For the best experience, open
https://m.newskannada.com
on your mobile browser.
Advertisement

ಅಫ್ಘಾನಿಸ್ತಾನದಲ್ಲಿ ಹೆಚ್ಚಿದ ಹಿಮಪಾತ; 15 ಮಂದಿ ಸಾವು

ಕಳೆದ ಮೂರು ದಿನಗಳಿಂದ ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಹಿಮಪಾತ ಹೆಚ್ಚಿದ್ದು 15 ಜನರನ್ನು ಬಲಿ ತೆಗೆದುಕೊಂಡಿದೆ ಹಾಗೂ 30 ಜನರಿಗೆ ಗಾಯವಾಗಿದೆ. ಅಲ್ಲದೆ ಬಾಲ್ಖ್ ಮತ್ತು ಫರಿಯಾಬ್ ಪ್ರಾಂತ್ಯಗಳಲ್ಲಿ ಪ್ರಾಣಿಗಳು ಕೂಡ ಸಾವನ್ನಪ್ಪಿದ್ದು, ಸುಮಾರು ಹತ್ತು ಸಾವಿರ ಪ್ರಾಣಿಗಳು ಸಾವನ್ನಪ್ಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
12:18 PM Mar 02, 2024 IST | Nisarga K
ಅಫ್ಘಾನಿಸ್ತಾನದಲ್ಲಿ ಹೆಚ್ಚಿದ ಹಿಮಪಾತ  15 ಮಂದಿ ಸಾವು
ಅಫ್ಘಾನಿಸ್ತಾನದಲ್ಲಿ ಹೆಚ್ಚಿದ ಹಿಮಪಾತ; 15 ಜನ ಸಾವು 30 ಜನರಿಗೆ ಗಾಯ

ಕಾಬೂಲ್:  ಕಳೆದ ಮೂರು ದಿನಗಳಿಂದ ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಹಿಮಪಾತ ಹೆಚ್ಚಿದ್ದು 15 ಜನರನ್ನು ಬಲಿ ತೆಗೆದುಕೊಂಡಿದೆ ಹಾಗೂ 30 ಜನರಿಗೆ ಗಾಯವಾಗಿದೆ. ಅಲ್ಲದೆ ಬಾಲ್ಖ್ ಮತ್ತು ಫರಿಯಾಬ್ ಪ್ರಾಂತ್ಯಗಳಲ್ಲಿ ಪ್ರಾಣಿಗಳು ಕೂಡ ಸಾವನ್ನಪ್ಪಿದ್ದು, ಸುಮಾರು ಹತ್ತು ಸಾವಿರ ಪ್ರಾಣಿಗಳು ಸಾವನ್ನಪ್ಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

ಈ ಬಗ್ಗೆ ಸಾರ್-ಇ-ಪುಲ್ ನಿವಾಸಿ ಅಬ್ದುಲ್ ಖಾದಿರ್ ಅವರು ಮಾಹಿತಿ ನೀಡಿದ್ದು ಜನಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ಆತಂಕ ಹೆಚ್ಚಾಗಿದೆ. ಮೂರು ದಿನದಿಂದ ಹಿಮಪಾತ ಹೆಚ್ಚಾಗಿದೆ. ಜಾನುವಾರುಗಳು ಕೂಡ ಸಾವನ್ನಪ್ಪುತ್ತಿದೆ. ಇದರಿಂದ ಇಲ್ಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಅನೇಕ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಇದರಿಂದ ಯಾವುದೇ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ತುರ್ತು ಸಹಾಯ ಬೇಕಿದೆ, ಇಲ್ಲಿಯ ಜನರಿಗೆ ಸಹಾಯ ಮಾಡಬೇಕು ಎಂದು ಮತ್ತೊಬ್ಬ ಅಲ್ಲಿಯ ನಿವಾಸಿ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಅಫ್ಘಾನಿಸ್ತಾನವು ವಿಶೇಷವಾಗಿ ಜಾನುವಾರು ಮಾಲೀಕರಿಗೆ ಪರಿಹಾರವನ್ನು ನೀಡಲು ವಿವಿಧ ಸಚಿವಾಲಯಗಳನ್ನು ಒಳಗೊಂಡ ಸಮಿತಿಯ ರಚನೆ ಮಾಡುವಂತೆ ಹೇಳಿದೆ. ಬಾಲ್ಖ್, ಜಾವ್ಜಾನ್, ಬದ್ಘಿಸ್, ಫರಿಯಾಬ್ ಮತ್ತು ಹೆರಾತ್ ಪ್ರಾಂತ್ಯಗಳಲ್ಲಿ ಜಾನುವಾರು ಮಾಲೀಕರ ಸಾಹಯ ಐವತ್ತು ಮಿಲಿಯನ್ ಅಫ್ಘಾನಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

Advertisement

ಎಲ್ಲಾ ಪ್ರಾಂತ್ಯಗಳಲ್ಲಿ ರಚಿಸಲಾದ ಸಮಿತಿಗಳ ತ್ವರಿತ ಪ್ರತಿಕ್ರಿಯೆಯನ್ನು ಮಾಡಲಿದೆ. ಈ ಸಮಿತಿಗಳು ನಿರ್ಬಂಧಿತ ರಸ್ತೆಗಳನ್ನು ತೆರೆಯಲು, ಸಂಕಷ್ಟಕ್ಕೆ ಒಳಗಾದ ಜನರಿಗೆ ಆಹಾರ ಮತ್ತು ಜಾನುವಾರಗಳಿಗೆ ಮೇವನ್ನು ವಿತರಿಸಲು ಹಾಗೂ ಭಾರೀ ಹಿಮಪಾತದಲ್ಲಿ ಸಿಲುಕಿರುವವರನ್ನು ಜನರನ್ನು ರಕ್ಷಿಸುವ ಕೆಲಸ ಮಾಡಲಿದೆ ಎಂದು ಕೃಷಿ, ನೀರಾವರಿ ಮತ್ತು ಜಾನುವಾರು ಸಚಿವಾಲಯದ ತಾಲಿಬಾನ್-ನೇಮಕ ವಕ್ತಾರ ಮಿಸ್ಬಾಹುದ್ದೀನ್ ಮುಸ್ತೀನ್ ಹೇಳಿದ್ದಾರೆ.

Advertisement
Tags :
Advertisement