ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇನ್ಮುಂದೆ ಇನ್ಸ್‌ಟಾಗ್ರಾಂನಲ್ಲಿ ಬೆತ್ತಲೆ ಚಿತ್ರ ಕಳಿಸಿದ್ರೆ ತನ್ನಿಂತಾನೇ ಬ್ಲರ್

ಇನ್‌ಸ್ಟಾಗ್ರಾಂನಲ್ಲಿ ಮಕ್ಕಳು ಹಾಗೂ ಇತರರ ಬೆತ್ತಲೆ ಚಿತ್ರಗಳನ್ನು ‘ಡೈರೆಕ್ಟ್‌ ಮೆಸೇಜ್‌’ (ಡಿಎಂ ಅಥವಾ ನೇರ ಸಂದೇಶ) ಮೂಲಕ ಕಳಿಸಿ ಹಣ ಪೀಕಲು ಕೆಲ ಕಿಡಿಗೇಡಿಗಳು ಯತ್ನಿಸುತ್ತಿದ್ದಾರೆ. ಹೀಗಾಗಿ ಇದರ ತಡೆಗೆ ಮಕ್ಕಳ ಬೆತ್ತಲೆ ಚಿತ್ರಗಳಿದ್ದರೆ ಅವರನ್ನು ತನ್ನಿಂತಾನೆ ಮಸುಕು (ಬ್ಲರ್‌ ಮಾಡುವ) ತಂತ್ರಜ್ಞಾನವನ್ನು ಅಳವಡಿಸಲು ಇನ್‌ಸ್ಟಾಗ್ರಾಂ ನಿರ್ಧರಿಸಿದೆ.
04:22 PM Apr 12, 2024 IST | Ashitha S

ಲಂಡನ್‌: ಇನ್‌ಸ್ಟಾಗ್ರಾಂನಲ್ಲಿ ಮಕ್ಕಳು ಹಾಗೂ ಇತರರ ಬೆತ್ತಲೆ ಚಿತ್ರಗಳನ್ನು ‘ಡೈರೆಕ್ಟ್‌ ಮೆಸೇಜ್‌’ (ಡಿಎಂ ಅಥವಾ ನೇರ ಸಂದೇಶ) ಮೂಲಕ ಕಳಿಸಿ ಹಣ ಪೀಕಲು ಕೆಲ ಕಿಡಿಗೇಡಿಗಳು ಯತ್ನಿಸುತ್ತಿದ್ದಾರೆ. ಹೀಗಾಗಿ ಇದರ ತಡೆಗೆ ಮಕ್ಕಳ ಬೆತ್ತಲೆ ಚಿತ್ರಗಳಿದ್ದರೆ ಅವರನ್ನು ತನ್ನಿಂತಾನೆ ಮಸುಕು (ಬ್ಲರ್‌ ಮಾಡುವ) ತಂತ್ರಜ್ಞಾನವನ್ನು ಅಳವಡಿಸಲು ಇನ್‌ಸ್ಟಾಗ್ರಾಂ ನಿರ್ಧರಿಸಿದೆ.

Advertisement

ಅಮೆರಿಕ ಹಾಗೂ ನೈಜೀರಿಯಾದಲ್ಲಿ ಕಿಡಿಕೇಡಿಗಳು ಮಕ್ಕಳ ಬೆತ್ತಲೆ ಚಿತ್ರಗಳನ್ನು ಮಕ್ಕಳಿಗೆ ಅಥವಾ ಅವರ ಪಾಲಕರಿಗೆ ಕಳಿಸಿ ಹಣ ಪೀಕುವ ಯತ್ನ ನಡೆದಿದ್ದವು. ಹೀಗಾಗಿ ಇನ್‌ಸ್ಟಾಗ್ರಾಂ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು.

ಹೀಗಾಗಿ ಇನ್ನು ಇಂಥ ಚಿತ್ರಗಳು ಡಿಎಂಗಳಲ್ಲಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಬಂದರೆ ಬ್ಲರ್‌ ಆಗಿ ಕಾಣಿಸಲಿವೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬಂದರೆ ಮಸುಕಾಗಿಯೇ ಇರುತ್ತವೆ. ‘ಇದನ್ನು ಓಪನ್ ಮಾಡುವುದಕ್ಕೂ ಮುನ್ನ ಎಚ್ಚರ. ಇದರಲ್ಲಿ ಅಶ್ಲೀಲತೆ ಇದೆ’ ಎಂಬ ಸಂದೇಶ ಅದರ ಜತೆ ಬರುತ್ತದೆ. ಅವರು ಓಕೆ ಎಂದರೆ ಮಾತ್ರ ಚಿತ್ರ ಒಪನ್‌ ಆಗುತ್ತದೆ. ಇಲ್ಲದಿದ್ದರೆ ಇಲ್ಲ. ಇಂಥ ಮೆಸೇಜ್‌ಗಳನ್ನು ಕಳಿಸಿದವರ ವಿರುದ್ಧ ಸ್ವೀಕರಿಸಿದವರು ಇನ್‌ಸ್ಟಾಗೆ ದೂರು ಕೂಡ ನೀಡಬಹುದು. ಇದರ ಜತೆಗೆ ಇದು ಬಳಕೆದಾರರು ಮೆಟಾದ ಸುರಕ್ಷತಾ ಸಲಹೆಗಳನ್ನು ಕೂಡ ನೀಡುತ್ತದೆ. ಸ್ಕ್ರೀನ್‌ಶಾಟ್ ಅಥವಾ ಫಾರ್ವರ್ಡ್ ಬಗ್ಗೆಯೂ ಸಲಹೆಯನ್ನು ನೀಡುತ್ತದೆ.

Advertisement

 

 

Advertisement
Tags :
BreakingNewsindiaINSTAGRAMLatestNewsNewsKarnataka
Advertisement
Next Article