಚ್ ಬಗ್ಗೆ ನಡೆಯುತ್ತಿರುವ ಚರ್ಚೆ ಹಾಗೂ ವಿವಾದ ಕುರಿತ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

Advertisement

ಪ್ರಾಕ್ಟೀಸ್ ಮಾಡುವಾಗ ಅಂತಹ ಕ್ಯಾಚ್ ಗಳನ್ನು ಪಡೆಯಲು ನಾವು ತರಬೇತಿ ಪಡೆಯುತ್ತೇವೆ. ದೇಶಕ್ಕೆ ಕಪ್ ತಂದುಕೊಡಲು ಅಂತಹ ಸಂದರ್ಭವನ್ನು ದೇವರ ಸೃಷ್ಟಿ ಮಾಡಿದ್ದಾನೆ. ಆ ಸಂದರ್ಭದಲ್ಲಿ ನಾನು ದೇವರನ್ನು ನೆನೆದುಕೊಂಡಿದ್ದೆ ಎಂದರು. ತಂಡದ ಕಪ್ತಾನ ಆಗುವುದು ನಮ್ಮ ಕೈಯಲ್ಲಿಲ್ಲ. ದೇಶಕ್ಕಾಗಿ ಉತ್ತಮವಾಗಿ ಆಡುವುದು ಮಾತ್ರ ನಮ್ಮ ಗುರಿಯಾಗಿದೆ.

Advertisement
Tags :
Advertisement