For the best experience, open
https://m.newskannada.com
on your mobile browser.
Advertisement

ರಜನಿಕಾಂತ್‌ ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ

ಸೂಪರ್‌ಸ್ಟಾರ್ ರಜನಿಕಾಂತ್ 171ನೇ ಸಿನಿಮಾ 'ಕೂಲಿ' ಟೈಟಲ್ ಟೀಸರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಇದೀಗ ʻಕೂಲಿʼ ತಂಡಕ್ಕೆ ಸಂಗೀತ ನಿರ್ದೇಶಕ ಇಳಯರಾಜ ನೋಟಿಸ್ ಕಳುಹಿಸಿದ್ದಾರೆ. ಇಳಯರಾಜ ಕಂಪೋಸ್ ಮಾಡಿದ್ದ ಹಾಡಿನ ತುಣುಕನ್ನು ಬಳಸಿಕೊಂಡಿದ್ದಾರೆಂದು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಹೀಗಾಗಿ ಚಿತ್ರತಂಡ ಕಾನೂನು ಸಮಸ್ಯೆ ಎದುರಿಸುತ್ತಿದೆ.
11:44 AM May 02, 2024 IST | Ashitha S
ರಜನಿಕಾಂತ್‌ ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ

ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ 171ನೇ ಸಿನಿಮಾ 'ಕೂಲಿ' ಟೈಟಲ್ ಟೀಸರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಇದೀಗ ʻಕೂಲಿʼ ತಂಡಕ್ಕೆ ಸಂಗೀತ ನಿರ್ದೇಶಕ
ಇಳಯರಾಜ ನೋಟಿಸ್ ಕಳುಹಿಸಿದ್ದಾರೆ. ಇಳಯರಾಜ ಕಂಪೋಸ್ ಮಾಡಿದ್ದ ಹಾಡಿನ ತುಣುಕನ್ನು ಬಳಸಿಕೊಂಡಿದ್ದಾರೆಂದು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಹೀಗಾಗಿ ಚಿತ್ರತಂಡ ಕಾನೂನು ಸಮಸ್ಯೆ ಎದುರಿಸುತ್ತಿದೆ.

Advertisement

ವರದಿಯ ಪ್ರಕಾರ, ʻಕೂಲಿʼ ಸಿನಿಮಾ ತಂಡ 1983ರ ʻತಂಗ ಮಗನ್ʼ ಚಿತ್ರದ ʻವಾ ವಾ ಪಕ್ಕಂ ವಾʼ ಹಾಡನ್ನು ಅನುಮತಿ ಪಡೆಯದೆ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ ಇಳಯರಾಜ. ಈ ಸಿನಿಮಾ ಟೈಟಲ್ ಟೀಸರ್‌ ಇತ್ತೀಚೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇಂತಹ ಸಂದರ್ಭದಲ್ಲಿ ಇಳಯರಾಜ ಟ್ಯೂನ್ ಹಾಕಿದ ಹಾಡನ್ನು ನೆಟ್ಟಿಗರೇ ಗುರುತಿಸಿದ್ದರು.

ಕೂಲಿ ಸಿನಿಮಾಗೆ ಅನಿರುದ್ಧ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಇಳಯರಾಜ ಅವರ ʻವಾ ವಾ ಪಕಂ ವಾʼ ಹಾಡನ್ನು ಚಿತ್ರಕ್ಕಾಗಿ ಮರುಸೃಷ್ಟಿಸಿದ್ದರು. ಇದಕ್ಕೆ ಇಳಯರಾಜ ಅನುಮತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ನಿರ್ಮಾಣ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.

Advertisement

ಅಲ್ಲದೇ 'ಕೂಲಿ' ಟೀಸರ್ ನಿಂದ ಮ್ಯೂಸಿಕ್‌ ತೆಗೆಯದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದೀಗ ಸನ್ ಪಿಕ್ಚರ್ಸ್ ಸಂಸ್ಥೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಈ ಘಟನೆ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

Advertisement
Tags :
Advertisement