ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಐಸಿಸಿಯಿಂದ ಟಿ20 2024ರ ವಿಶ್ವಕಪ್ ಲೋಗೊ ಅನಾವರಣ

ಜೂನ್ 4, 2024 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್​ಗಾಗಿ ಐಸಿಸಿ ಹೊಸ ಲೋಗೊವನ್ನು ಅನಾವರಣಗೊಳಿಸಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಆತಿಥ್ಯವಹಿಸಲಿರುವ ಪುರುಷರ ಟಿ20 ವಿಶ್ವಕಪ್​ ಹಾಗೂ ಬಾಂಗ್ಲಾದೇಶದಲ್ಲಿ ನಡೆಯಲಿರುವ ಮಹಿಳಾ ಟಿ20 ವರ್ಲ್ಡ್​ಕಪ್​ಗಾಗಿ ಒಂದೇ ವಿನ್ಯಾಸದ ಲೋಗೊವನ್ನು ಬಳಸಿರುವುದು ವಿಶೇಷ.
03:23 PM Dec 07, 2023 IST | Ashitha S

ಮುಂಬೈ: ಜೂನ್ 4, 2024 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್​ಗಾಗಿ ಐಸಿಸಿ ಹೊಸ ಲೋಗೊವನ್ನು ಅನಾವರಣಗೊಳಿಸಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಆತಿಥ್ಯವಹಿಸಲಿರುವ ಪುರುಷರ ಟಿ20 ವಿಶ್ವಕಪ್​ ಹಾಗೂ ಬಾಂಗ್ಲಾದೇಶದಲ್ಲಿ ನಡೆಯಲಿರುವ ಮಹಿಳಾ ಟಿ20 ವರ್ಲ್ಡ್​ಕಪ್​ಗಾಗಿ ಒಂದೇ ವಿನ್ಯಾಸದ ಲೋಗೊವನ್ನು ಬಳಸಿರುವುದು ವಿಶೇಷ.

Advertisement

ಇನ್ನು ಈ ಲೋಗೊದಲ್ಲಿ ಬ್ಯಾಟ್, ಬಾಲ್ ಮತ್ತು ಎರ್ನಜಿಯನ್ನು ಸಂಕೇತಿಸುವ ಚಿಹ್ನೆಗಳನ್ನು ಬಳಸಲಾಗಿದ್ದು, ಈ ಮೂಲಕ ಉತ್ಸಾಹಭರಿತ ಟಿ20 ವಿಶ್ವಕಪ್​ ಅನ್ನು ಪ್ರತಿಬಿಂಬಿಸಲಾಗಿದೆ. ಈ ಲೋಗೊ ವಿನ್ಯಾಸದ ಅನವಾರಣದ ವಿಡಿಯೋವನ್ನು ಐಸಿಸಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಇನ್ನು ಜೂನ್ 4, 2024 ರಿಂದ ಜೂನ್ 30 ರವರೆಗೆ ಟಿ20 ವಿಶ್ವಕಪ್​ ಜರುಗಲಿದೆ. 20 ತಂಡಗಳು ಕಣಕ್ಕಿಳಿಯಲಿರುವ ಈ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳನ್ನಾಡಲಾಗುತ್ತದೆ.

Advertisement

ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ ತಂಡಗಳು ಹೀಗಿವೆ. . ಭಾರತ., ಅಫ್ಘಾನಿಸ್ತಾನ್., ಆಸ್ಟ್ರೇಲಿಯಾ., ಬಾಂಗ್ಲಾದೇಶ್., ಕೆನಡಾ., ಇಂಗ್ಲೆಂಡ್., ಐರ್ಲೆಂಡ್., ನಮೀಬಿಯಾ., ನೇಪಾಳ., ನೆದರ್ಲ್ಯಾಂಡ್ಸ್., ನ್ಯೂಝಿಲೆಂಡ್., ಒಮಾನ್., ಪಾಕಿಸ್ತಾನ್., ಪಪುವಾ ನ್ಯೂಗಿನಿಯಾ., ಸ್ಕಾಟ್ಲೆಂಡ್.,ಸೌತ್ ಆಫ್ರಿಕಾ ಆಫ್ರಿಕಾ., ಶ್ರೀಲಂಕಾ., ಉಗಾಂಡ., ಯುಎಸ್​ಎ., ವೆಸ್ಟ್ ಇಂಡೀಸ್.

 

Advertisement
Tags :
indiaLatestNewsNewsKannadaಟಿ20ನವದೆಹಲಿವಿಶ್ವಕಪ್ವಿಶ್ವಕಪ್ ಲೋಗೊ
Advertisement
Next Article