ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕುಸಿದು ಬಿದ್ದು ಮೃತಪಟ್ಟ ದೈವ ನರ್ತಕ: ಮಕ್ಕಳಿಗೆ ದೀಕ್ಷೆ ಬೂಳ್ಯ

ಇತ್ತೀಚೆಗೆ ಕೆಲವು ತಿಂಗಳ ಹಿಂದೆ ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲೇ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ.
12:40 PM Jan 27, 2024 IST | Ramya Bolantoor

ಮಂಗಳೂರು: ಇತ್ತೀಚೆಗೆ ಕೆಲವು ತಿಂಗಳ ಹಿಂದೆ ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲೇ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ಕಾಂತು ಅಜಿಲ ಮೃತಪಟ್ಟ ದೈವ ನರ್ತಕ. ಈ ಘಟನೆಯ ಬಳಿಕ ಆ ಗ್ರಾಮದ ಜನ ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು.

Advertisement

ಇದೇ ವಿಚಾರದಲ್ಲಿ ಊರವರು ಪ್ರಶ್ನಾಚಿಂತನೆ ಇಟ್ಟಾಗ ಮೃತಪಟ್ಟವರ ಮಗನೇ ದೈವ ನರ್ತಕನಾಗಬೇಕು ಅಂತ ಕಂಡು ಬಂದಿತ್ತು. ಪ್ರಶ್ನೆಯಲ್ಲಿ ಕಂಡು ಬಂದಂತೆ ದೈವದ ಮುಂದೆ ಮೃತಪಟ್ಟ ದೈವ ನರ್ತಕನ ಮಕ್ಕಳಿಗೆ ದೀಕ್ಷೆ ಬೂಳ್ಯ ನೀಡಲಾಯಿತು.

ಕಾಂತು ಅಜಿಲನ ಮಕ್ಕಳಾದ ಮೋನಪ್ಪ ಹಾಗೂ ದಿನೇಶ್ ಅವರು ದೀಕ್ಷೆ ಬೂಲ್ಯ ಪಡೆದು, ಸಂಬಂಧಪಟ್ಟ ನಾಲ್ಕು ಗ್ರಾಮಕ್ಕೆ ದೈವಗಳ ಸೇವೆಯ ಜವಾಬ್ದಾರಿ ಹೊತ್ತರು. ಈ ಅಪೂರ್ವ ಕ್ಷಣವನ್ನು ಊರ ಹಾಗೂ ಪರವೂರಿನ ದೈವಭಕ್ತರು ಕಣ್ತುಂಬಿಕೊಂಡರು.

Advertisement

Advertisement
Tags :
LatestNewsNewsKannadaಮಂಗಳೂರು
Advertisement
Next Article