For the best experience, open
https://m.newskannada.com
on your mobile browser.
Advertisement

ವಿಶ್ವದ ಕ್ಷಯರೋಗ ರಾಜಧಾನಿಯಾಗುತ್ತಾ ಭಾರತ: ದೇಶದಲ್ಲಿ ಎಷ್ಟು ಕ್ಷಯರೋಗಿಗಳಿದ್ದಾರೆ ಗೊತ್ತಾ

ವಿಶ್ವದಲ್ಲಿ ಅತಿಹೆಚ್ಚು ಟಿಬಿ ಪ್ರಕರಣಗಳು ವರದಿಯಾಗುವ ಮೂಲಕ ಭಾರತ ವಿಶ್ವದ ಕ್ಷಯರೋಗ (ಟಿಬಿ) ರಾಜಧಾನಿಯಾಗುವ ಆತಂಕ ಎದುರಾಗಿದೆ.
03:32 PM Nov 09, 2023 IST | Ashika S
ವಿಶ್ವದ ಕ್ಷಯರೋಗ ರಾಜಧಾನಿಯಾಗುತ್ತಾ ಭಾರತ  ದೇಶದಲ್ಲಿ ಎಷ್ಟು ಕ್ಷಯರೋಗಿಗಳಿದ್ದಾರೆ ಗೊತ್ತಾ

ದೆಹಲಿ: ವಿಶ್ವದಲ್ಲಿ ಅತಿಹೆಚ್ಚು ಟಿಬಿ ಪ್ರಕರಣಗಳು ವರದಿಯಾಗುವ ಮೂಲಕ ಭಾರತ ವಿಶ್ವದ ಕ್ಷಯರೋಗ (ಟಿಬಿ) ರಾಜಧಾನಿಯಾಗುವ ಆತಂಕ ಎದುರಾಗಿದೆ.

Advertisement

ವಿಶ್ವದ ಒಟ್ಟು ಟಿಬಿ ಪ್ರಕರಣಗಳಲ್ಲಿ ಭಾರತದಲ್ಲಿ ಶೇಕಡಾ 27 ರಷ್ಟು ಪ್ರಕರಣಗಳಿವೆ. 28.2 ಲಕ್ಷ ಪ್ರಕರಣಗಳಿದ್ದು, ಅವುಗಳಲ್ಲಿ ಶೇ 12ರಷ್ಟು (3,42,000 ಜನರು) ಈ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ ಎಂದು ಮಂಗಳವಾರ ಬಿಡುಗಡೆಯಾದ ವರದಿ ತಿಳಿಸಿದೆ.

30 ರಾಷ್ಟ್ರಗಳು ವಿಶ್ವದ ಶೇ.87 ರಷ್ಟು ಟಿಬಿ ಪ್ರಕರಣಗಳಿಗೆ ಕಾರಣವೆಂದು ವರದಿ ಬಹಿರಂಗಪಡಿಸಿದೆ. ಇಂಡೋನೇಷ್ಯಾ (ಶೇ 10), ಚೀನಾ (ಶೇ 7.1), ಫಿಲಿಪೈನ್ಸ್ (ಶೇ 7.0), ಪಾಕಿಸ್ತಾನ (ಶೇ 5.7), ನೈಜೀರಿಯಾ (ಶೇ 4.5), ಬಾಂಗ್ಲಾದೇಶ (ಶೇ 3.6), ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಶೇ 3.0) ನಂತರದ ಸ್ಥಾನದಲ್ಲಿದೆ.

Advertisement

ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಭಾರತವು ಪ್ರಗತಿ ಸಾಧಿಸಿದೆ ಎಂದು ವರದಿ ತೋರಿಸುತ್ತದೆ. 2015 ರಲ್ಲಿ 1,00,000 ಜನರ ಪೈಕಿ 258 ರೋಗಿಗಳಿದ್ದರೆ, 2022 ರಲ್ಲಿ 1,00,000 ಜನರಿಗೆ 199 ಕ್ಕೆ ರೋಗ ಪ್ರಕರಣಗಳಿವೆ. ಆದರೆ ದರವು ಇನ್ನೂ ಜಾಗತಿಕ ಸರಾಸರಿ 100,000 ಕ್ಕೆ 133 ಕ್ಕಿಂತ ಹೆಚ್ಚಾಗಿದೆ.

Advertisement
Tags :
Advertisement