For the best experience, open
https://m.newskannada.com
on your mobile browser.
Advertisement

ಕೆ.ಎಂ.ಸಿ ಅತ್ತಾವರದಲ್ಲಿ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್, ಬ್ಲಾಸಮ್ ಡಿಲಕ್ಸ್ ರೂಮ್‌ಗಳ ಉದ್ಘಾಟನೆ

ಕೆ.ಎಂ ಸಿ ಆಸ್ಪತ್ರೆ ಅತ್ತಾವರದಲ್ಲಿ ನೂತನ ಉನ್ನತೀಕರಿಸಿದ ಸಮಗ್ರ ಕ್ಯಾನ್ಸರ್ ಕೇರ್ ಸೆಂಟ‌ರ್ ಹಾಗು ಬ್ಲಾಸಮ್ ಡಿಲಕ್ಸ್ ರೂಮ್ ಗಳ ಉದ್ಘಾಟನೆ ಜನವರಿ  26 ರಂದು ನಡೆಯಿತು.
03:06 PM Jan 29, 2024 IST | Ashitha S
ಕೆ ಎಂ ಸಿ ಅತ್ತಾವರದಲ್ಲಿ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್  ಬ್ಲಾಸಮ್ ಡಿಲಕ್ಸ್ ರೂಮ್‌ಗಳ ಉದ್ಘಾಟನೆ

ಮಂಗಳೂರು: ಕೆ.ಎಂ ಸಿ ಆಸ್ಪತ್ರೆ ಅತ್ತಾವರದಲ್ಲಿ ನೂತನ ಉನ್ನತೀಕರಿಸಿದ ಸಮಗ್ರ ಕ್ಯಾನ್ಸರ್ ಕೇರ್ ಸೆಂಟ‌ರ್ ಹಾಗು ಬ್ಲಾಸಮ್ ಡಿಲಕ್ಸ್ ರೂಮ್ ಗಳ ಉದ್ಘಾಟನೆ ಜನವರಿ  26 ರಂದು ನಡೆಯಿತು.

Advertisement

ಕೆ.ಎಂ ಸಿ ಆಸ್ಪತ್ರೆ ಅತ್ತಾವರದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಮುಖ್ಯ ಅತಿಥಿ, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ - “ ಕೆಲವು ದಶಕಗಳಲ್ಲಿ ಕ್ಯಾನ್ಸರ್, ಹೃದ್ರೋಗ ಇತ್ಯಾದಿ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದ್ದು ಜನರು ಪ್ರಾಣ ಕಳೆದು ಕೊಳ್ಳುತ್ತಿರುವುದು ಕಳವಳಕಾರಿ, ಈ ಬಗ್ಗೆ ನೂತನ ಆವಿಷ್ಕಾರ, ಮತ್ತು ಚಿಕಿತ್ಸೆಗೆ ತಂತ್ರಜ್ಞಾನಗಳ ಆಗಮನ ಸ್ವಾಗತಾರ್ಹ,, ಕೆ.ಎಂ ಸಿ ಆಸ್ಪತ್ರೆ ಅತ್ತಾವರ ಸಮಾಜಕ್ಕೆ ನೀಡುವ ಕೊಡುಗೆ ಅಪಾರ - ಅರೋಗ್ಯ ಕ್ಷೇತ್ರದಲ್ಲಿ ಇದೊಂದು ಮಹತ್ತರವಾದ ಹೆಜ್ಜೆ - ಇದೆ ರೀತಿಯ ಇನ್ನು ಸಮಾಜಮುಖಿ ಕಾರ್ಯಗಳು ಕೆ.ಎಂ.ಸಿ ವತಿಯಿಂದ ನಡೆಯಲಿ" ಎಂದು ಶುಭ ಹಾರೈಸಿದರು.

ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಮಾತನಾಡುತ್ತಾ” ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೊಂದಿಗೆ ಹೊಸ ಹೊಸ ತಂತ್ರಜ್ಞಾನದ ಮುಖಾಂತರ ರೋಗದ ಮುಖ್ಯ ಕಾರಣ ಕಂಡು ಹಿಡಿಯಲು ಅನೇಕ ಸಂಶೋಧನೆಗಳ ಅಗತ್ಯವಿದೆ. ಕೆ.ಎಂ.ಸಿ ಆಸ್ಪತ್ರೆಯು ಈ ಕಾರ್ಯದಲ್ಲಿ ಮುಂಚೂಣಿಯಲ್ಲಿ ಇದ್ದು ಈ ನೂತನ ಟೂಬೀಮ್ ತಂತ್ರಜ್ಞಾನದ ಸಹಾಯದಿಂದ ಕ್ಯಾನ್ಸರ್ ಪತ್ತೆ ಹಾಗು ಚಿಕಿತ್ಸೆಯಿಂದ ರೋಗಿಗಳಿಗೆ ಗುಣಮಟ್ಟದ ಆರೈಕೆ ಹಾಗು ನಿಖರ ಚಿಕಿತ್ಸೆ ದೊರೆಯಲಿದೆ. ಇದರ ಸೌಲಭ್ಯವನ್ನು ಸಮಾಜದ ಎಲ್ಲ ಜನತೆ ಪಡೆದುಕೊಳ್ಳುವಂತಾಗಲಿ" ಎಂದು ತಿಳಿಸಿದರು.

Advertisement

ಮಂಗಳೂರು ನಗರ ದಕ್ಷಿಣ ಪ್ರಾಂತ್ಯದ ಶಾಸಕರಾದ ಶ್ರೀವೇದವ್ಯಾಸ ಕಾಮತ್ ಅವರು ಸಭೆಯಲ್ಲಿ ಮಾತನಾಡಿ “ಅರೋಗ್ಯ ಕ್ಷೇತ್ರದಲ್ಲಿ ಕೆಎಂಸಿಯು ಪ್ರಾಮಾಣಿಕ ಹಾಗು ಉತ್ತಮ ಸೇವೆ ನೀಡುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮೆಡಿಕಲ್ ಟೂರಿಸಂ ಸೌಲಭ್ಯಕ್ಕೆ ಮಹತ್ತರ ಅವಕಾಶವಿದ್ದು ಕೆಎಂಸಿ ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಗಮನಹರಿಸಲು ಒತ್ತು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಹೆ ಮಣಿಪಾಲದ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ವಹಿಸಿದ್ದರು. ಗೌರವಾನ್ವಿತ ಅಥಿತಿಗಳಾಗಿ ಲೆಫ್ಟಿನೆಂಟ್ ಜನರಲ್ ಡಾ. M. D. ವೆಂಕಟೇಶ್ ಉಪಕುಲಪತಿ MAHE, ಡಾ. ದಿಲೀಪ್ ಜಿ ನಾಯಕ್ ಪ್ರೊ ವೈಸ್ ಚಾನ್ಸೆಲರ್ (ಮಂಗಳೂರು ಕ್ಯಾಂಪಸ್), ಡಾ. ಆನಂದ್ ವೇಣುಗೋಪಾಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೋಧನಾ ಆಸ್ಪತ್ರೆಗಳು MAHE, ಡಾ.ಬಿ.ಉನ್ನಿಕೃಷ್ಣನ್ ಡೀನ್ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಂಗಳೂರು, ಡಿಎಚ್‌ಒ ಡಾ| ತಿಮ್ಮಯ್ಯ ವೆನಾಕ್ ಅಧೀಕ್ಷಕಿ ಡಾ| ಜೆಸಿಂತಾ ಮತ್ತು ಡಾ.ಜಾನ್ ರಾಮಪುರಂ, ವೈದ್ಯಕೀಯ ಅಧೀಕ್ಷಕರು, ಕೆಎಂಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರೇಡಿಯೇಶನ್ ಆಂಕಾಲಜಿ ವಿಭಾಗ ಮುಖ್ಯಸ್ಥ ಡಾ| ಎಂ.ಎಸ್. ಅತಿಯಮಾನ್ ಸ್ವಾಗತಿಸಿದರು. ಹಿರಿಯ ವೈದ್ಯರಾದ ಡಾ.ಬ್ಯಾನರ್ಜಿ ಧನ್ಯವಾದ ತಿಳಿಸಿದರು, ಡಾ.ರಾಬಿಯಾ ಮತ್ತು ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.

Advertisement
Tags :
Advertisement