For the best experience, open
https://m.newskannada.com
on your mobile browser.
Advertisement

ಭಾರತೀಯ ಮೂಲದ ಬಾಲಕಿಗೆ ‘ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ’ ಪಟ್ಟ

ಪ್ರತಿಷ್ಠಿತ ಜಾನ್ಸ್ ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ನ “ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ” ಪಟ್ಟಿಯಲ್ಲಿ ಒಂಬತ್ತು ವರ್ಷದ ಭಾರತೀಯ-ಅಮೆರಿಕನ್ ಶಾಲಾ ವಿದ್ಯಾರ್ಥಿನಿ ಪ್ರೀಶಾ ಚಕ್ರವರ್ತಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
01:17 PM Jan 16, 2024 IST | Ashitha S
ಭಾರತೀಯ ಮೂಲದ ಬಾಲಕಿಗೆ ‘ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ’ ಪಟ್ಟ

ವಾಷಿಂಗ್ಟನ್‌: ಪ್ರತಿಷ್ಠಿತ ಜಾನ್ಸ್ ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ನ “ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ” ಪಟ್ಟಿಯಲ್ಲಿ ಒಂಬತ್ತು ವರ್ಷದ ಭಾರತೀಯ-ಅಮೆರಿಕನ್ ಶಾಲಾ ವಿದ್ಯಾರ್ಥಿನಿ ಪ್ರೀಶಾ ಚಕ್ರವರ್ತಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

Advertisement

90 ದೇಶಗಳಲ್ಲಿ ಸುಮಾರು 16 ಸಾವಿರ ವಿದ್ಯಾರ್ಥಿಗಳಲ್ಲಿ ಪ್ರೀಶಾ ‘ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ’ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಪ್ರೀಶಾ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ವಾರ್ಮ್ ಸ್ಪ್ರಿಂಗ್ ಎಲಿಮೆಂಟರಿ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿ. 2023ರಲ್ಲಿ ಪರೀಕ್ಷೆಯನ್ನು ಬರೆದಿದ್ದರು.

Advertisement

“ಇದು ಕೇವಲ ಒಂದು ಬರವಣಿಗೆಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಗುರುತಿಸುವುದಿಲ್ಲ,ಬದಲಾಗಿ ಅವರ ಕುತೂಹಲ ಮತ್ತು ಕಲಿಕೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ” ಎಂದು CTY ನ ಕಾರ್ಯನಿರ್ವಾಹಕ ನಿರ್ದೇಶಕ ಆಮಿ ಶೆಲ್ಟನ್ ಹೇಳಿದ್ದಾರೆ.

ಇನ್ನು ಪ್ರೀಶಾ ವಿಶ್ವದಲ್ಲೇ ಅತ್ಯಂತ ಹಳೆಯ ಉನ್ನತ-ಐಕ್ಯೂ ಸೊಸೈಟಿಯಾದ ಮೆನ್ಸಾ ಫೌಂಡೇಶನ್‌ನ ಜೀವಿತಾವಧಿಯ ಸದಸ್ಯರಾಗಿದ್ದಾರೆ.

ಈ ಸದಸ್ಯತ್ವ ಸಿಗುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ಐಕ್ಯೂ ಅಥವಾ ಅನುಮೋದಿತ ಬುದ್ದಿಮತ್ತೆ ಪರೀಕ್ಷೆಯಲ್ಲಿ ಶೇ. 98 ಅಥವಾ ಹೆಚ್ಚಿನ ಅಂಕಗಳನ್ನು ಪಡೆದವರಿಗೆ ಮಾತ್ರ ಈ ಸದಸ್ಯತ್ವ ನೀಡಲಾಗುತ್ತದೆ. ಪ್ರಸ್ತುತ ಈ ಸಾಧನೆಯನ್ನು ಭಾರತೀಯ ಮೂಲದ ಅಮೇರಿಕಾದ ಬಾಲಕಿ 9 ವರ್ಷದ ಪ್ರೀಶಾ ಚಕ್ರವರ್ತಿ ಮುಡಿಗೇರಿಸಿಕೊಂಡಿದ್ದಾರೆ.

Advertisement
Tags :
Advertisement