For the best experience, open
https://m.newskannada.com
on your mobile browser.
Advertisement

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ ಗೆದ್ದು ಬೀಗಿದ ಟೀಂ ಇಂಡಿಯಾ

ಇಂಗ್ಲೆಂಡ್​ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ ಗೆದ್ದು ಬೀಗಿದೆ. ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡವು ಯಶಸ್ವಿ ಜೈಸ್ವಾಲ್ ಅವರ ದ್ವಿಶತಕದ ನೆರವಿನೊಂದಿಗೆ 10 ವಿಕೆಟ್ ಕಳೆದುಕೊಂಡು 396 ರನ್​ಗಳನ್ನು ಬಾರಿಸಿತ್ತು.
03:03 PM Feb 05, 2024 IST | Ashitha S
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ ಗೆದ್ದು ಬೀಗಿದ ಟೀಂ ಇಂಡಿಯಾ

ವಿಶಾಖಪಟ್ಟಣಂ: ಇಂಗ್ಲೆಂಡ್​ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ ಗೆದ್ದು ಬೀಗಿದೆ. ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡವು ಯಶಸ್ವಿ ಜೈಸ್ವಾಲ್ ಅವರ ದ್ವಿಶತಕದ ನೆರವಿನೊಂದಿಗೆ 10 ವಿಕೆಟ್ ಕಳೆದುಕೊಂಡು 396 ರನ್​ಗಳನ್ನು ಬಾರಿಸಿತ್ತು.

Advertisement

ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ ಎಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು 253 ರನ್​ಗಳನ್ನು ಗಳಿಸಿ 143 ರನ್​ಗಳ ಹಿನ್ನಡೆಯನ್ನು ಅನುಭಿಸಿತ್ತು. ಇತ್ತ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಗಿಲ್ ಅವರ ಶತಕದ ನೆರವಿನೊಂದಿಗೆ 255 ರನ್​ಗಳಿಸಿತ್ತು. ಈ ಮೂಲಕ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 398 ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು.

399 ರನ್​​ಗಳ ಗುರಿಯನ್ನು ಇಟ್ಟುಕೊಂಡು ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದ ಇಂಗ್ಲೆಂಡ್​, ನಾಲ್ಕನೇ ದಿನದ ಮಧ್ಯಾಹ್ನದ ವೇಳೆಗೆ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡು 292 ರನ್​ಗಳಿಸಿ ಸೋಲಿಗೆ ಶರಣಾಯ್ತು. ಈ ಮೂಲಕ ಭಾರತ ತಂಡವು 106 ರನ್​ಗಳ ಭರ್ಜರಿ ಗೆಲುವು ಸಾಧಿಸಿತು.​​

Advertisement

Advertisement
Tags :
Advertisement