For the best experience, open
https://m.newskannada.com
on your mobile browser.
Advertisement

ಮಾಸ್ಕೋಗೆ ಹೊರಟಿದ್ದ ಭಾರತೀಯ ವಿಮಾನ ಅಫ್ಘಾನ್‌ ನಲ್ಲಿ ಪತನ !

ಭಾರತದಿಂದ ಮಾಸ್ಕೋಗೆ ತೆರಳುತ್ತಿದ್ದ ವಿಮಾನವೊಂದು ಅಫ್ಘಾನಿಸ್ತಾನದ ಬಡಾಖಾನ್‌ನ ವಖಾನ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಅಫ್ಘಾನಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
01:23 PM Jan 21, 2024 IST | Gayathri SG
ಮಾಸ್ಕೋಗೆ ಹೊರಟಿದ್ದ ಭಾರತೀಯ ವಿಮಾನ ಅಫ್ಘಾನ್‌ ನಲ್ಲಿ ಪತನ

ಕಾಬೂಲ್‌: ಭಾರತದಿಂದ ಮಾಸ್ಕೋಗೆ ತೆರಳುತ್ತಿದ್ದ ವಿಮಾನವೊಂದು ಅಫ್ಘಾನಿಸ್ತಾನದ ಬಡಾಖಾನ್‌ನ ವಖಾನ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಅಫ್ಘಾನಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

Advertisement

ಬಡಾಖಾನ್‌ನಲ್ಲಿನ ತಾಲಿಬಾನ್‌ನ ಮಾಹಿತಿ ಮತ್ತು ಸಂಸ್ಕೃತಿಯ ಮುಖ್ಯಸ್ಥರು ಘಟನೆಯನ್ನು ದೃಢಪಡಿಸಿದ್ದಾರೆ, ಪ್ರಯಾಣಿಕ ವಿಮಾನವು ಪ್ರಾಂತ್ಯದ ಕರನ್, ಮಂಜನ್ ಮತ್ತು ಜಿಬಾಕ್ ಜಿಲ್ಲೆಗಳನ್ನು ವ್ಯಾಪಿಸಿರುವ ಟೋಪ್‌ಖಾನೆ ಪರ್ವತದಲ್ಲಿ ಪತನಗೊಂಡಿದೆ ಎಂದು ಹೇಳಿದ್ದಾರೆ.ಪ್ರಸ್ತುತ, ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕುರಿತು ಮಾಹಿತಿ ತಿಳಿದಿಲ್ಲ.

ಶನಿವಾರ ರಾತ್ರಿ ರಾಡಾರ್‌ನಿಂದ ಕಣ್ಮರೆಯಾದ ವಿಮಾನವು ಟೋಪ್‌ಖಾನಾ ಪ್ರದೇಶದ ಎತ್ತರದ ಪರ್ವತಗಳಲ್ಲಿ ಪತನಗೊಂಡಿದೆ ಎಂದು ಬಡಾಕ್ಷಣ್‌ನಲ್ಲಿರುವ ತಾಲಿಬಾನ್‌ನ ಪೊಲೀಸ್ ಕಮಾಂಡ್ ಹೇಳಿದೆ.

Advertisement

ಅಫ್ಘಾನಿಸ್ತಾನದಲ್ಲಿ ಈಗಷ್ಟೇ ಸಂಭವಿಸಿದ ವಿಮಾನ ಅಪಘಾತವು ಭಾರತೀಯ ನಿಗದಿತ ವಿಮಾನವಲ್ಲ ಅಥವಾ ನಿಗದಿತವಲ್ಲದ (ಎನ್ಎಸ್ಒಪಿ) / ಚಾರ್ಟರ್ ವಿಮಾನವಲ್ಲ. ಇದು ಮೊರೊಕನ್ ನೋಂದಾಯಿತ ಸಣ್ಣ ವಿಮಾನವಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಅಂತ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಇದು ಭಾರತೀಯ ವಿಮಾನವಲ್ಲ ಎಂದು ಡಿಜಿಸಿಎ ಅಧಿಕಾರಿ ದೃಢಪಡಿಸಿದ್ದಾರೆ. ಬಡಾಕ್ಷನ್ ಪ್ರಾಂತ್ಯದ ಕುರಾನ್-ಮುಂಜನ್ ಮತ್ತು ಜಿಬಕ್ ಜಿಲ್ಲೆಗಳ ಜೊತೆಗೆ ಟೋಪ್ಖಾನಾ ಪರ್ವತಗಳಲ್ಲಿ ಅಪಘಾತಕ್ಕೀಡಾದ ವಿಮಾನವು ಮೊರೊಕನ್ ನೋಂದಾಯಿತ ಡಿಎಫ್ 10 ವಿಮಾನವಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement
Tags :
Advertisement