ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಾರತ ತಂಡಕ್ಕೆ ಅನುಕೂಲಕರ ಪಿಚ್, ಅದರ ಬಗ್ಗೆ ನಾವು ದೂರುವುದಿಲ್ಲ: ಇಂಗ್ಲೆಂಡ್ ತಂಡ

ಜ.೨೫ರಿಂದ ಆರಂಭವಾಗಲಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಪ್ರಯುಕ್ತ ಐದು ಪಂದಗಳನ್ನು ಆಡಲು ಇಂಗ್ಲೆಂಡ್ ತಂಡ ಭಾರತಕ್ಕೆ ಬರಲಿದೆ. ಪಂದ್ಯವು ತಮ್ಮದೇ ದೇಶದಲ್ಲಿ ನಡೆಯಲಿರುವುದರಿಂದ ಭಾರತ ತಂಡಕ್ಕೆ ಇದು ಲಾಭದಾಯಕವೆಂದು ಇಂಗ್ಲೆಂಡ್ ತಂಡ ತಕರಾರು ತೆಗೆದಿದೆ.
09:02 PM Jan 16, 2024 IST | Maithri S

ಜ.೨೫ರಿಂದ ಆರಂಭವಾಗಲಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಪ್ರಯುಕ್ತ ಐದು ಪಂದಗಳನ್ನು ಆಡಲು ಇಂಗ್ಲೆಂಡ್ ತಂಡ ಭಾರತಕ್ಕೆ ಬರಲಿದೆ. ಪಂದ್ಯವು ತಮ್ಮದೇ ದೇಶದಲ್ಲಿ ನಡೆಯಲಿರುವುದರಿಂದ ಭಾರತ ತಂಡಕ್ಕೆ ಇದು ಲಾಭದಾಯಕವೆಂದು ಇಂಗ್ಲೆಂಡ್ ತಂಡ ತಕರಾರು ತೆಗೆದಿದೆ.

Advertisement

ಸ್ಪಿನ್ ಬೌಲರ್ ಗಳಿಗೆ ಅನುಕೂಲವಾಗುವಂತಹ ಪಿಚ್ ತಯಾರಿಸಲಿರುವುದು ನಮಗೆ ತಿಳಿದಿರುವ ಕಾರಣ ಮೊದಲ ದಿನದಿಂದಲೇ ಚೆಂಡು ತಿರುಗಿದರೂ ನಾವು ಆ ಬಗ್ಗೆ ಭಾರತದ ವಿರುದ್ಧ ದೂರು ಕೊಡುವುದಿಲ್ಲ ಎಂದು ಇಂಗ್ಲೆಂಡ್ ತಂಡದ ಉಪನಾಯಕ ಒಲಿ ಪೋಪ್ ಹೇಳಿಕೆ ನೀಡಿದ್ದಾರೆ.

ಇಂಗ್ಲೆಂಡ್ ನಲ್ಲಿ ಸೀಮರ್ ಗಳಿಗೆ ಅನುಕೂಲವಾಗುವ ಪಿಚ್ ಹೊಂದಿದ್ದೇವೆ. ಹೀಗಿರುವಾಗ ಭಾರತ ಅವರ ಸ್ಪಿನ್ನರ್ ಗಳಿಗೆ ಸಹಕಾರಿಯಾಗುವಂತೆ ಟ್ರ್ಯಾಕ್ ನಿರ್ಮಿಸುವುದರಲ್ಲಿ ಆಶ್ಚರ್ಯವಿಲ್ಲ ಹಾಗು ನಾವು ಆ ಬಗ್ಗೆ ದೂರುವುದಿಲ್ಲ. ಇದರಿಂದಾಗಿ ನಮ್ಮ ರನ್ ಕಡಿಮೆಯಾಗಬಹುದು. ನಾವು ಅದಕ್ಕೆ ತಕ್ಕ ತಯಾರಿ ಮಾಡಿಕೊಳ್ಳಲಿದ್ದೇವೆ ಎಂದು ಪೋಪ್ ಹೇಳಿದ್ದಾರೆ.

Advertisement

ಪಂದ್ಯ ಶುರುವಾಗುವ ಮೊದಲೇ ಭಾರತದ ವಿರುದ್ಧ ದೂರು ಕೊಡುವುದಿಲ್ಲ ಎಂದು ಹೇಳುತ್ತ ಇಂಗ್ಲೆಂಡ್ ತಂಡ ಹೊಸ ತಗಾದೆ ತೆಗೆದಿದೆ. ಅವರ ಈ ಹೇಳಿಕೆಯಿಂದಾಗಿ ಇಂಗ್ಲೆಂಡ್-ಭಾರತ ತಂಡಗಳ ನಡುವೆ ರೋಚಕ ಪೈಪೋಟಿ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.

ಜ.೨೫ರಿಂದ ಶುರುವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯ ಹೈದರಾಬಾದ್‌ ​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದ್ದು, ಎರಡನೆಯ ಪಂದ್ಯವನ್ನು ವಿಶಾಖಪಟ್ಟಣಂನಲ್ಲಿರುವ ವೈಎಸ್​ಆರ್​ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಮೂರನೇ ಪಂದ್ಯ ರಾಜ್​ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂನಲ್ಲಿ, ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯ ಜೆಎಸ್​ಸಿಎ ಸ್ಟೇಡಿಯಂನಲ್ಲಿ ಹಾಗು ಕೊನೆಯ ಟೆಸ್ಟ್ ಪಂದ್ಯ ಧರ್ಮಶಾಲಾದ ಹೆಚ್.ಪಿ.ಸಿ.ಎ ಸ್ಟೇಡಿಯಂನಲ್ಲಿ ಜರುಗಲಿದೆ.

Advertisement
Tags :
englandindiaLatestNewsNewsKannadaOli popetest series
Advertisement
Next Article