For the best experience, open
https://m.newskannada.com
on your mobile browser.
Advertisement

90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ

ನೋಕಿಯಾ ತನ್ನ 3210 ಫೋನನ್ನು ಮತ್ತೆ ಮರು ಪರಿಚಯಿಸಿದೆ. 90ರ ದಶಕದಲ್ಲಿ ಐಕಾನಿಕ್​ ಫೋನ್​ ಆಗಿ ಮಾರುಕಟ್ಟೆಗೆ ಬಂದ ನೋಕಿಯಾ 3210 ಇದೀಗ ಗ್ರಾಹಕರ ಗಮನ ಸೆಳೆಯಲು ಮುಂದಾಗಿದೆ.
10:53 AM May 16, 2024 IST | Ashitha S
90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ

ದೆಹಲಿ: ನೋಕಿಯಾ ತನ್ನ 3210 ಫೋನನ್ನು ಮತ್ತೆ ಮರು ಪರಿಚಯಿಸಿದೆ. 90ರ ದಶಕದಲ್ಲಿ ಐಕಾನಿಕ್​ ಫೋನ್​ ಆಗಿ ಮಾರುಕಟ್ಟೆಗೆ ಬಂದ ನೋಕಿಯಾ 3210 ಇದೀಗ ಗ್ರಾಹಕರ ಗಮನ ಸೆಳೆಯಲು ಮುಂದಾಗಿದೆ.

Advertisement

ಅಚ್ಚರಿ ಸಂಗತಿ ಎಂದರೆ 25 ವರ್ಷಗಳ ನಂತರ ನೋಕಿಯಾ 3210 ಫೋನನ್ನು ಮಾರುಕಟ್ಟೆಗೆ ಮರು ಪರಿಚಯಿಸಿದೆ. 4ಜಿ ಸಂಪರ್ಕದೊಂದಿಗೆ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಯೂಟ್ಯೂಬ್​ ಶಾರ್ಟ್​ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ನೋಕಿಯಾ 3210 ಫೋನನ್ನು ಪರಿಚಯಿಸಿದ್ದೇ ತಡ ಸದ್ಯ ಕಂಪನಿ ‘ಔಟ್​ ಆಫ್​ ಸ್ಟಾಕ್​’ ಎಂದು ವರದಿ ಮಾಡಿದೆ. ನೋಕಿಯಾ ಅಧಿಕೃತ ವೆಬ್​ಸೈಟ್​ನಲ್ಲಿ ಮಾರಾಟ ಮಾಡುತ್ತಿದೆ. ಆದರೆ ಬೇಡಿಕೆ ಹೆಚ್ಚಾಗಿರುವ ಕಾರಣ ಸ್ಟಾಕ್​ ಖಾಲಿಯಾಗಿದೆ ಎಂದಿದೆ. ಅಂದಹಾಗೆಯೇ ಇದನ್ನು ಮೂರು ಬಣ್ಣದಲ್ಲಿ (ಕಪ್ಪು, ನೀಲಿ, ಚಿನ್ನದ ಬಣ್ಣ) ಕಂಪನಿ ಪರಿಚಯಿಸಿದೆ.

Advertisement

Advertisement
Tags :
Advertisement