For the best experience, open
https://m.newskannada.com
on your mobile browser.
Advertisement

ರೋಹಿತ್ ಸಿಡಿಲಬ್ಬರಕ್ಕೆ ಬಾಬರ್, ಗೇಲ್ ದಾಖಲೆ ಉಡೀಸ್

ಧರ್ಮಶಾಲಾದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್​ ಪಂದ್ಯದ ಮೊದಲೆರಡು ದಿನ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡವನ್ನು 218 ರನ್​ಗಳಿಗೆ ಆಲೌಟ್ ಮಾಡಿದ ರೋಹಿತ್ ಪಡೆ, ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ.
04:24 PM Mar 08, 2024 IST | Ashitha S
ರೋಹಿತ್ ಸಿಡಿಲಬ್ಬರಕ್ಕೆ ಬಾಬರ್  ಗೇಲ್ ದಾಖಲೆ ಉಡೀಸ್

ಧರ್ಮಶಾಲಾದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್​ ಪಂದ್ಯದ ಮೊದಲೆರಡು ದಿನ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡವನ್ನು 218 ರನ್​ಗಳಿಗೆ ಆಲೌಟ್ ಮಾಡಿದ ರೋಹಿತ್ ಪಡೆ, ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ.

Advertisement

ಭಾರತದ ಪರ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ತಂಡದ ಮುನ್ನಡೆಯನ್ನು 100 ರ ಗಡಿ ದಾಟುವಂತೆ ಮಾಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಶತಕ ಬಾರಿಸಿದ ನಾಯಕ ರೋಹಿತ್ ಶರ್ಮಾಗೆ ಟೆಸ್ಟ್ ಕ್ರಿಕೆಟ್​ನಲ್ಲಿ 12ನೇ ಶತಕವಾಗಿದೆ.

ಒಟ್ಟಾರೆಯಾಗಿ ರೋಹಿತ್ ಏಕದಿನದಲ್ಲಿ 31 ಶತಕ ಮತ್ತು ಅಂತರಾಷ್ಟ್ರೀಯ ಟಿ20 ಯಲ್ಲಿ 5 ಶತಕಗಳನ್ನು ಬಾರಿಸಿದ್ದಾರೆ. ಈ ಟೆಸ್ಟ್ ಶತಕದೊಂದಿಗೆ ರೋಹಿತ್ ಶರ್ಮಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರನ್ನು ಹಿಂದಿಕ್ಕಿ ಸ್ಟೀವ್ ಸ್ಮಿತ್‌ ದಾಖಲೆಯುನ್ನು ಸರಿಗಟ್ಟಿದ್ದಾರೆ.

Advertisement

ಮೊದಲ ಇನ್ನಿಂಗ್ಸ್​ನಲ್ಲಿ 54 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 3 ಸಿಕ್ಸರ್ ಮತ್ತು 13 ಬೌಂಡರಿಗಳ ನೆರವಿನಿಂದ ಶತಕ ಗಳಿಸಿದರು. ಈ ಸರಣಿಯಲ್ಲಿ ರೋಹಿತ್ ಗಳಿಸಿದ ಎರಡನೇ ಶತಕ ಇದಾಗಿದೆ. ಇದಕ್ಕೂ ಮುನ್ನ ವಿಶಾಖಪಟ್ಟಣಂನಲ್ಲಿಯೂ ರೋಹಿತ್ ಶತಕ ಬಾರಿಸಿದ್ದರು. ಅಲ್ಲದೆ ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರೋಹಿತ್ ಅವರ ಒಂಬತ್ತನೇ ಶತಕವಾಗಿದೆ.

ಇನ್ನು ಸ್ಟೀವ್ ಸ್ಮಿತ್ 45 ಪಂದ್ಯಗಳಲ್ಲಿ 9 ಶತಕ ಸಿಡಿಸಿದ್ದರೆ, ರೋಹಿತ್ 32 ಪಂದ್ಯಗಳಲ್ಲಿ 9 ಶತಕಗಳ ಪೂರೈಸಿದ್ದಾರೆ. ಪಾಕಿಸ್ತಾನದ ಬಾಬರ್ ಆಝಂ 29 ಪಂದ್ಯಗಳಲ್ಲಿ 8 ಶತಕಗಳನ್ನು ಬಾರಿಸಿದ್ದು, ಇದೀಗ ರೋಹಿತ್, ಬಾಬರ್ ದಾಖಲೆಯನ್ನು ಮುರಿದಿದ್ದಾರೆ.

ಅಲ್ಲದೆ ವೆಸ್ಟ್ ಇಂಡೀಸ್‌ನ ದಂತಕಥೆ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದ್ದಾರೆ. ಕ್ರಿಸ್ ಗೇಲ್ ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 42 ಶತಕಗಳನ್ನು ಸಿಡಿಸಿದ್ದರೆ, ರೋಹಿತ್ ಶರ್ಮಾ ಖಾತೆಯಲ್ಲಿ 43 ಶತಕಗಳು ದಾಖಲಾಗಿವೆ.

Advertisement
Tags :
Advertisement