For the best experience, open
https://m.newskannada.com
on your mobile browser.
Advertisement

ಲಂಡನ್‌ ಭೀಕರ ಅಪಘಾತ : ಭಾರತೀಯ ಮೂಲದ ಉದ್ಯೋಗಿ ದಾರುಣ ಸಾವು

ಭಾರತೀಯ ಮೂಲದ ನೀತಿಆಯೋಗದ ಮಾಜಿ ಉದ್ಯೋಗಿ ಚೀಸ್ತಾ ಕೊಚಾರ್ (33) ಲಂಡನ್‌ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಸೈಕಲ್‌ನಲ್ಲಿ ಮನೆಗೆ ತೆರಳುವಾಗ ಈ ಘಟನೆ ಸಂಭವಿಸಿದೆ.ಕಳೆದ ಮಾರ್ಚ್ 19 ರಂದು ಲಂಡನ್‌ನಲ್ಲಿ ಈ ದಾರುಣ ಘಟನೆ ನೆಡದಿದೆ.
01:10 PM Mar 25, 2024 IST | Nisarga K
ಲಂಡನ್‌ ಭೀಕರ ಅಪಘಾತ   ಭಾರತೀಯ ಮೂಲದ ಉದ್ಯೋಗಿ ದಾರುಣ ಸಾವು
ಲಂಡನ್‌ ಭೀಕರ ಅಪಘಾತ : ಭಾರತೀಯ ಮೂಲದ ಉದ್ಯೋಗಿ ದಾರುಣ ಸಾವು

ಲಂಡನ್‌: ಭಾರತೀಯ ಮೂಲದ ನೀತಿಆಯೋಗದ ಮಾಜಿ ಉದ್ಯೋಗಿ ಚೀಸ್ತಾ ಕೊಚಾರ್ (33) ಲಂಡನ್‌ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಸೈಕಲ್‌ನಲ್ಲಿ ಮನೆಗೆ ತೆರಳುವಾಗ ಈ ಘಟನೆ ಸಂಭವಿಸಿದೆ.ಕಳೆದ ಮಾರ್ಚ್ 19 ರಂದು ಲಂಡನ್‌ನಲ್ಲಿ ಈ ದಾರುಣ ಘಟನೆ ನೆಡದಿದೆ.

Advertisement

ಪತಿ, ಪತ್ನಿ ಇಬ್ಬರು ಸೈಕ್‌ಲಿಂಗ್‌ ಮಾಡುವವೇಳೆ ಟ್ರಕ್‌ ಗುದ್ದಿದ ಪರಿಣಾಮ ಚೀಸ್ತಾ ಕೊಚಾರ್ ಸ್ಥಳದಲ್ಲೇ ಸಾವನಪ್ಪಿದ್ದಾರೆ.ಅಪಘಾತವಾದ ತಕ್ಷಣವೇ ಪತ್ನಿಯ ನೆರವಿಗೆ ಪತಿ ಪ್ರಶಾಂತ್ ಧಾವಿಸಿದ್ದಾರೆ.ಆದರೆ ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿತ್ತು.

ಲಂಡನ್ ಸ್ಕೂಲ್ ಆಫ್ ಎಕಾನಿಮಿಕ್ಸ್‌ನಲ್ಲಿ PhD ಮಾಡಲು ಬಂದಿದ್ದರು. ಚೀಸ್ತಾ ಕೊಚಾರ್ ಅವರು ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ ಎಸ್‌ಪಿ ಕೊಚಾರ್ ಅವರು ಮಗಳು. ನೀತಿ ಆಯೋಗದ ಮಾಜಿ ಸಿಇಓ ಅಮಿತಾಬ್‌ ಕಾಂತ್‌ ಅವರು ಈ ಅಪಘಾತದ ಬಗ್ಗೆ ಸೋಷಿಯಲ್ ಮೀಡಿಯಾ X ನಲ್ಲಿ ತಮ್ಮ ನೋವು ಹಂಚಿಕೊಂಡಿದ್ದಾರೆ.

Advertisement

Advertisement
Tags :
Advertisement