For the best experience, open
https://m.newskannada.com
on your mobile browser.
Advertisement

ಇಂಗ್ಲೆಂಡ್‌ 145ಕ್ಕೆ ಆಲೌಟ್; ಭಾರತಕ್ಕೆ 152 ರನ್‌ಗಳ ಗೆಲುವಿನ ಗುರಿ

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಅಂತಿಮ ಘಟಕ್ಕೆ ಬಂದಿದ್ದು ಭಾರತ ಈ ಟೆಸ್ಟ್‌ ಪಂದ್ಯವನ್ನು ಗೆಲ್ಲಬೇಕಾದರೆ ಇನ್ನು 2 ದಿನಗಳಲ್ಲಿ 152 ರನ್‌ ಪೇರಿಸಬೇಕಿದೆ. ಭಾರತದ ಸ್ಪಿನ್ನರ್‌ಗಳ ದಾಳಿಗೆ ನಲುಗಿದ ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ನಲ್ಲಿ 145 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು.
05:38 PM Feb 25, 2024 IST | Ashitha S
ಇಂಗ್ಲೆಂಡ್‌ 145ಕ್ಕೆ ಆಲೌಟ್  ಭಾರತಕ್ಕೆ 152 ರನ್‌ಗಳ ಗೆಲುವಿನ ಗುರಿ

ರಾಂಚಿ: ಭಾರತ ಮತ್ತು ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಅಂತಿಮ ಘಟಕ್ಕೆ ಬಂದಿದ್ದು ಭಾರತ ಈ ಟೆಸ್ಟ್‌ ಪಂದ್ಯವನ್ನು ಗೆಲ್ಲಬೇಕಾದರೆ ಇನ್ನು 2 ದಿನಗಳಲ್ಲಿ 152 ರನ್‌ ಪೇರಿಸಬೇಕಿದೆ. ಭಾರತದ ಸ್ಪಿನ್ನರ್‌ಗಳ ದಾಳಿಗೆ ನಲುಗಿದ ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ನಲ್ಲಿ 145 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು.

Advertisement

ಅಶ್ವಿನ್‌ 5, ಕುಲದೀಪ್‌ ಯಾದವ್‌ 4 ಹಾಗೂ ಜಡೇಜ 1 ವಿಕೆಟ್‌ ಪಡೆದರು. ಭಾರತ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದು ರೋಹಿತ್‌ ಶರ್ಮಾ 24, ಜೈಸ್ವಾಲ್‌ 16 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಭಾರತ ಈ ಪಂದ್ಯವನ್ನು ಗೆಲ್ಲಬೇಕಾದರೆ ಉಳಿದ ಎರಡು ದಿನಗಳಲ್ಲಿ 152 ರನ್‌ ಹೊಡೆಯಬೇಕಿದೆ.

ಇನ್ನು ಭಾರತದ ಪರ ಮಾರಕ ದಾಳಿ ನಡೆಸಿದ ರವಿಚಂದ್ರನ್ ಅಶ್ವಿನ್ ಮತ್ತೊಂದು 5 ವಿಕೆಟ್​ಗಳ ಸಾಧನೆ ಮಾಡಿದರೆ, ಕುಲ್ದೀಪ್ ಯಾದವ್ ಕೂಡ 4 ವಿಕೆಟ್ ಪಡೆದರು. ಉಳಿದೊಂದು ವಿಕೆಟ್ ರವೀಂದ್ರ ಜಡೇಜಾ ಪಾಲಾಯಿತು.

Advertisement

ಇಂಗ್ಲೆಂಡ್ ನೀಡಿರುವ 192 ರನ್​ಗಳ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ಮೂರನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ  40 ರನ್ ಕಲೆಹಾಕಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಕ್ರಮವಾಗಿ 24, 16 ರನ್ ಕಲೆಹಾಕಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತಕ್ಕೆ ಗೆಲ್ಲಲು ಇನ್ನು 152 ರನ್​ಗಳ ಅಗತ್ಯವಿದೆ.

Advertisement
Tags :
Advertisement