For the best experience, open
https://m.newskannada.com
on your mobile browser.
Advertisement

ಬಾಂಗ್ಲಾ ಪ್ರಜೆಗಳ ಕಳ್ಳಸಾಗಣೆ; ಅಕ್ರಮವಾಗಿ ಗಡಿ ದಾಟಿದವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಬಾಂಗ್ಲಾದ ಗಡಿಯ ಮೂಲಕ ವಿದೇಶಿಗರನ್ನು ಅಕ್ರಮವಾಗಿ ಗಡಿದಾಟಿಸುತ್ತಿದ್ದ ೧೨ ಬಾಂಗ್ಲಾ ಪ್ರಜೆಗಳ ವಿರುದ್ಧ ಎನ್.ಐ.ಎ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಅದರಲ್ಲಿ ಅನೇಕ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ.
08:02 PM Feb 06, 2024 IST | Maithri S
ಬಾಂಗ್ಲಾ ಪ್ರಜೆಗಳ ಕಳ್ಳಸಾಗಣೆ  ಅಕ್ರಮವಾಗಿ ಗಡಿ ದಾಟಿದವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಬಾಂಗ್ಲಾದ ಗಡಿಯ ಮೂಲಕ ವಿದೇಶಿಗರನ್ನು ಅಕ್ರಮವಾಗಿ ಗಡಿದಾಟಿಸುತ್ತಿದ್ದ ೧೨ ಬಾಂಗ್ಲಾ ಪ್ರಜೆಗಳ ವಿರುದ್ಧ ಎನ್.ಐ.ಎ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಅದರಲ್ಲಿ ಅನೇಕ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ.

Advertisement

ಉದ್ಯೋಗ ಮತ್ತು ಉತ್ತಮ‌ ಜೀವನೋಪಾಯದ ಆಮಿಷವೊಡ್ಡಿ ವಿದೇಶಿಗರನ್ನು ಭಾರತದ ಒಳಗೆ ನುಸುಳಿಸಿ ಅವರನ್ನೆಲ್ಲ ಬೆಂಗಳೂರಿನ ತ್ಯಾಜ್ಯ ವಿಂಗಡಣಾ ಗೋದಾಮಿನಲ್ಲಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ.

ಕಡಿಮೆ ವೇತನ ನೀಡಿ ಅವರನ್ನು ದುಡಿಸಿಕೊಳ್ಳುತ್ತಿದ್ದದ್ದು ಅಷ್ಟೇ ಅಲ್ಲ, ಪ್ರತಿಭಟಿಸಿದರೆ ಅಕ್ರಮ ವಲಸಿಗರೆಂದು ಜೈಲಿಗೆ ಹಾಕಿಸುವುದಾಗಿ ಹೆದರಿಸಲಾಗಿತ್ತೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

Advertisement

12 ಆರೋಪಿಗಳ ಬಳಿ 61 ಆಧಾರ್ ಕಾರ್ಡ್​ಗಳು ಮತ್ತು ಇತರೆ ಭಾರತೀಯ ಗುರುತಿನ ದಾಖಲೆಗಳು ಪತ್ತೆಯಾಗಿದ್ದು, ಎನ್​ಐಎ ವಶಕ್ಕೆ ಪಡೆದುಕೊಂಡಿತ್ತು.

Advertisement
Tags :
Advertisement