ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಈ ಕಂಪನಿಯಲ್ಲಿ ಸತ್ತ ಪ್ರಾಣಿ ಕೀಟಗಳಿಗೂ ಸಿಗುತ್ತೆ ಶ್ರದ್ಧಾಂಜಲಿ

ಮನುಷ್ಯನ ಅಂತ್ಯ ಸಂಸ್ಕಾರದ ವೇಳೆ ಗೌರವಪೂರ್ವಕ ಶ್ರದ್ಧಾಂಜಲಿ ಸಿಗೋದು ಕಾಮನ್. ಆದ್ರೆ ಪ್ರಾಣಿ, ಕೀಟಗಳು ಕೂಡ ತಮ್ಮ ಜೀವವನ್ನು ಬಲಿದಾನ ಮಾಡುತ್ತವೆ ಎಂಬ ವಿಷ್ಯವನ್ನು ಕಂಪನಿಯೊಂದು ಅರಿತಿದೆ. ಕೀಟಗಳು ಸತ್ತಾಗ್ಲೂ ಮನುಷ್ಯರಿಗೆ ನೀಡುವಂತೆ ಶ್ರದ್ಧಾಂಜಲಿ ನೀಡಲಾಗುತ್ತದೆ. ಪ್ರತಿ ವರ್ಷ ಈ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತದೆ. 
07:03 PM Jan 05, 2024 IST | Ashika S

ಜಪಾನ್:  ಮನುಷ್ಯನ ಅಂತ್ಯ ಸಂಸ್ಕಾರದ ವೇಳೆ ಗೌರವಪೂರ್ವಕ ಶ್ರದ್ಧಾಂಜಲಿ ಸಿಗೋದು ಕಾಮನ್. ಆದ್ರೆ ಪ್ರಾಣಿ, ಕೀಟಗಳು ಕೂಡ ತಮ್ಮ ಜೀವವನ್ನು ಬಲಿದಾನ ಮಾಡುತ್ತವೆ ಎಂಬ ವಿಷ್ಯವನ್ನು ಕಂಪನಿಯೊಂದು ಅರಿತಿದೆ. ಕೀಟಗಳು ಸತ್ತಾಗ್ಲೂ ಮನುಷ್ಯರಿಗೆ ನೀಡುವಂತೆ ಶ್ರದ್ಧಾಂಜಲಿ ನೀಡಲಾಗುತ್ತದೆ. ಪ್ರತಿ ವರ್ಷ ಈ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತದೆ.

Advertisement

ಅರ್ಥ್ ಫಾರ್ಮಾಸ್ಯುಟಿಕಲ್ ಎಂಬ ಜಪಾನ್ ಕಂಪನಿ ಮನೆಯಲ್ಲಿ ಬಳಸುವ ಕೀಟನಾಶಕವನ್ನು ಇದು ತಯಾರಿಸುತ್ತದೆ. ಜಪಾನಿನಲ್ಲಿ ಇದು ಪ್ರಸಿದ್ಧ ಕೀಟನಾಶಕ ಕಂಪನಿಯಾಗಿದೆ. ಕಂಪನಿ ತನ್ನ ಉತ್ಪನ್ನಗಳ ಪರಿಣಾಮಗಳನ್ನು ಪರೀಕ್ಷಿಸಲು ನಗರದಲ್ಲಿ ವಿವಿಧ ಜಾತಿಯ ಕೀಟಗಳನ್ನು ಬಳಸುತ್ತದೆ.  ಈ ಸಂಶೋಧನಾ ಪ್ರಕ್ರಿಯೆಯಲ್ಲಿ ಕೆಲವು ಕೀಟಗಳು ಸಾಯುತ್ತವೆ . ಇಂತಹ ಪರಿಸ್ಥಿತಿಯಲ್ಲಿ  ಅರ್ಥ್ ಫಾರ್ಮಾಸ್ಯುಟಿಕಲ್ ಕೀಟಗಳ ಸಾವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಅವುಗಳಿಗೆ ಧನ್ಯವಾದ ಹೇಳುವ ಸಲುವಾಗಿ ಎಕೋ ನಗರದ ಮಯೋಡೋಜಿ ದೇವಸ್ಥಾನದಲ್ಲಿ ಕೀಟಗಳನ್ನು ಗೌರವಿಸಲು ಸಮಾರಂಭ ಏರ್ಪಡಿಸಲಾಗುತ್ತದೆ. ಹಿಂದಿನ ತಿಂಗಳು ಕೂಡ ಕಂಪನಿ ಈ ಸಮಾರಂಭ ಏರ್ಪಡಿಸಿತ್ತು.

ಈ ಸಮಾರಂಭದಲ್ಲಿ ಟಾವೋ ಧರ್ಮದ ಪಾದ್ರಿ ದಾವೋಶಿ, ಸತ್ತ ಕೀಟಗಳ ಡಜನ್ ಗಟ್ಟಲೆ ಫೋಟೋಗಳ ಮುಂದೆ ಪ್ರಾರ್ಥನೆ ಸಲ್ಲಿಸಿದ್ರು.  ಇದರಲ್ಲಿ ಸೊಳ್ಳೆಗಳು, ನೊಣಗಳು, ಜಿರಳೆಗಳು ಮತ್ತು ಇತರ ಕೀಟಗಳ ಚಿತ್ರಗಳನ್ನು ಹಾಕಲಾಗಿತ್ತು. ನಂತ್ರ ಅದರ ಮುಂದೆ ಪ್ರಾರ್ಥನೆ ಸಲ್ಲಿಸಲಾಯ್ತು.

ಅರ್ಥ್ ಫಾರ್ಮಾಸ್ಯುಟಿಕಲ್ ಇದೇ ಮೊದಲು ಈ ಸಮಾರಂಭ ನಡೆಸುತ್ತಿಲ್ಲ. ಕಳೆದ ನಾಲ್ಕು ದಶಕಗಳಿಂದ ಪ್ರತಿ ವರ್ಷ ಈ ವಿಶಿಷ್ಟ ಸಮಾರಂಭವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

Advertisement

ಅರ್ಥ್ ಫಾರ್ಮಾಸ್ಯುಟಿಕಲ್ ರಿಸರ್ಚ್ ಮುಖ್ಯಸ್ಥ ಟೊಮಿಹಿರೊ ಕೊಬೊರಿ ಪ್ರಕಾರ,ಅರ್ಥ್ ಫಾರ್ಮಾಸ್ಯುಟಿಕಲ್, ತನ್ನ ಸಂಶೋಧನೆಗಾಗಿ ಸುಮಾರು 1 ಮಿಲಿಯನ್ ಜಿರಳೆಗಳನ್ನು ಮತ್ತು 100 ಮಿಲಿಯನ್‌ಗಿಂತಲೂ ಹೆಚ್ಚು ಕೀಟಗಳನ್ನು ಬಳಸಿಕೊಳ್ಳುತ್ತದೆ. ಮಾನವನ ಆರೋಗ್ಯ ಮತ್ತು ಅನುಕೂಲಕ್ಕೆ ಕೀಟಗಳು ತ್ಯಾಗ ಮಾಡುತ್ತವೆ ಎಂದು ಅವರು ಹೇಳುತ್ತಾರೆ.

Advertisement
Tags :
LatestNewsNewsKannadaಅಂತ್ಯ ಸಂಸ್ಕಾರಕೀಟಪ್ರಾಣಿಶ್ರದ್ಧಾಂಜಲಿ
Advertisement
Next Article