For the best experience, open
https://m.newskannada.com
on your mobile browser.
Advertisement

ಅಕ್ರಮ ವಿವಾಹದ ಆರೋಪ; ಪತಿಯಂತೆ ಜೈಲು ಸೇರಲಿರುವ ಇಮ್ರಾನ್ ಖಾನ್ ಪತ್ನಿ?

ಈಗಾಗಲೇ ಹಲವು ಆರೋಪಗಳನ್ನು ಎದುರಿಸುತ್ತ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ೨೦೧೮ರಲ್ಲಿ ಬುಶ್ರಾ ಖಾನ್ ರೊಂದಿಗೆ ನಡೆದ ವಿವಾಹ ಕಾನೂನನ್ನು ಉಲ್ಲಂಘಿಸಿದೆ ಎಂದು ತೀರ್ಪು ನೀಡಿದ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಈ ಬಗ್ಗೆ ಅವರ PTI ಪಕ್ಷ ಮಾಹಿತಿ ನೀಡಿದೆ.
08:14 PM Feb 03, 2024 IST | Maithri S
ಅಕ್ರಮ ವಿವಾಹದ ಆರೋಪ  ಪತಿಯಂತೆ ಜೈಲು ಸೇರಲಿರುವ ಇಮ್ರಾನ್ ಖಾನ್ ಪತ್ನಿ

ಇಸ್ಲಾಮಾಬಾದ್: ಈಗಾಗಲೇ ಹಲವು ಆರೋಪಗಳನ್ನು ಎದುರಿಸುತ್ತ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ೨೦೧೮ರಲ್ಲಿ ಬುಶ್ರಾ ಖಾನ್ ರೊಂದಿಗೆ ನಡೆದ ವಿವಾಹ ಕಾನೂನನ್ನು ಉಲ್ಲಂಘಿಸಿದೆ ಎಂದು ತೀರ್ಪು ನೀಡಿದ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಈ ಬಗ್ಗೆ ಅವರ PTI ಪಕ್ಷ ಮಾಹಿತಿ ನೀಡಿದೆ.

Advertisement

ರಾಜ್ಯದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದಕ್ಕೆ ಮತ್ತು ಅಕ್ರಮವಾಗಿ ರಾಜ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ ತೋಷ್ಕಾನಾ ಪ್ರಕರಣಕ್ಕೆ ಪತ್ನಿಯೊಂದಿಗೆ ಕ್ರಮವಾಗಿ ೧೦ ವರ್ಷ ಮತ್ತು ೧೪ ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಇದರೊಂದಿಗೆ ಇಬ್ಬರಿಗೂ 500,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ARY ನ್ಯೂಸ್ ವರದಿ ಮಾಡಿದೆ.

ತನ್ನ ಹಿಂದಿನ ಪತಿಗೆ ವಿಚ್ಛೇದನ ನೀಡಿ ಇಮ್ರಾನ್ ಖಾನ್ ಅವರನ್ನು ಮದುವೆಯಾದ ನಂತರ ಬುಶ್ರಾ ಖಾನ್ ʼಇದ್ದತ್ʼ ಅಥವ ಕಾಯುವ ಅವಧಿಯನ್ನು ಪೂರ್ಣಗೊಳಿಸಿರಲಿಲ್ಲ ಎಂದು ಆರೋಪಿಸಲಾಗಿದೆ.

Advertisement

ಇಮ್ರಾನ್ ಖಾನ್ ಈಗ ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯ ಜೈಲಿನಲ್ಲಿದ್ದಾರೆ. ಅವರ ಪತ್ನಿಗೆ ಇಸ್ಲಾಮಾಬಾದ್‌ನಲ್ಲಿರುವ ಅವರ ಬೆಟ್ಟದ ಮ್ಯಾನ್ಷನ್‌ನಲ್ಲಿ ಶಿಕ್ಷೆಯನ್ನು ಅನುಭವಿಸಲು ಅನುಮತಿಸಲಾಗಿದೆ.

Advertisement
Tags :
Advertisement