For the best experience, open
https://m.newskannada.com
on your mobile browser.
Advertisement

ಕೆ.ಕೆ.ಎಂ.ಪಿ ಭವನದ ಮೊದಲನೇ ಅಂತಸ್ತಿನ ನೂತನ ಸಮುದಾಯ ಭವನ ಉದ್ಘಾಟನೆ

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಯೋಜಿಸಿದ ಮಂಗಳೂರಿನ ಬೊಂದೆಲ್ ಮಹಾತ್ಮನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ಕೆ.ಎಂ.ಪಿ ಭವನದ ಮೊದಲನೆ ಅಂತಸ್ತಿನ ನೂತನ ಸಮುದಾಯ ಭವನ  ಇಂದು (ಜನವರಿ 28) ಸಂಸದರಾದ ನಳೀನ್‌ ಕುಮಾರ್‌ ಕಟೀಲ್‌ ಅವರು ಉದ್ಘಾಟನೆಗೊಳಿಸಿದರು.
10:55 PM Jan 28, 2024 IST | Ashitha S
ಕೆ ಕೆ ಎಂ ಪಿ ಭವನದ ಮೊದಲನೇ ಅಂತಸ್ತಿನ ನೂತನ ಸಮುದಾಯ ಭವನ ಉದ್ಘಾಟನೆ

ಮಂಗಳೂರು: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಯೋಜಿಸಿದ ಮಂಗಳೂರಿನ ಬೊಂದೆಲ್ ಮಹಾತ್ಮನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ಕೆ.ಎಂ.ಪಿ ಭವನದ ಮೊದಲನೆ ಅಂತಸ್ತಿನ ನೂತನ ಸಮುದಾಯ ಭವನ  ಇಂದು (ಜನವರಿ 28) ಸಂಸದರಾದ ನಳೀನ್‌ ಕುಮಾರ್‌ ಕಟೀಲ್‌ ಅವರು ಉದ್ಘಾಟನೆಗೊಳಿಸಿದರು.

Advertisement

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಕೆಎಂಪಿ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಎಸ್‌ ಸುರೇಶ್‌ ರಾವ್‌ ಸಾಠೆ ವಹಿಸಿದ್ದರು. ಇನ್ನು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಮಹಾಪೌರರು ಮ.ನ.ಪಾ ಮಂಗಳೂರು ಹರಿನಾಥ್‌ ಬೋಂದೆಲ್‌, ಅಧ್ಯಕ್ಷರು ಪಟ್ಟಣ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಮ.ನ.ಪಾ ಮಂಗಳೂರು ಇದರ ಲೋಹಿತ್‌ ಅಮೀನ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ.ಸಿ ಬೆಂಗಳೂರು ಇದರ ಟಿ. ಆರ್‌. ಸುನೀಲ್‌ ರಾವ್‌ ಚವ್ಹಾಣ್., ರಾಜ್ಯ ಖಜಾಂಜಿ ಕೆ.ಕೆ.ಎಂ.ಪಿ ಬೆಂಗಳೂರು ಇದರ ಟಿ. ಆರ್‌ ವೆಂಕಟರಾವ್‌ ಚವ್ಹಾಣ್‌, ಎಸ್‌. ಆರ್‌ ಸಿಂಧ್ಯಾ ರಾಜ್ಯ ಗರ್ವನಿಂಗ್‌ ಕೌನ್ಸಿಲ್‌ ಕನ್ವಿನರ್‌ ಕೆ.ಕೆಎಂ.ಪಿ ಬೆಂಗಳೂರು, ಶ್ರೀ ವಾಮನ ಮುಳ್ಳಂಗೋಡು ಅಧ್ಯಕ್ಷರು, ಆರ್ಯ ಯಾನೆ ಮರಾಠ ಸಮಾಜ ಸಂಘ(ರಿ)ಮಂಗಲೂರು ಮತ್ತು ಕಾಸರಗೋಡು.

Advertisement

ಇನ್ನು ಕೆ.ಕೆ.ಎಂ.ಸಿ ಮಂಗಳೂರು ಇದರ ಜಿಲ್ಲಾಧ್ಯಕ್ಷರಾದ ಎ.ವಿ ಸುರೇಶ್‌ ರಾವ್‌ ಕರ್‌ ಮೋರೆ, ಚಂದ್ರಶೇಕರ್‌ ಚಂದ್ರಮಾನ್‌ ಪ್ರಧಾನ ಕಾರ್ಯದರ್ಶಿ, ನಾಗೇಶ್‌ ಎನ್‌ ಪಾಟೀಲ್‌ ಕೋಶಾಧಿಕಾರಿ, ಗುರುರಾಜ್‌ ಎನ್‌. ಧರ್ಮರಾಜ್‌ ಉಪಾಧ್ಯಕ್ಷರು, ಶ್ರೀಮತಿ ಭಾಗ್ಯಲಕ್ಷ್ಮಿ ಸುಧಾಕರ್‌ ಸಿಂಧ್ಯಾ ರಾಜ್ಯ ಸಂಘಟನ ಕಾರ್ಯದರ್ಶಿ, ಸಿ.ಎಚ್‌ ಮಾಧವ ರಾವ್‌ ಬಹುಮಾನ್‌ ಕ್ರೀಡಾ ಕಾರ್ಯದರ್ಶಿ

ನಾಗರಾಜ್‌ ಭೋಂಸ್ಲೆ ಸಂಘಟನೆ ಕಾರ್ಯದರ್ಶಿ, ಶ್ರೀಮತಿ ಸವಿತ ನಾಗೇಶ್‌ ಪಾಟೀಲ್‌ ಮಹಿಳಾ ಅಧ್ಯಕ್ಷರು, ಚಂಧ್ರಶೇಖರ್‌ ರಾವ್‌ ವೀಡೆ ತಾಲೂಕು ಅಧ್ಯಕಷರು, ಮೂಲ್ಕಿ, ಶ್ರೀಮತಿ ಶೀಲಾವತಿ ಪಿ ಪವಾರ್‌, ಶ್ರೀ ಮತಿ ಸಂಧ್ಯಾ ವಿ ವಾಗ್ಮಾನ್‌, ಸಮಿತಿ ಸದಸ್ಯರಾದ ಯಶ್‌ ಪಾಲ್‌ ಕೆ. ಬಹುಮಾನ್‌, ವೇಣುಗೋಪಾಲ್‌ ಕೆ. ಬಹುಮಾನ್‌, ಎಸ್ ಪುರುಷೋತ್ತಮ ರಾವ್‌ ಪವಾರ್‌, ಗೋಪಾಲಕೃಷ್ಣ ರಾವ್‌ ಲಾಡ್‌, ಶ್ರೀ ಮತಿ ವಿಶಾಲಾಕ್ಷಿ ರಾವ್‌ ವೀಡೆ ‌ ಉಪಸ್ಥಿತರಿದ್ದರು.

ಇನ್ನು ಈ ಪ್ರಯುಕ್ತ ಪುರುಷರ, ಮಹಿಳೆಯರ ಮತ್ತು ಮಕ್ಕಳ ಕ್ರೀಡಾಕೂಟವನ್ನು ಜ.13 ಮತ್ತು 14ರಂದು ಪಿ ಡಬ್ಲ್ಯೂ ಡಿ ಮೈದಾನ ಮಹಾನಗರ ಬಡಾವಣೆ, ಬೊಂದೆಲ್ ನಲ್ಲಿ ನಡೆದಿತ್ತು. ಇದರ ಅಂಗವಾಗಿ ಇಂದು ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

Advertisement
Tags :
Advertisement