ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜ್ಯುವೆಲ್ಲರಿ ಮಾಲೀಕರ ಮನೆಯಲ್ಲಿ ಐಟಿ ದಾಳಿ ವೇಳೆ ಅಪ್ತಾಪ್ತ ಹೆಣ್ಣುಮಕ್ಕಳು ಪತ್ತೆ

ಜಯನಗರ ಜುವೆಲ್ಲರಿ ಶೋರೂಂಗಳ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ದಾಳಿ ವೇಳೆ ಅಕ್ರಮದ ಜಾಡು ಕಂಡು ಆದಾಯ ತೆರಿಗೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
10:46 AM Dec 18, 2023 IST | Ashika S

ಬೆಂಗಳೂರು: ಜಯನಗರ ಜುವೆಲ್ಲರಿ ಶೋರೂಂಗಳ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ದಾಳಿ ವೇಳೆ ಅಕ್ರಮದ ಜಾಡು ಕಂಡು ಆದಾಯ ತೆರಿಗೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

Advertisement

ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಬೆಳಕಿಗೆ ಬಂದಿದೆ. ತಂತ್ರಜ್ಞಾನ ಬಳಸಿಕೊಂಡು ವಂಚನೆ ಮಾಡ್ತಿದ್ದ ಜಾಲವನ್ನ ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಂದಾಜು 3 ಸಾವಿರ ಕೆಜಿ‌ ಚಿನ್ನ ಮತ್ತು ವಜ್ರವನ್ನ ಹಣದ ರೂಪದಲ್ಲಿ ಸೇಲ್ ಮಾಡಿದ್ದ ವಂಚಕನನ್ನ IT ಅಧಿಕಾರಿಗಳ ತಂಡ ಪತ್ತೆ ಮಾಡಿದೆ.

ಇನ್ನು ಮತ್ತೊಂದೆಡೆ ಐಟಿ ರೇಡ್ ವೇಳೆ ಚಿನ್ನದ ಅಂಗಡಿ ಮಾಲೀಕನ ಮನೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಜುವೆಲ್ಲರಿ ಶಾಪ್ ಮನೆ ಮಾಲೀಕರ ಮನೆಯಲ್ಲಿ ಶೋಧ ನಡೆಸುವಾಗ 10ತ್ತು 8 ವರ್ಷದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಯಡಿಯೂರಿನ ಸಾಕಮ್ಮ ಗಾರ್ಡನ್ ನಲ್ಲಿರುವ ಗೌರವ್ ಚೋರ್ಡಿಯಾ ಎಂಬ ಚಿನ್ನದ ಅಂಗಡಿ ಮಾಲೀಕನ ಮನೆಯಲ್ಲಿ ಬಿಹಾರದ ಗಾಯಾ ಜಿಲ್ಲೆ ಮೂಲದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಮಕ್ಕಳನ್ನು ಮನೆಯ ಮಾಲಕಿ ಪಿಂಕಿ ಜೈನ್ ಆರೈಕೆಗೆ ಕರೆತಂದಿದ್ದಾಗಿ ತಿಳಿದು ಬಂದಿದೆ. ಸದ್ಯ ಐಟಿ ಅಧಿಕಾರಿಗಳು ಅಪ್ರಾಪ್ತ ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಿ ಹಿರಿಯ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.

Advertisement
Tags :
LatetsNewsNewsKannadaಆದಾಯ ತೆರಿಗೆಐಟಿಜಯನಗರಜುವೆಲ್ಲರಿ ಶೋರೂಂದಾಳಿಪ್ರಕರಣಹೆಣ್ಣುಮಕ್ಕಳು
Advertisement
Next Article