ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಯೋಧ್ಯೆ ರಾಮನ ಭಕ್ತರಿಗಾಗಿ ತಯಾರಾಗುತ್ತಿದೆ ವಿಶೇಷ ಪ್ರಸಾದ

ಜ.೨೨ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ʼಇಲಾಚಿ ದಾನಾʼವನ್ನು ಪ್ರಸಾದವಾಗಿ ನೀಡಲಾಗುವುದು.
07:18 PM Jan 04, 2024 IST | Maithri S

ಅಯೋಧ್ಯೆ: ಜ.೨೨ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ʼಇಲಾಚಿ ದಾನಾʼವನ್ನು ಪ್ರಸಾದವಾಗಿ ನೀಡಲಾಗುವುದು.

Advertisement

ಭಾರತದ ಕೆಲ ದೇವಸ್ಥಾನಗಳಲ್ಲಿ ಕೊಡುವ ಪ್ರಸಾದಗಳಿಗೆ ತಮ್ಮದೇ ಆದ ವಿಶೇಷತೆಗಳಿವೆ. ತಿರುಪತಿಯ ಲಡ್ಡು, ಕೃಷ್ಣ ದೇವಾಲಯಗಳ ವೈಷ್ಣೋ ದೇವಿ ಡ್ರೈ ಫ್ರೂಟ್ಸ್, ಪೊಂಗಲ್, ಅನ್ನ ಪ್ರಸಾದಗಳು ತಮ್ಮದೇ ಆದ ಗುರುತು ಹಾಗು ಮಹತ್ವವನ್ನು ಹೊಂದಿವೆ.

ಹೀಗಿರುವಾಗ ಹೊಸದಾಗಿ ನಿರ್ಮಾಣವಾಗಿರುವ ರಾಮಮಂದಿರದಲ್ಲಿ ಸಕ್ಕರೆ ಮತ್ತು ಏಲಕ್ಕಿ ಮಿಶ್ರಣದಿಂದ ತಯಾರಾದ ಇಲಾಚಿ ದಾನಾವನ್ನು ಪ್ರಸಾದವಾಗಿ ವಿತರಿಸಲಾಗುವುದು. ಇದನ್ನು ಈಗಾಗಲೇ ಅನೇಕ ದೇವಾಲಯಗಳಲ್ಲಿ ಕೊಡಲಾಗುತ್ತಿದ್ದು, ಏಲಕ್ಕಿಯ ಔಷದೀಯ ಗುಣಗಳು ಪ್ರಸಾದಕ್ಕೆ ಇನ್ನಷ್ಟು ಶಕ್ತಿ ತುಂಬಲಿವೆ.

Advertisement

ರಾಮ್‌ವಿಲಾಸ್‌ ಅಂಡ್‌ ಸನ್ಸ್‌ ಸಂಸ್ಥೆಗೆ ಪ್ರಸಾದ ತಯಾರಿಕೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

Advertisement
Tags :
AyodhyaAyodhya Ram templeindiaLatestNewsNewsKannadaPrasada
Advertisement
Next Article